ಭಾರತದಲ್ಲಿ ಗುಲಾಬಿ ಬಣ್ಣದ ಚಿರತೆ ಪ್ರತ್ಯಕ್ಷ

ಉದಯಪುರ 12 : ಭಾರತದಲ್ಲಿ ಇದೇ ಮೊದಲು ಅಪರೂಪದ ‘ಗುಲಾಬಿ’ ಚಿರತೆ ಇತ್ತೀಚೆಗೆ ಪತ್ತೆಯಾಗಿದೆ. ರಾಜಸ್ಥಾನದ ದಕ್ಷಿಣ ಭಾಗದಲ್ಲಿರುವ ಪಾಲಿ ಜಿಲ್ಲೆಯ ಅರಾವಳ್ಳಿ ಬೆಟ್ಟ ಪ್ರದೇಶದ ರಾಣಕ್ಪುರ ಭಾಗದಲ್ಲಿ ಈ ವಿಸ್ಮಯಕಾರಿ ಚಿರತೆ ಕಂಡುಬಂದಿದೆ.

ಸ್ಟ್ರಾಬೆರಿ ಬಣ್ಣದ ಚುಕ್ಕೆಗಳಿರುವ ಈ ಅಪರೂಪದ ಚಿರತೆಯನ್ನು ಆಗಾಗ್ಗೆ ಕಂಡಿರುವುದಾಗಿ ರಾಣಕ್ಪುರ ಮತ್ತು ಕುಂಭಾಲಗಡ ನಿವಾಸಿಗಳು ತಿಳಿಸಿದ್ದಾರೆ. ಇದು ಈ ಗ್ರಾಮಗಳ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಪತ್ತೆಯಾಗಿದೆ. ಇಲ್ಲಿನ ಅಗಾಧ ವಿಸ್ತಾರದ ಅರಣ್ಯ ಪ್ರದೇಶದಿಂದಾಗಿ ಈ ಗುಲಾಬಿ ಚಿರತೆ ಎಲ್ಲಾ ಕಡೆ ಓಡಾಡುತ್ತಿದೆ ಎಂದು ರಾಜಸಮಂದ್ ಡಿಸಿಎಫ್ ಫತೇಹ್ ಸಿಂಗ್ ರಾಥೋರ್ ಹೇಳಿದ್ದಾರೆ.

ಭಾರತೀಯ ಚಿರತೆಗಳು ಸಾಮಾನ್ಯವಾಗಿ ಕಂದು ಹಳದಿ ಬಣ್ಣ ಹಾಗೂ ಕಪ್ಪು ಚುಕ್ಕೆ ಹೊಂದಿರುತ್ತವೆ. ಗುಲಾಬಿ ಚಿರತೆಯು ಕೆಂಪು ಕಂದು ಚರ್ಮ ಹಾಗೂ ಸಾಮಾನ್ಯ ಚಿರತೆಗಳಿಗೆ ಹೋಲಿಸಿದರೆ ವಿಶಿಷ್ಟ ಮತ್ತು ವಿಭಿನ್ನ ಚುಕ್ಕೆಗಳನ್ನು ಹೊಂದಿರುತ್ತದೆ. ಈ ಗುಲಾಬಿ ಚಿರತೆಯಲ್ಲಿನ ಚರ್ಮದಲ್ಲಿನ ಸ್ಟ್ರಾಬೆರಿ ಚುಕ್ಕೆಗಳು ಎರಿತ್ರಿಸಂ- ಅಂದರೆ ಕೆಂಪು ವರ್ಣ ಕೋಶಗಳ ಅತಿಯಾದ ಉತ್ಪಾದನೆಯಿಂದ ಅಥವಾ ಗಾಢ ವರ್ಣಕೋಶಗಳ ಕಡಿಮೆ ಉತ್ಪಾದನೆಯಿಂದ ಉಂಟಾಗಿರಬಹುದಾದ ಆನುವಂಶಿಕ ಸ್ಥಿತಿ ಇರಬಹುದು ಎಂದು ತಿಳಿದುಬಂದಿದೆ.

Exit mobile version