Kolkata: ಕೋಲ್ಕತ್ತಾದ (Worldcup Match – Palestine Flag) ಈಡನ್ ಗಾರ್ಡನ್ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ನ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಇಸ್ರೇಲ್
(Israel)– ಹಮಾಸ್ ಯುದ್ಧದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಪ್ಯಾಲೆಸ್ತೀನ್ (Palestine) ಧ್ವಜವನ್ನು ಪ್ರದರ್ಶಿಸಿದ ನಾಲ್ವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ (Eden Garden) ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಕ್ರಿಕೆಟ್ (Cricket) ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜವನ್ನು ಬೀಸಿದ್ದಕ್ಕಾಗಿ
ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೀಡಾಂಗಣದ ಜಿ1 ಮತ್ತು ಎಚ್1 ಬ್ಲಾಕ್ಗಳ ನಡುವೆ ಈ ಘಟನೆ ನಡೆದಿದೆ. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ (Bangladesh)
ಬ್ಯಾಟಿಂಗ್ ಮಾಡುವಾಗ ಪ್ಯಾಲೆಸ್ತೀನ್ (Worldcup Match – Palestine Flag) ಧ್ವಜವನ್ನು ಪ್ರದರ್ಶಿಸಲಾಗಿದೆ.
ಭಯೋತ್ಪಾದಕ ಗುಂಪು ಹಮಾಸ್ (Hamas) ಆಳ್ವಿಕೆ ನಡೆಸುತ್ತಿರುವ ಪ್ಯಾಲೇಸ್ಟಿನಿಯನ್ ಎನ್ಕ್ಲೇವ್ ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ
ಇದನ್ನು ಪ್ರದರ್ಶಿಸಲಾಯಿತು. ವೈರಲ್ (Viral) ಆಗಿರುವ ಈ ವೀಡಿಯೊದಲ್ಲಿ, ಮೂರು ಜನರು ಪ್ಯಾಲೆಸ್ತೀನ್ ಧ್ವಜವನ್ನು ಹಿಡಿದಿದ್ದಾರೆ. ಮೂವರಲ್ಲಿ ಒಬ್ಬರು ಪ್ಯಾಲೆಸ್ತೀನ್ ಮತ್ತು ಬಾಂಗ್ಲಾದೇಶದ
ಧ್ವಜಗಳನ್ನು ಸಹ ಹಿಡಿದಿದ್ದಾರೆ. ಪ್ಯಾಲೇಸ್ಟಿನಿಯನ್ ಧ್ವಜ ಪ್ರದರ್ಶನವನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಗಮನಿಸಿ, ಅವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶೆಹ್ನಾಜ್ (Shehnaz) ಎಂದು ಗುರುತಿಸಲಾಗಿದ್ದು, ಈ ಘಟನೆಯು ವಿವಾದಾಸ್ಪದವಾಗುವುದನ್ನು ನಾನು ನಿರೀಕ್ಷಿಸಿರಲಿಲ್ಲ. ಯುದ್ಧ ನಡೆಯುತ್ತಿದೆ ಎಂದು ನಾನು ಕೇಳಿದೆ.
ನಾವು ಪ್ಯಾಲೆಸ್ತೀನ್ ಧ್ವಜವನ್ನು ಬೀಸುವ ಮೂಲಕ ಅದರ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದ್ದೇವೆ. ಧ್ವಜವನ್ನು ಬೀಸುವಾಗ ವಿವಾದವಾಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾನೆ.
ಇನ್ನು ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ (BJP) ನಾಯಕ ಶಿಶಿರ್ ಬಜೋರಿಯಾ, ವಿಶ್ವಕಪ್ ಪಂದ್ಯಕ್ಕಾಗಿ ಈಡನ್ ಗಾರ್ಡನ್ಸ್ನಲ್ಲಿ ನಿಯೋಜಿಸಲಾಗಿದ್ದ ಕೋಲ್ಕತ್ತಾ ಪೊಲೀಸರ ಪಾತ್ರವನ್ನು
ಪ್ರಶ್ನಿಸಿದ್ದಾರೆ. “ಇದನ್ನು ತಡೆಯುವುದು ಪೊಲೀಸರ ಜವಾಬ್ದಾರಿ. ಯಾರಾದರೂ ಇದನ್ನು ಹೇಗೆ ಮಾಡಬಹುದು? ಇದು ರಾಷ್ಟ್ರೀಯ ಪರಿಣಾಮವನ್ನು ಬೀರುತ್ತದೆ. ಪಶ್ಚಿಮ ಬಂಗಾಳದಲ್ಲಿ ತುಷ್ಟೀಕರಣ
ರಾಜಕೀಯವಿದೆ ಎಂದು ಬಜೋರಿಯಾ (Bajoria) ಟೀಕಿಸಿದ್ದಾರೆ.
ಇದಕ್ಕೂ ಮೊದಲು, ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammed Rizwan) ಶ್ರೀಲಂಕಾ ವಿರುದ್ಧ ಗಳಿಸಿದ ಶತಕವನ್ನು ‘ಗಾಜಾದಲ್ಲಿರುವ ಸಹೋದರ ಸಹೋದರಿಯರಿಗೆ’
ಅರ್ಪಿಸಿದಾಗ ವಿವಾದ ಎದ್ದಿತ್ತು. ಬಳಿಕ ಆ ಟ್ವೀಟ್ ಅನ್ನು ಡಿಲೀಟ್ (Delete) ಮಾಡಲಾಗಿತ್ತು.
ಇದನ್ನು ಓದಿ: ಶಿವಸೇನೆ ಉದ್ಧವ್ ಠಾಕ್ರೆ ಬಣದಿಂದ ಬೆಳಗಾವಿ ಗಡಿ ಪ್ರವೇಶಕ್ಕೆ ಯತ್ನ: ಪೊಲೀಸರ ವಶಕ್ಕೆ