Gujarat : ಮದುವೆಯಾಗಿ 8 ವರ್ಷದ ಬಳಿಕ ಪತ್ನಿಗೆ ತಿಳಿಯಿತು, ತನ್ನ ಪತಿ ಅವನಲ್ಲ ಅವಳು ಎಂದು!

Marriage

Gujarat : ಮದುವೆಯಾದ (Marriage) ಬರೋಬ್ಬರಿ ಎಂಟು ವರ್ಷದ ಬಳಿಕ ತನ್ನ ಪತಿ ಗಂಡಲ್ಲ ಹೆಣ್ಣು ಎಂದು ಅರಿವಾಗಿ ಗುಜರಾತ್‌ನ ವಡೋದರದ (Vodadhara) ಮಹಿಳೆಯೊಬ್ಬರು ಆಘಾತಕ್ಕೆ ಒಳಗಾಗಿದ್ದಾರೆ.

2014ರಲ್ಲಿ ಆಕೆ ಮದುವೆಯಾಗಿದ್ದ ವ್ಯಕ್ತಿಯು, ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನ್ನು ಮುಚ್ಚಿಟ್ಟಿದ್ದು ಬಹಿರಂಗವಾಗಿದೆ.

Marraige


ಘಟನೆಯ ಬಗ್ಗೆ ವಿವರಣೆ ನೀಡಿದ ಮಹಿಳೆ ಗೋತ್ರಿ, “ಸುಮಾರು ಒಂಬತ್ತು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್(Matrimonial) ತಾಣವೊಂದರ ಮೂಲಕ ದಿಲ್ಲಿಯ ನಿವಾಸಿ ವಿರಾಜ್ ವರ್ಧನ್‌ನನ್ನು ಭೇಟಿಯಾಗಿದ್ದೆ. ನನ್ನ ಮೊದಲ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ನನಗೆ 14 ವರ್ಷದ ಮಗಳಿದ್ದಾಳೆ. 2014ರ ಫೆಬ್ರವರಿಯಲ್ಲಿ ವಿರಾಜ್ ಜೊತೆ ಮರುಮದುವೆಯಾಯಿತು. ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ವಿವಾಹದ ಬಳಿಕ ಇಬ್ಬರೂ ಹನಿಮೂನ್‌ಗೆಂದು ಕಾಶ್ಮೀರಕ್ಕೆ ತೆರಳಿದರು.

ಆದರೆ ನನ್ನ ಗಂಡ ‘ಸಂಸಾರ’ ಮಾತ್ರ ಆರಂಭಿಸಿರಲಿಲ್ಲ, ದೈಹಿಕ ಸಂಪರ್ಕಕ್ಕೆ ಮುಂದಾಗದೆ ಅನೇಕ ದಿನಗಳ ಕಾಲ ನೆಪಗಳನ್ನು ಒಡ್ಡಿ ತಪ್ಪಿಸಿಕೊಳ್ಳುತ್ತಿದ್ದ.

https://youtu.be/E3HXILLVamE COVER STORY 0% ಲೋನ್‌ ಮೋಸ!

ನಾನು ಒತ್ತಾಯ ಮಾಡಿದಾಗ, ತಾನು ರಷ್ಯಾದಲ್ಲಿದ್ದಾಗ ಕೆಲವು ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದಾಗಿ ಮತ್ತು ಆಗ ಲೈಂಗಿಕ ಸಾಮರ್ಥ್ಯ ಕಳೆದುಕೊಂಡಿದ್ದಾಗಿ ಹೇಳಿದ್ದ” ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಇನ್ನು, ವಿರಾಜ್ ತನ್ನ ಪತ್ನಿಯ ಬಳಿ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಸರಿಯಾಗಲಿದೆ ಎಂದು ಹೇಳಿ ನಂಬಿಸಿದ್ದನು.

Marriage

2020ರ ಜನವರಿಯಲ್ಲಿ ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಬಾರಿಯಾಟ್ರಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ವಿರಾಜ್ ತಿಳಿಸಿ ಕೋಲ್ಕತ್ತಾಗೆ(Calcutta) ಹೋದರು.

ನಂತರ, ವಿರಾಜ್ ವಾಸ್ತವವಾಗಿ ಪುರುಷ ಅಂಗಗಳನ್ನು ಅಳವಡಿಸಲು ಶಸ್ತ್ರಚಿಕಿತ್ಸೆಗೆ ಹೋಗಿದ್ದರು ಮತ್ತು ಬಾರಿಯಾಟ್ರಿಕ್ಸ್ ಶಸ್ತ್ರಚಿಕಿತ್ಸೆಯಲ್ಲ ಎಂದು ಪತ್ನಿಗೆ ತಿಳಿಸಿದ್ದಾನೆ.

ಆಗ ಆತನ ಮೂಲ ಹೆಸರು ‘ವಿಜೈತಾ’ ಎಂದು ತಿಳಿದು ಬಂದಿದೆ. ನಂತರ, ಈತ ತನ್ನ ಪತ್ನಿಯೊಂದಿಗೆ, “ಅಸ್ವಾಭಾವಿಕ ಲೈಂಗಿಕತೆ” ನಡೆಸಲು ಪ್ರಾರಂಭಿಸಿದನು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಭಯಾನಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆಗೆ ಬೆದರಿಕೆಯೊಡ್ಡಿದ್ದನು.

ಇದನ್ನೂ ಓದಿ : https://vijayatimes.com/bjp-govt-rejects-multipspeciality-hospital-says-congress/

ಜೊತೆಗೆ, ಆರೋಪಿ ವಿರಾಜ್ ಮಗಳ ಹೆಸರಿನಲ್ಲಿ 90 ಲಕ್ಷ ರೂಪಾಯಿ ಸಾಲ ಪಡೆದು ತಮ್ಮ ಕಾಲೋನಿಯಲ್ಲಿ ಫ್ಲ್ಯಾಟ್ ಕೂಡ ಖರೀದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಇದೀಗ ಆರೋಪಿಯನ್ನು ಬಂಧಿಸಿ ದೆಹಲಿಯಿಂದ ವಡೋದರಾಕ್ಕೆ ಕರೆತರಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕೆ ಗುರ್ಜರ್ ತಿಳಿಸಿದ್ದಾರೆ.

Exit mobile version