• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

2022 ರಲ್ಲಿ ಟಾಟಾ ಗ್ರೂಪ್‌ನ ಒಟ್ಟು ಆದಾಯ $350 ಶತಕೋಟಿಯಾಗಿದ್ದರೂ, ರತನ್ ಟಾಟಾ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿಲ್ಲ! ಯಾಕೆ ಗೊತ್ತಾ?

Mohan Shetty by Mohan Shetty
in ದೇಶ-ವಿದೇಶ
Ratan tata
0
SHARES
0
VIEWS
Share on FacebookShare on Twitter

‘ರತನ್ ಟಾಟಾ’(Ratan Tata) ಈ ಹೆಸರನ್ನು ಕೇಳದವರೇ ಇಲ್ಲ. ರತನ್ ಟಾಟಾ ಮುಂಬೈನ(Mumbai) ಪಾರ್ಸಿ ಕುಟುಂಬದಲ್ಲಿ 28 ಡಿಸೆಂಬರ್ 1937 ರಂದು ಜನಿಸಿದರು.

ಇವರ ತಂದೆಯ ಹೆಸರು ನೇವಲ್ ಟಾಟಾ ಮತ್ತು ಅವರ ತಾಯಿಯ ಹೆಸರು ಸೋನು ಟಾಟಾ(SONU TATA).

Why Ratan Tata is not in the top List

ಪ್ರಮುಖಾಂಶ :

  • 2022 ರಲ್ಲಿ ಟಾಟಾ ಗ್ರೂಪ್‌ನ ಒಟ್ಟು ಆದಾಯ $350
  • ರತನ್ ಟಾಟಾ ಹೆಸರು ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿಲ್ಲ!
  • ಯಾಕೆ ಗೊತ್ತಾ?
  • ಟಾಟಾ ಅವರಿಗೆ 2000 ರಲ್ಲಿ ಪದ್ಮಭೂಷಣ

ನೇವಲ್ ಟಾಟಾ, ಟಾಟಾ ಗ್ರೂಪ್‌ನ ಸಂಸ್ಥಾಪಕ ಜಮ್ಸೆಟ್ಜಿ ಟಾಟಾ ಅವರ ಮೊಮ್ಮಗ. ರತನ್ ಟಾಟಾ ಅವರಿಗೆ ಜಿಮ್ಮಿ ಟಾಟಾ (JIMMY TATA) ಎಂಬ ಸಹೋದರ ಇದ್ದಾರೆ.

1948 ರಲ್ಲಿ, ಎಂದರೆ ರತನ್ ಟಾಟಾ ಅವರಿಗೆ 10 ವರ್ಷ ವಯಸ್ಸಾಗಿದ್ದಾಗ, ಅವರ ಪೋಷಕರು ಕಾರಣಾಂತರಗಳಿಂದ ಬೇರ್ಪಟ್ಟರು.

ನಂತರ ಅವರನ್ನು ಅವರ ಅಜ್ಜಿ ನವಜಬಾಯಿ ಟಾಟಾ (NAVAJA BAI TATA) ಅವರು ಸಾಕಿ ಬೆಳೆಸಿದರು. ರತನ್ ಟಾಟಾ ಅವರು ಮದುವೆಯಾಗಿಲ್ಲ, ಸುಮಾರು 4 ಬಾರಿ ಮದುವೆಯಾಗಲು ಪ್ರಯತ್ನಿಸಿದರು.

ಆದರೆ ಕೆಲವು ಕಾರಣಗಳಿಂದ ಅವರು ಮದುವೆಯಾಗಲು ಸಾಧ್ಯವಾಗಲಿಲ್ಲ. ರತನ್ ಟಾಟಾ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ ಪಡೆದರು.

https://fb.watch/f9p_Z49E8w/

ತಮ್ಮ ಪ್ರೌಢ ಶಿಕ್ಷಣದ ನಂತರ ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ ಮತ್ತು ಶಿಮ್ಲಾದ (SHIMLA) ಬಿಷಪ್ ಕಾಟನ್ ಶಾಲೆಯಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸಿದರು. ರತನ್ ಟಾಟಾ ಅವರು ತಮ್ಮ ಮುಂದಿನ ಅಧ್ಯಯನವನ್ನು ನ್ಯೂಯಾರ್ಕ್ ನ ರಿವರ್ಡೇಲ್ ಕಂಟ್ರಿಯಲ್ಲಿ ಮಾಡಿದರು.

