Wipro : ಮೂನ್‌ಲೈಟಿಂಗ್ ಮಾಡಿದ್ದ ತನ್ನ 300 ಸಿಬ್ಬಂದಿಗಳನ್ನು ಉದ್ಯೋಗದಿಂದ ವಜಾಗೊಳಿಸಿದ ವಿಪ್ರೋ!

India : ಈಗಿನ ಆಧುನಿಕ ಯುಗದಲ್ಲಿ(Wipro sacks 300 Employees), ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಮುಖಿಯಾಗಿರುವ ಸಂದರ್ಭದಲ್ಲಿ, ಒಂದಲ್ಲಾ ಒಂದು ರೀತಿಯ ಆರ್ಥಿಕ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ.

ಇಂತಹ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವಾಗಿ, ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಮಾಡುವುದು ಮೊದಲಿಂದಲೂ ರೂಡಿಯಲ್ಲಿದೆ.

ಆದರೆ ಪ್ರಾಥಮಿಕ ವೃತ್ತಿಯ ಅವಕಾಶ, ಸಮಯಾವಕಾಶ ಇತ್ಯಾದಿ ಅಂಶಗಳು ಇಲ್ಲಿ ಪೂರಕವಾಗಿರಬೇಕು. ಈಗಂತೂ ಇಂಟರ್ನೆಟ್‌ನಲ್ಲಿ ಪಾರ್ಟ್ ಟೈಮ್(Part Time) ಅಥವಾ ಫ್ರೀಲಾನ್ಸ್(Freelance) ಉದ್ಯೋಗಗಳು ದಂಡಿಯಾಗಿ ಸಿಗುತ್ತವೆ. ಹಾಗಾಗಿ, ಐಟಿ ಉದ್ಯೋಗಿಗಳು ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಕೆಲಸಗಳನ್ನು ಮಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.

ಇದನ್ನೂ ಓದಿ : https://vijayatimes.com/success-record-of-arasu-film/


ಅದರಲ್ಲೂ, 2020ರ ಮಾರ್ಚ್ ನಂತರ ದೇಶದಲ್ಲಿ ಕೋವಿಡ್‌(Covid 19) ಆವರಿಸಿದ ಬಳಿಕ ವರ್ಕ್ ಫ್ರಮ್‌ ಹೋಮ್‌ ಆರಂಭಗೊಂಡಿತು. ಈ ಅವಧಿಯ ಆರಂಭಿಕ ದಿನಗಳಲ್ಲಿ ಇಂಟರ್‌ನೆಟ್‌, ವರ್ಕ್ ಪ್ಲೇಸ್‌ ಮತ್ತಿತರ ಸಮಸ್ಯೆಗಳು ಬಾಧಿಸಿದರೂ ಮನೆಯಲ್ಲೇ ಕೆಲಸ ಮಾಡುವುದನ್ನು ಐಟಿ ಉದ್ಯೋಗಿಗಳು(IT Employees) ಹೆಚ್ಚು ಇಷ್ಟಪಡಲು ಆರಂಭಿಸಿದರು.

ಈಗಲೂ ಶೇ.50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಅವಧಿಯಲ್ಲಿ ಕೆಲಸದ ಒತ್ತಡ ಕಡಿಮೆ ಇದ್ದುದರಿಂದ, ಐಟಿ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯ ನಂತರ ಉಳಿದ ಅವಧಿಯಲ್ಲಿ ಬೇರೆ ಕಂಪನಿಗಳಿಗೂ ಕೆಲಸ ಮಾಡಿಕೊಡುವ ಹೊಸ ಉದ್ಯೋಗದ ಸಾಧ್ಯತೆಯನ್ನು ಕಂಡುಕೊಂಡರು.

ಹೀಗಾಗಿ ಎರಡೆರಡು ಸಂಬಳಗಳು ಬರುವಂತಾಯಿತು. ಹೀಗೆ, ಒಂದೇ ಸಮಯದಲ್ಲಿ ಎರಡೆರಡು ಕಡೆ ಕೆಲಸ ಮಾಡುವುದನ್ನೇ ಮೂನ್‌ಲೈಟಿಂಗ್ ಎಂದು ಕರೆಯಲಾಗುತ್ತದೆ. ನೌಕರರು ತಮ್ಮ ಪ್ರಾಥಮಿಕ ಕೆಲಸದ ಸಮಯದ ನಂತರ, ಮತ್ತೊಂದು ಕೆಲಸ ಮಾಡಲು ಕೆಲವು ಕಡೆ ಅನುಮತಿಯಿದೆ.

