ಇದೊಂದು ಕಾರಣಕ್ಕೆ ನಾನು ಇನ್ನು ಮದುವೆಯಾಗದೆ ಇದ್ದೀನಿ : ನಟ ಪ್ರಭಾಸ್!

actor

ಟಾಲಿವುಡ್ ಚಿತ್ರರಂಗದ ಡಾರ್ಲಿಂಗ್ ಎಂದೇ ಖ್ಯಾತಿ ಪಡೆದಿರುವ ನಟ ಎಂದರೆ ಅದು ಬಾಹುಬಲಿ ಪ್ರಭಾಸ್! ಟಾಲಿವುಡ್ ಅಂಗಳದಲ್ಲಿ ತಮ್ಮ ನಟನಾ ಶೈಲಿಯಿಂದಲೇ ಎಲ್ಲರಿಗೂ ಚಿರಪರಿಚತರಾಗಿರುವ ಡಾರ್ಲಿಂಗ್ ಪ್ರಭಾಸ್ ಸದ್ಯ ತಮ್ಮ ಅಭಿಮಾನಿಗಳು ಮತ್ತು ಚಿತ್ರರಂಗದವರಿಗೆ ಅಚ್ಚರಿಪಡುವಂತ ಹೇಳಿಕೆಯನ್ನು ನೀಡಿದ್ದಾರೆ. ಹೌದು, 41 ವರ್ಷವಾದರೂ ಇಂದಿಗೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿದುಕೊಂಡಿರುವ ಪ್ರಭಾಸ್ ಸಾಕಷ್ಟು ಮುಂಬರುವ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ತುಂಬ ಬಿಝಿಯಾಗಿದ್ದಾರೆ. ಈ ನಡುವೆ ಪ್ರಬಾಸ್ ಅವರ ಅಭಿಮಾನಿಗಳು ನಮ್ಮ ಡಾರ್ಲಿಂಗ್ ತಮ್ಮ ಮದುವೆಯ ಬಗ್ಗೆ ಮರೆತು ಬಿಟ್ಟಿದ್ದಾರೋ ಏನೋ? ಎಂದು ತಮ್ಮಲ್ಲೇ ಪ್ರಶ್ನೆ ಹಾಕಿಕೊಂಡಿದ್ದಾರೆ.

ಅಭಿಮಾನಿಗಳು ಯಾವಾಗ ಪ್ರಭಾಸ್ ಅವರು ಮದುವೆಯಾಗುತ್ತಾರೆ, ಈ ಕುರಿತು ಯಾವಾಗ ಸುದ್ದಿ ಹೊರಬಿಡುತ್ತಾರೆ ಎಂದು ಮೀನಮೇಷ ಏಣಿಸುತ್ತಿರುವ ಸಮಯಕ್ಕೆ ಸರಿಯಾಗಿ, ಇದೀಗ ಡಾರ್ಲಿಂಗ್ ಪ್ರಭಾಸ್ ಸದ್ಯ ಮದುವೆ ವಿಚಾರ ಬಗ್ಗೆ ಅಚ್ಚರಿ ಮೂಡುವಂತೆ ಉತ್ತರ ನೀಡಿದ್ದಾರೆ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ! ಆದರೆ, ಒಂದಿಷ್ಟು ಸಮಯದ ನಂತರ ಸಾಹೋ ಸಿನಿಮಾದ ಮೂಲಕ ಸದ್ದು ಮಾಡಿದರು. ಇದಾದ ಬಳಿಕ ಪ್ರಭಾಸ್ ರಾಧೆಶ್ಯಾಮ ಚಿತ್ರದಲ್ಲಿ ನಿರತರಾಗಿದ್ದರು, ಇತ್ತೀಚಿಗಷ್ಟೇ ಚಿತ್ರತಂಡ ಮಾರ್ಚ್ 02 ರಂದು ಟ್ರೇಲರ್ ಬಿಡುಗಡೆಗೊಳಿಸಿತು. ಈ ಸಿನಿಮಾದಲ್ಲಿ ಪ್ರಭಾಸ್ ನಾಯಕರಾದರೆ, ಟಾಲಿವುಡ್ ಬ್ಯೂಟಿ ಪೂಜಾ ಹೆಗಡೆ ನಾಯಕಿಯಾಗಿ ಮಿಂಚಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಪ್ರಭಾಸ್ ಅವರಿಗೆ ನೀವು ನಿಜ ಜೀವನದಲ್ಲಿ ಲವ್ ಅಫೇರ್ ಬೇಡ ಅಂತೀರಾ ಹೇಗೆ? ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರ ನೀಡಿದ ಪ್ರಭಾಸ್, ಹಲವು ಬಾರಿ ಪ್ರೀತಿಯ ಬಗ್ಗೆ ನನ್ನಗಿದ್ದ ಊಹೆಗಳು ಸುಳ್ಳಾಗಿವೆ! ಇದೇ ಕಾರಣಕ್ಕೆ ನಾನು ಇನ್ನು ಮದುವೆಯಾಗಿಲ್ಲ ಎಂದು ನೇರವಾಗಿ ಉತ್ತರಿಸಿದ್ದಾರೆ. ಇದು ಪ್ರಭಾಸ್ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹಾಗಾದರೆ ಪ್ರಭಾಸ್ ಅವರು ಈ ಹಿಂದೆ ಲವ್ ಮಾಡಿ, ಸೋತ್ತಿದ್ದಾರೆ ಅನಿಸುತ್ತೆ ಈ ಕಾರಣವನ್ನು ಮುಂದಿಟ್ಟು ಅವರು ಹೀಗೆ ಹೇಳಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಪ್ರಭಾಸ್ ಅವರು ಮಾತನಾಡಿರುವ ಒಂದು ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Exit mobile version