ನಂತರ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದರು. ಜೊತೆಗೆ, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ 7 ವಾರಗಳ ಸುಧಾರಿತ ನಿರ್ವಹಣಾ ಕಾರ್ಯಕ್ರಮವನ್ನು ಕೂಡ ಪೂರ್ಣಗೊಳಿಸಿದ್ದಾರೆ.

ಇನ್ನು ಇವರ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ, ರತನ್ ಟಾಟಾ ಅವರು 1960 ರಲ್ಲಿ ಟಾಟಾ ಕಂಪನಿಯಲ್ಲಿ ಸಾಮಾನ್ಯ ಕೆಲಸಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

Rathan Tata - Why is not in the top List

ರತನ್ ಟಾಟಾ ಅವರು ಕಂಪನಿಗೆ ಸೇರಿದ ನಂತರ ಸಾಕಷ್ಟು ಬದಲಾವಣೆಗಳನ್ನು ಮಾಡಿದರು, ಇದರಿಂದಾಗಿ ಕಂಪನಿಯು ಅಭಿವೃದ್ಧಿಯಾಯಿತು.

ಇದರಿಂದಾಗಿ J. R. D. ಟಾಟಾ ಅಧ್ಯಕ್ಷ ಸ್ಥಾನವನ್ನು 1991 ರಲ್ಲಿ ರತನ್ ಟಾಟಾಗೆ ಹಸ್ತಾಂತರಿಸಿದರು, ಮತ್ತು ಅದರ ನಂತರ ಟಾಟಾ ಗ್ರೂಪ್ ಹೊಸ ಉತ್ತುಂಗವನ್ನ ತಲುಪಿತು.

ಆರಂಭಿಕ ದಿನಗಳಲ್ಲಿ, ರತನ್ ಟಾಟಾ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು, ಆದರೆ ಅವರು ಛಲ ಬಿಡದೆ ಕೆಲಸ ಮಾಡಿದ ಪರಿಣಾಮ, ಇಂದು ಟಾಟಾ ಎನ್ನುವುದು ಜಾಗತಿಕ ಬ್ರಾಂಡ್ ಆಗಿ ಮಾರ್ಪಟ್ಟಿದೆ.

ರತನ್ ಟಾಟಾ ಅವರ ನೇತೃತ್ವದಲ್ಲಿ, ಜಾಗ್ವಾರ್(Jaguar), ಟೆಟ್ಲಿ ಟೀ(Tetley Tea) ಮತ್ತು ಲ್ಯಾಂಡ್ ರೋವರ್‌ನಂತಹ(Land Rover) ಕೆಲವು ಜಾಗತಿಕ ಬ್ರಾಂಡ್‌ಗಳನ್ನು ಸಹ ಸ್ವಾಧೀನ ಪಡಿಸಿಕೊಳ್ಳಲಾಯಿತು.

ಇದನ್ನೂ ಓದಿ : https://vijayatimes.com/farming-ideas-in-finger-tips/


ರತನ್ ಟಾಟಾ ಅವರು ವಾಹನಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು ಮತ್ತು ಭಾರತದ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಕಾರನ್ನು ಖರೀದಿಸುವಂತಾಗಬೇಕು ಎಂದು ಬಯಸಿದ್ದರು. ಹಾಗಾಗಿ,

ಅವರು ಕೇವಲ 1 ಲಕ್ಷ ರೂಪಾಯಿಗೆ ವಿಶ್ವದ ಅತ್ಯಂತ ಅಗ್ಗದ ಟಾಟಾ ನ್ಯಾನೋ ಕಾರನ್ನು (NANO CAR) ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ರತನ್ ಟಾಟಾ ಅವರು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಟಾಟಾ ಅವರಿಗೆ 2000 ರಲ್ಲಿ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮ ವಿಭೂಷಣವನ್ನು ಭಾರತ ಸರ್ಕಾರದಿಂದ ನೀಡಿ ಗೌರವಿಸಲಾಯಿತು.