ಸ್ವಿಗ್ಗಿಯಂತಹ(Swiggy) ಕೆಲವು ಸ್ಟಾರ್ಟ್‌ಅಪ್‌ಗಳು ಮತ್ತು ಯುನಿಕಾರ್ನ್‌ಗಳು ಈ ಅಭ್ಯಾಸವನ್ನು ಪ್ರೋತ್ಸಾಹಿಸಿವೆ, ಆದರೆ ಹೆಚ್ಚಿನ ಸಾಂಪ್ರದಾಯಿಕ ಕಂಪನಿಗಳು ಇದನ್ನು ಮೋಸ ಎಂದು ಪರಿಗಣಿಸುತ್ತವೆ. ಇಂತಹ ಮೂನ್‌ಲೈಟಿಂಗ್‌ನ ಕುರಿತು, ಕ್ಲೌಡ್ ಮೇಜರ್ ಐಬಿಎಂ(IBM) ಕೂಡ ಈ ಅಭ್ಯಾಸವು ನೈತಿಕವಾಗಿಲ್ಲ ಮತ್ತು ಕಂಪನಿಯು ಕೆಲಸದ ಸ್ಥಳದಲ್ಲಿ ಅಂತಹ ನಡವಳಿಕೆಯನ್ನು ಉತ್ತೇಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : https://vijayatimes.com/operation-nia-new-delhi/

ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, “ಕಂಪನಿಯ ಸ್ಥಾನವು ದೇಶದ ಒಟ್ಟಾರೆ ಉದ್ಯಮದ ಸ್ಥಾನವಾಗಿದೆ. ನಮ್ಮ ಎಲ್ಲಾ ಕೆಲಸಗಾರರು ಉದ್ಯೋಗದಲ್ಲಿರುವಾಗ, ಅವರು ಐಬಿಎಂಗಾಗಿ ಪೂರ್ಣ ಸಮಯ ಕೆಲಸ ಮಾಡಲಿದ್ದೇವೆ ಎಂದು ಹೇಳುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆ.

ಹಾಗಾಗಿ ಮೂನ್‌ಲೈಟಿಂಗ್ ಎಂದು ಕರೆಯಲ್ಪಡುವ ಮತ್ತೊಂದು ಕೆಲಸ ಮಾಡುವುದು ನೈತಿಕವಾಗಿ ಸರಿಯಲ್ಲ” ಎಂದು ಅವರು ಹೇಳಿದರು. ಅದೇ ರೀತಿ, ಐ.ಟಿ. ಉದ್ಯೋಗಿಗಳು ಒಂದು ಕಂಪನಿಗೆ ಕೆಲಸ ಮಾಡುತ್ತಲೇ, ಇನ್ನೊಂದು ಕಂಪನಿಗಾಗಿಯೂ ಕೆಲಸ ಮಾಡಿಕೊಡುವ ಪ್ರವೃತ್ತಿಯನ್ನು ವಿಪ್ರೋದ ಅಧ್ಯಕ್ಷ ಪ್ರೇಮ್‌ಜಿ ಅವರು ಈ ಹಿಂದೆ ಕಟುವಾಗಿ ಟೀಕಿಸಿದ್ದರು.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ ಪ್ರೇಮ್‌ಜಿ ಅವರು, “ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡುವವರಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ಇಲ್ಲ ಎಂದು ಹೇಳಿದ್ದಾರೆ. ಕೋವಿಡ್‌ ವೇಳೆ ನಮ್ಮ ಕಂಪನಿಯ 300 ಸಿಬ್ಬಂದಿಗಳು, ನಮ್ಮ ಪ್ರತಿಸ್ಪರ್ಧಿ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದರು.

https://youtu.be/gLbs3m60lIY ಶಾಲೆಯ ದುಸ್ಥಿತಿ!

ಇಂತಹ ನಡತೆ ಕಾನೂನಿಗೆ ವಿರುದ್ಧವಾಗಿದ್ದು, ಅದರಂತೆ ನಾವು ಆ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೇವೆ, ಮೂನ್‌ಲೈಟಿಂಗ್ ಮಾಡಿದ್ದ ತನ್ನ 300 ಸಿಬ್ಬಂದಿಗಳನ್ನು ವಿಪ್ರೋ ಕಂಪನಿ ಕೆಲಸದಿಂದ ವಜಾ ಮಾಡಿದೆ” ಎಂದು ತಿಳಿಸಿದ್ದಾರೆ.
Exit mobile version