ಮನೆಗೆಲಸದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ ; ಎದ್ದೇಳಲಾಗದೆ ಸ್ಥಳದಲ್ಲೇ ಮೂತ್ರ ಮಾಡಿಕೊಂಡ ಮಹಿಳೆ!

New Delhi

ದೆಹಲಿಯಲ್ಲಿ(NewDelhi) ಮನೆ ಕೆಲಸದ(Home Maid) ಮಹಿಳೆಗೆ ಆಕೆಯ ಮನೆಯ ಮಾಲೀಕರಾದ ದಂಪತಿಗಳು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಹೊಡೆಯುವುದಲ್ಲದೇ, ಆಕೆಯ ಕೂದಲನ್ನು ಕತ್ತರಿಸಿ ಎದ್ದೇಳಲಾಗದಂತೆ ಮೂಲೆಯಲ್ಲಿರುವಂತೆ ಮಾಡಿದ್ದಾರೆ.

ನವದೆಹಲಿಯ ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನಲ್ಲಿ ಮನೆ ಕೆಲಸ ಮಾಡುತ್ತಿದ್ದ 48ರ ಹರೆಯದ ಮಹಿಳೆಯನ್ನು ಆಕೆಯ ಮಾಲೀಕರು ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರ ಪ್ರಕಥಣೆಯಲ್ಲಿ ನೀಡಿರುವ ವರದಿ ಅನುಸಾರ, ಸಂತ್ರಸ್ತ ಮಹಿಳೆ ರಜನಿ, ಪಶ್ಚಿಮ ಬಂಗಾಳದ ಸಿಲಿಗುರಿಯವಳು ಮತ್ತು ದೆಹಲಿಯಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಳು. ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಿಲಿಗುರಿಯಲ್ಲಿರುವ ಆಕೆಯ ಕುಟುಂಬಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ.

ಆರೋಪಿ ದಂಪತಿಗಳು ಮಹಿಳೆಗೆ ಮನೆಕೆಲಸಕ್ಕಾಗಿ ತಿಂಗಳಿಗೆ 7,000 ಸಂಬಳ ನೀಡುತ್ತಿದ್ದರು ಎನ್ನಲಾಗಿದೆ. ಉಪ ಪೊಲೀಸ್ ಆಯುಕ್ತ ಘನಶ್ಯಾಮ್ ಬನ್ಸಾಲ್ ಮಾತನಾಡಿ, ಮೇ 17 ರಂದು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಮಹಿಳೆಯೊಬ್ಬರ ಎಂಎಲ್‌ಸಿ(ವೈದ್ಯಕೀಯ-ಕಾನೂನು ಪ್ರಕರಣ) ಬಗ್ಗೆ ಮಾಹಿತಿ ಬಂದಿತು. ಎಂಎಲ್‌ಸಿ ಮಾಹಿತಿ ಪ್ರಕಾರ, ಆಕೆಯ ಮನೆಯ ಮಾಲೀಕರಿಂದ ದೈಹಿಕ ಹಲ್ಲೆ ನಡೆಸಲಾಗಿದೆ ಎಂಬ ಹೇಳಿಕೆ ಕೇಳುತ್ತಿದ್ದಂತೆ, ಪೊಲೀಸರು ಆಸ್ಪತ್ರೆಗೆ ತಲುಪಿ ರಜನಿ ಹೇಳಿಕೆಯನ್ನು ಆಲಿಸಿ ದಾಖಲಿಸಿಕೊಂಡಿದ್ದಾರೆ.

ಹೇಳಿಕೆಯಲ್ಲಿ ಮನೆಯ ಮಾಲೀಕರಾದ ಅಭಿನೀತ್ ಮತ್ತು ಅವನ ಹೆಂಡತಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಆಕೆಯ ಕೂದಲನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು, ಅಕ್ರಮ ಬಂಧನ ಮತ್ತು ಹಲ್ಲೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ದಂಪತಿಗಳನ್ನು ಶೀಘ್ರವೇ ಬಂಧಿಸಲು ಪ್ರಯತ್ನ ನಡೆಯತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.

Exit mobile version