ಇನ್ನು, ರತನ್ ಟಾಟಾ ಅವರ ನಿವ್ವಳ ಅಸ್ತಿ ಮೌಲ್ಯ ಕೇವಲ $ 1 ಬಿಲಿಯನ್. ಆದರೆ ಟಾಟಾ ಗ್ರೂಪ್‌ನ ಒಟ್ಟು ಆದಾಯವು ಮೇ 2022 ರ ಹೊತ್ತಿಗೆ $ 350 ಶತಕೋಟಿ ಆಗಿತ್ತು.

Ratan Tata - Why Ratan Tata is not in the top List

ಹೌದು, ಟಾಟಾ ಗ್ರೂಪ್ ರಿಲಯನ್ಸ್ ಇಂಡಸ್ಟ್ರೀಸ್‌ಗಿಂತಲೂ ಮುಂದಿದೆ, ಆದರೆ ರತನ್ ಟಾಟಾ ಅವರು ಯಾಕೆ ದೇಶದ ಅತಿದೊಡ್ಡ ಶ್ರೀಮಂತ ಎಂದು ಕರೆಸಿಕೊಂಡಿಲ್ಲ ಎಂದು ನೀವು ಆಶ್ಚರ್ಯ ಪಡಬಹುದು.

ಇದಕ್ಕೆ ಉತ್ತರ ಇಲ್ಲಿದೆ, ರತನ್ ಟಾಟಾ ಅವರು ತಮ್ಮ ಕಂಪನಿಯ ಗಳಿಕೆಯ 66% ಅನ್ನು ದಾನ ಮಾಡುತ್ತಾರೆ.

ಕಂಪನಿಯು ಯಾವುದೇ ಲಾಭವನ್ನು ಪಡೆದರೂ ಅವರು ಸಮಾಜ ಕಲ್ಯಾಣಕ್ಕೆ ದೇಣಿಗೆ ನೀಡುತ್ತಾರೆ ಮತ್ತು ಈ ಹಣವನ್ನು ಅವರ ವೈಯಕ್ತಿಕ ಹಣಕಾಸು ಹೇಳಿಕೆಯಲ್ಲಿ ದಾಖಲಿಸಲಾಗಿಲ್ಲ.

ಒಂದು ವೇಳೆ ರತನ್ ಟಾಟಾ ಈ ದಾನವನ್ನು ನಿಲ್ಲಿಸಿದರೆ, ಇಂದು ಅವರು ಮುಖೇಶ್ ಅಂಬಾನಿಯನ್ನು (MUKESH AMBANI) ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಬಹುದು.

https://fb.watch/f8nSbY3Ll2/ ಇವರು ಪೊಲೀಸರಾ? ಗೂಂಡಾಗಳ?

ರತನ್ ಟಾಟಾಜಿ ಅವರ ಟಾಟಾ ಗ್ರೂಪ್ ವಿಶ್ವದ ಅತಿದೊಡ್ಡ ವ್ಯಾಪಾರ ಗುಂಪುಗಳಲ್ಲಿ ಒಂದಾಗಿದೆ ಮತ್ತು 2022 ರಲ್ಲಿ ಅವರು 100 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
Tags: global automobile manufacturerglobal enterpriseIndiaratan tataRichest Buisness Mantata groupTata group companiesTATA Group net profit

Related News

ದೇಶ-ವಿದೇಶ

ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷ : ವಿವಾದವೆಬ್ಬಿಸಿದೆ ರಾಹುಲ್ ಗಾಂಧಿ ಹೇಳಿಕೆ

June 2, 2023
ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ
ದೇಶ-ವಿದೇಶ

ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ

June 1, 2023
ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ
ದೇಶ-ವಿದೇಶ

ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ

May 27, 2023
ಕೇವಲ ಭಾರತೀಯರಿಗೆ ಉದ್ಯೋಗ ಅವಕಾಶ ಎಂದು ಜಾಹೀರಾತು; ಅಮೆರಿಕದ ಐಟಿ ಕಂಪನಿಗೆ ಬಿತ್ತು 21 ಲಕ್ಷ ರೂ ದಂಡ
ದೇಶ-ವಿದೇಶ

ಕೇವಲ ಭಾರತೀಯರಿಗೆ ಉದ್ಯೋಗ ಅವಕಾಶ ಎಂದು ಜಾಹೀರಾತು; ಅಮೆರಿಕದ ಐಟಿ ಕಂಪನಿಗೆ ಬಿತ್ತು 21 ಲಕ್ಷ ರೂ ದಂಡ

May 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.