ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೊಸ ದಾಖಲೆ ಬರೆದ ನೀರಜ್‌ ಚೋಪ್ರಾ

ಬುಡಾಪೆಸ್ಟ್‌: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ(World Athletics Championships) ಬಂಗಾರದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌(Athlete) ಎಂಬ ಹಿರಿಮೆಗೆ ಟೋಕಿಯೊ ಒಲಿಂಪಿಕ್‌ ಚಾಂಪಿಯನ್‌(tokyo olympic champion) ನೀರಜ್‌ ಚೋಪ್ರಾ(Neeraj Chopra) ಪಾತ್ರರಾಗಿದ್ದಾರೆ.

25 ವರ್ಷದ ನೀರಜ್‌ 88.17 ಮೀಟರ್‌ ಜಾವೆಲಿನ್‌ (Javelin)ಎಸೆಯುವುದರೊಂದಿಗೆ ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಭಾನುವಾರ ನಡೆದ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಲಾಂಗ್‌ ಜಂಪರ್‌(Long jumper) ಅಂಜು ಬಾಬಿ(Anju Bobby) 2005ರಲ್ಲಿ ಕಂಚಿನ ಪದಕ ಗೆದ್ದ ನಂತರ ನೀರಜ್‌ ಬೆಳ್ಳಿ ಪದಕವನ್ನು 2022ರಲ್ಲಿ ಜಯಿಸಿದ್ದರು ಅದರಂತೆ ಈ ಬಾರಿ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ : ದಂಡ ಕಟ್ಟಿ: 2019 ಕ್ಕಿಂತ ಮುಂಚಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ, ಇಲ್ಲವೇ ದಂಡ ಕಟ್ಟಿ !

ಹರಿಯಾಣದ(Haryana) ನೀರಜ್‌ ಚೋಪ್ರಾ 88.77 ಮೀಟರ್‌ ಜಾವೆಲಿನ್‌ ಎಸೆದು ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ಫೈನಲ್‌ಗೆ(Final) ಅರ್ಹತೆ ಗಳಿಸಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಅಲ್ಲದೆ, ಫೈನಲ್‌ಗೆ ಮೂವರು ಭಾರತೀಯರು ಡಿ.ಪಿ. ಮನು(D.P Manu) ಮತ್ತು ಕಿಶೋರ್‌ ಜೇನಾ(Kishore Jena) ಸೇರಿ ಅರ್ಹತೆ ಗಳಿಸಿ ಇತಿಹಾಸ ನಿರ್ಮಿಸಿದ್ದರು. ಪಾಕಿಸ್ತಾನದ ಅರ್ಶದ್‌(Arshad Nadeem) (87.82ಮೀ.) ಮತ್ತು ಜೆಕ್‌ ಗಣರಾಜ್ಯದ ಜಾಕೂಬ್‌ ವಡ್ಲೆಜ್ಜ್ (86.67ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಮೊದಲ ಯತ್ನದಲ್ಲಿ ಫೌಲ್ ಮಾಡಿದ ನೀರಜ್‌, 88.17 ಮೀ., 86.32 ಮೀ., 84.64 ಮೀ., 87.73 ಮೀ. 83.98 ಮೀ. ಜಾವೆಲಿನ್‌ಎಸೆದರು. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಜಾಗತಿಕ ಎಲ್ಲಾಅಥ್ಲೆಟಿಕ್ಸ್‌ ಕೂಟಗಳಲ್ಲಿ ಪದಕ ಗೆದ್ದ ಗೌರವಕ್ಕೆ ನೀರಜ್‌ ಭಾಜನರಾಗಿದ್ದಾರೆ.

ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಂಘರ್ಷ : ಹಲವು ಕ್ಷೇತ್ರಗಳಲ್ಲಿ ಭಾರೀ ಲಾಬಿ

ಮನು, ಕಿಶೋರ್‌ಗೆ ನಿರಾಸೆ:
ಕರ್ನಾಟಕದ ಡಿ.ಪಿ. ಮನು(D.P Manu) (6ನೇ ಸ್ಥಾನ )ಮತ್ತು ಒಡಿಶಾದ ಕಿಶೋರ್‌ ಜೇನಾ (5ನೇ ಸ್ಥಾನ) ಮೊದಲ ಬಾರಿ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು ಇವರು ಪೋಡಿಯಮ್‌ನಲ್ಲಿ ಸ್ಥಾನ ಪಡೆಯಲು ಎಡವಿದರು.

ನೀರಜ್‌ ಚೋಪ್ರಾ ಗೆದ್ದಿರುವ ಪ್ರಶಸ್ತಿಗಳು

2016ರ ದಕ್ಷಿಣ ಏಷ್ಯನ್‌ ಗೇಮ್ಸ್‌ ಚಿನ್ನ
2016ರ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌
2017ರ ಏಷ್ಯನ್‌ ಚಾಂಪಿಯನ್‌ಷಿಪ್‌ ಚಿನ್ನ
2018ರ ಏಷ್ಯನ್‌ ಗೇಮ್ಸ್‌ ಚಿನ್ನ
2018ರ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ
2020ರ ಟೋಕಿಯೊ ಒಲಿಂಪಿಕ್ಸ್‌ ಚಿನ್ನ
2022ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಬೆಳ್ಳಿ
2022ರ ಡೈಮಂಡ್‌ ಲಿಂಗ್‌ ಚಿನ್ನ
2023 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಚಿನ್ನ

ರಶ್ಮಿತಾ ಅನೀಶ್

Exit mobile version