ಶೀಘ್ರವೇ ಹೊಸ ಅವತಾರದಲ್ಲಿ ಬರಲಿದೆ Whatsapp !

Technology: ನೀವು Whatsapp ನಿಂದ ಪ್ರಮುಖ ಸಂದೇಶಗಳನ್ನು ಕಳೆದುಕೊಳ್ಳುತ್ತಿದ್ದೀರಾ? ನಿಮಗೆ ಅಗತ್ಯವಿರುವಾಗ ಅವುಗಳನ್ನು ಪತ್ತೆ ಹಚ್ಚಲು ನಿಮಗೆ (Whatsapp will new avatar) ಕಷ್ಟವಾಗುತ್ತಿದೆಯಾ? ಹಾಗಾದ್ರೆ ಇನ್ಮುಂದೆ ಚಿಂತಿಸಬೇಡಿ. ಯಾಕಂದ್ರೆ ಶೀಘ್ರವೇ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರಲಿದೆ ವಾಟ್ಸಪ್(Whatsapp).

ಮೆಟಾ – ಮಾಲೀಕತ್ವದ ಮೆಸೆಂಜಿಗ್ ಪ್ಲಾಟ್ ಫಾರ್ಮ(Messenging platform) ಆಗಿರುವ ವಾಟ್ಸಪ್ ಬಳಕೆದಾರರಿಗೆ ಚಾಟ್‌ಗಳು ಮತ್ತು ಗುಂಪುಗಳಲ್ಲಿ ಸಂದೇಶವನ್ನು ಪಿನ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು whatsapp ಸುದ್ದಿ ಟ್ರ್ಯಾಕರ್ WABetaInfo ವರದಿ ಮಾಡಿದೆ.

WABetaInfo ಪ್ರಕಾರ ನೂತರ ಫೀಚರ್ ವಿಶಿಷ್ಟತೆಗಳಿಂದ ಕೂಡಿದೆ ಮತ್ತು ಬಹಳ ಉಪಯುಕ್ತವಾಗಿದೆ. ಏಕೆಂದರೆ ಇದು ಸಂಭಾಷಣೆಯ ಮೇಲ್ಭಾಗಕ್ಕೆ ನಿರ್ಣಾಯಕ ಸಂದೇಶಗಳನ್ನು ಪಿನ್ ಮಾಡಲು ಬಳಕೆದಾರರನ್ನು ಅನುಮತಿಸಿದೆ.

ಈ ಮಧ್ಯೆ ವಾಟ್ಸಾಪ್ ಐಒಎಸ್ ಬಳಕೆದಾರರಿಗೆ ಹೊಸ ಆವೃತ್ತಿಯನ್ನು ಪರಿಚಯಿಸಿದೆ. IOS ಬಳಕೆದಾರರು ಈಗ ವೈಯಕ್ತಿಕಗೊಳಿಸುವ ವಾಟ್ಸಪ್ಪ್ ಅವತಾರವನ್ನು ರಚಿಸಬಹುದು.

IOS ನಲ್ಲಿ ವಾಟ್ಸಪ್ ಅವತಾರವನ್ನು ರಚಿಸಲು whatsapp ಸೆಟ್ಟಿಂಗ್ಗಳು >ಅವತಾರ್‌ಗೆ ಹೋಗಿ. IOS ಬಳಕೆದಾರರು ಈಗ ವಾಟ್ಸಪ್ಪ್ ಕ್ಯಾಮರಾದಲ್ಲಿ (Whatsapp will new avatar) ಎಡಕ್ಕೆ ಸ್ವಯಿಪ್‌ ಮಾಡುವ ಮೂಲಕ ಹ್ಯಾಂಡ್ಸ್ -ಪ್ರೀನಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.

ಅಲ್ಲದೆ ಹೆಚ್ಚುವರಿಯಾಗಿ ಇತರ ಅಪ್ಲಿಕೇಶನ್ಗಳಿಂದ ಚಿತ್ರಗಳು ,ಡಾಕ್ಯೂಮೆಂಟ್ಗಳನ್ನು ಸುಲಭವಾಗಿ ಕಾಪಿ ಮಾಡಲು ಮತ್ತು ಕಳುಹಿಸಲು ಅವಕಾಶವನ್ನು ಬಳಕೆದಾರರರಿಗೆ ನೀಡಲಾಗಿದೆ.

ಇದನ್ನೂ ಓದಿ: ಇಂದಿನ ಚಿನ್ನ ಹಾಗೂ ಬೆಳ್ಳಿ ದರವು ಹೇಗಿದೆ ನಿಮ್ಮ ನಗರಗಳಲ್ಲಿ

ಭಾರತೀಯ ರೈಲ್ವೆ ಈಗಾಗಲೇ whatsapp ಮೂಲಕ ಆಹಾರ ವಿತರಣೆಯ ಮೊದಲ ಹಂತವನ್ನು ಕಾರ್ಯರೂಪಕ್ಕೆ ತಂದಿದೆ.

ಇದು ಪ್ರಯಾಣಿಕರಿಗೆ ಆಹಾರವನ್ನು ಆರ್ಡರ್ ಮಾಡಲು ಅನುಕೂಲವಾಗಿದೆ. www.catering. irctc.co.in. ಮೂಲಕ ಇ – ಕೇಟರಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಿತು.

ಅವರ PNR ಸಂಖ್ಯೆಯೊಂದಿಗೆ ಭಾರತೀಯ ರೈಲ್ವೆ ಬಳಸುವ ಪ್ರಯಾಣಿಕರು ಈಗ ಸುಲುಭವಾಗಿ whatsapp ಮೂಲಕ ಆರ್ಡರ್ ಮಾಡಬಹುದಾಗಿದೆ.

ವಾಟ್ಸಾಪ್ ಆಪ್ ಮೆಸ್ಸೆಂಜರ್ ಇಂಕ್. ಕಂಪನಿಯು 2009ರಲ್ಲಿ ಬ್ರಿಯಾನ್ ಆಕ್ಟನ್, ಮತ್ತು ಜಾನ್ ಕೌಮ್ ಎಂಬುವುರಿಂದ ಸ್ಥಾಪಿತವಾಯಿತು. ದಾಖಲೆಗಳ ಪ್ರಕಾರ, ಪ್ರಪಂಚದಲ್ಲಿ ವಾಟ್ಸಾಪ್ ಬಳಸುವ ಸಂಖ್ಯೆಯು 224 ಕೋಟಿ.

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ತನ್ನ ಅಪ್ಲಿಕೇಶನ್ ಭಾಷೆಯನ್ನು ಬದಲಾಯಿಸುವ ಆಯ್ಕೆಯನ್ನು ಕೊಟ್ಟಿದೆ. ಇದರಲ್ಲಿ ವಿಶ್ವದ ನಾನಾ ಭಾಷೆ ಇದ್ದು, ಆಂಗ್ಲ ಭಾಷೆ ಗೊತ್ತಿಲ್ಲದವರಿಗೆ ಬಹಳ ಸುಲಭವಾಗಿ ಉಪಯೋಗಿಸಲು ಅವಕಾಶ ನೀಡಿದೆ. ಇದರಿಂದ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಯಶಸ್ವಿಯಾಗಿದೆ.

ರುಕ್ಮಿಣಿ.

Exit mobile version