ವೆಬ್ ವಾಟ್ಸಪ್ (Web Whatsapp) ಬಳಸುವವರಿಗೆ ಈಗ ಅನುಕೂಲವಾಗುವಂತಹ ವೈಶಿಷ್ಟ್ಯ ಬಂದಿದ್ದು, ವಾಟ್ಸಪ್ ಈಗ ಒಂದು ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ ಎಂಬ ಸುದ್ದಿ ಹಬ್ಬಿದೆ. ಜನಪ್ರಿಯ ವಾಟ್ಸಾಪ್ ಈಗಾಗಲೇ ಎಷ್ಟೊಂದು ಹೊಸ ಹೊಸ ಫೀಚರ್ ಗಳನ್ನು ಬಿಡುತ್ತ ಬಂದಿದೆ ಈಗ ಅರಿದಾಡುವ ಸುದ್ದಿಯ ಪ್ರಕಾರ ಈ ಮೆಸೇಜಿಂಗ್ ಅಪ್ಲಿಕೇಶನ್ ಮತ್ತೊಂದು ಫೀಚರ್ ಅನ್ನು ಪರಿಚಯಿಸಲು ಕಾರ್ಯಪ್ರವೃತ್ತವಾಗಿದ್ದು WABetaInfo ವರದಿ ಪ್ರಕಾರ ಮೆಟಾಮಾಲೀಕತ್ವದ ಮೆಸೇಜ್ ಅಪ್ಲಿಕೇಶನನ್ ನನ್ನ ಡೆಸ್ಕ್ಟಾಪ್ ಬೀಟಾ ಪರೀಕ್ಷೆಕರಿಗೆ ಹೊಸ ವೈಶಿಷ್ಟ್ಯವನ್ನು ಹೊರ ತಂದಿದೆ.
ವಿಂಡೋಸ್ (Windows) ಬಳಕೆದಾರರಿಗೆ ಅಪರಿಚಿತ ಫೋನ್ ಸಂಖ್ಯೆ ಅಥವಾ ಆ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ (Contact List) ಇಲ್ಲದ ಫೋನ್ ನಂಬರಗಳ ಜೊತೆ ಚಾಟ್ ಮಾಡುವಂತ ಹೊಸ ಫೀಚರ್ (Features) ಇದಾಗಿದೆ. ಈ ವರದಿಯ ಪ್ರಕಾರ ವಾಟ್ಸಾಪ್ ಹೊಸ ಸ್ಕ್ರೀನ್ನ್ ಪರಿಚಯಿಸುತ್ತಿದೆ. ಇದರಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ಇದರಲ್ಲಿ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇಲ್ಲದ ನಂಬರ್ ಗಳೊಂದಿಗೆ ಕೂಡ ನೀವು ಚಾಟ್ ಮಾಡಬಹುದು. ಇದರಿಂದ ಸಂವಹನವೂ ಸುಲಭಕಾರಿ ಮತ್ತು ಸರಳವಾಗಿದೆ, ಇಂತಹ ವೈಶಿಷ್ಟ್ಯವನ್ನು ವಾಟ್ಸಪ್ ಪರಿಚಯಿಸುತ್ತಿದೆ.
ವಾಟ್ಸಪ್ ಖಾತೆಯಲ್ಲಿ ವೈಶಿಷ್ಟ್ಯತೆ ಲಭ್ಯತೆಯನ್ನು ನೀವು ಬಳಸಲು ಬಯಸಿದರೆ ‘ನ್ಯೂಚಾಟ್ ‘ (New Chat) ಅನ್ನು ತೆರೆಯಿರಿ. ನಿಮ್ಮ ಡಿಪಿಎ ಪಕ್ಕದಲ್ಲಿ ಲಭ್ಯವಿರುವ ಪ್ಲಸ್ ಚಿನ್ಹೆಯನ್ನು ಕ್ಲಿಕ್ ಮಾಡಿದರೆ ಹೊಸ ಚಾಟ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ‘ಫೋನ್ ನಂಬರ್ ‘ (Phone Number) ಎಂಬ ಹೊಸ ಎಂಟ್ರಿ ಪಾಯಿಂಟ್ ನೋಡಬಹುದು. ಈ ಚಾಟ್ ಪರದೆ ಒಳಗಿನ ಸರ್ಚ್ ಬಾರ್ ನಲ್ಲಿ ನಮೂದಿಸುವ ಮೂಲಕ ನೀವು ಫೋನ್ ಸಂಖ್ಯೆಗಳನ್ನು ಹುಡುಕುವುದು ಮುಂದುವರಿಸಬಹುದು.
ಈ ವೈಶಿಷ್ಟ್ಯವನ್ನು ಬಳಸುವಾಗ ಅಪರಿಚಿತ ಫೋನ್ ಸಂಖ್ಯೆಯೊಂದಿಗೆ ಸಂವಹನ ಪ್ರಾರಂಭಿಸಬಹುದು. ಇದರಲ್ಲಿ ಇ-ಮೇಲ್ (E-Mail) ಅಲ್ಲಿ ಬರುವ ಕ್ಯೂ ಆರ್ ಕೋಡ್ ಗಳನ್ನು (QR Code) ಸ್ಕ್ಯಾನ್ ಮಾಡದೇ ಇರುವುದು ಉತ್ತಮ.
ಧನಂಜಯ್