ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭ. 4 ತಿಂಗಳ ಪರ್ಯಾಯ ಮಾರ್ಗ ಬಳಸಲು ಸೂಚನೆ

Bengaluru: ಹೆಬ್ಬಾಳ ಮೇಲ್ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ (Work Progress in Hebbal Flyover) ಸಂಚಾರಿ ಪೊಲೀಸರು, ಬಿಡಿಎ (Traffic Police)

ಅಧಿಕಾರಿಗಳು ತಜ್ಞರ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದರು. ಆಗ ಫ್ಲೈ ಓವರ್ (Flyover) ವಿಸ್ತರಣೆಯ ಯೋಜನೆ ರೂಪಿಸಲಾಗಿತ್ತು. ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ವಹಣೆ ಬಗ್ಗೆ ಅಧ್ಯಯನ

ನಡೆಸಿದಾಗ ಕೆ. ಆರ್. ಪುರ ಲೂಪ್ ಮತ್ತು ಕ್ಯಾರೇಜ್ ಮಾರ್ಗದ (Work Progress in Hebbal Flyover) ವಿಭಜಕದಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದಿತ್ತು.

ಮೇಲ್ಸೇತುವೆ ರಸ್ತೆಯನ್ನು ಮತ್ತೆ ತೆರೆಯಲು ಸಾಧ್ಯವಾದರೆ ಕೆ. ಆರ್.‌ಪುರ (K R Pura) ಮಾರ್ಗದ (ಬೆಂಗಳೂರು ನಗರದ ಕಡೆ) ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ಅಂದಾಜಿಸಲಾಗಿತ್ತು.

ಆಗ ತಜ್ಞರು ಸಹ ಇದರಿಂದಾಗಿ ಫ್ಲೈ ಓವರ್‌ ಮೇಲೆ ವಾಹನ ದಟ್ಟಣೆಯ ಒತ್ತಡ ಕಡಿಮೆಯಾಗಲಿದೆ ಎಂದು ಪೊಲೀಸರಿಗೆ ತಿಳಿಸಿದ್ದರು. ಈ ಪ್ರಸ್ತಾವನೆಗೆ ಬಿಡಿಎ ಅಧಿಕಾರಿಗಳು ಸಹ ಒಪ್ಪಿಗೆ ನೀಡಿ ಹೆಬ್ಬಾಳದಲ್ಲಿ

ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಆರಂಭವಾಗಿತ್ತು. ಇನ್ನು ಸುಮಾರು 4 ತಿಂಗಳ ಕಾಲ ಹೆಬ್ಬಾಳ ಜಂಕ್ಷನ್‌ನಲ್ಲಿ (Hebbala Junction) ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ಆದ್ದರಿಂದ ಸವಾರರು ಮಾಹಿತಿ ತಿಳಿದು ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಉತ್ತಮ ಎಂದು ಮಂಗಳವಾರ ಹೆಬ್ಬಾಳ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಬ್ಬಾಳ ಫ್ಲೈ ಓವರ್‌ಗೆ

ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ನಿರ್ಣಯಿಸಿದೆ ಹಾಗಾಗಿ ಕೆ. ಆರ್. ಪುರ ಲೂಪ್ ಮುಖ್ಯ ಟ್ರ್ಯಾಕ್ ಬಳಿ ಸೇರುವ

ಎರಡು ಸ್ಕ್ಯಾನ್‌ಗಳನ್ನು ಕಿತ್ತು ಹಾಕಲಾಗುತ್ತದೆ. ಇದರಿಂದ ಕೆ. ಆರ್. ಪುರ ಲೂಪ್‌ನಲ್ಲಿ ಮುಂದಿನ 4 ತಿಂಗಳವರೆಗೆ ನಗರದ ಕಡೆಗೆ ಸಂಚಾರ ನಿಧಾನವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದ್ದರಿಂದ ಕೆ. ಆರ್. ಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನ ಸವಾರರು ಪರ್ಯಾಯ ಮಾರ್ಗಗಳಾದ ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ, ನಾಗವಾರ-ಟ್ಯಾನರಿ

ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.ಅದೇ ರೀತಿ ಹೆಗಡೆ ನಗರ-ಥಣಿಸಂದ್ರ ಕಡೆಯಿಂದ ಬರುವ ಜನರು ಜಿ.ಕೆ.ವಿ.ಕೆ-ಜಕ್ಕೂರು (G.K.V.K-Jakkuru) ರಸ್ತೆ ಮೂಲಕ

ಪರ್ಯಾಯ ಮಾರ್ಗದಲ್ಲಿ ನಗರ ಪ್ರವೇಶಿಸುತ್ತಾರೆ. ವಾಹನ ಸವಾರರು ಸಂಚಾರಿ ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ .

ಇದನ್ನು ಓದಿ: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀಲ್ ಬೋಸ್ ಕಣಕ್ಕೆ

Exit mobile version