ಪ್ರತಿಭಟನಾನಿರತ ಕುಸ್ತಿಪಟುಗಳು ತಾವು ಪಡೆದ ಪದಕಗಳನ್ನು ಗಂಗಾ ನದಿಗೆ ಎಸೆಯಲು ನಿರ್ಧಾರ : ಇವರು ಇಲ್ಲಿಯವರೆಗೆ ಗೆದ್ದ ಪದಕಗಳೆಷ್ಟು?

ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ (Federation of India) ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕುಸ್ತಿಪಟುಗಳು ತಾವು ಪಡೆದ ಪದಕಗಳನ್ನು ತಿರಸ್ಕರಿಸಲು (Wrestlers throw their metals) ಸಾಮೂಹಿಕ ನಿರ್ಧಾರ ಕೈಗೊಂಡಿದ್ದಾರೆ. ಮಂಗಳವಾರ ಸಂಜೆ 6 ಗಂಟೆಗೆ ಪದಕಗಳನ್ನು ಗಂಗಾ (Ganga) ನದಿಗೆ ಎಸೆಯುತ್ತೇವೆ ಎಂಬ ನಿರ್ಧಾರ ಮಾಡಿದ್ದಾರೆ. ಪ್ರತಿಭಟನಾನಿರತರಾಗಿರುವ ಈ ಕುಸ್ತಿಪಟುಗಳು ಗೆದ್ದ ಪದಕಗಳೆಷ್ಟು?, ಪ್ರಶಸ್ತಿಗಳು ಯಾವುವು? ಇಲ್ಲಿದೆ ಮಾಹಿತಿ

ಸಾಕ್ಷಿ ಮಲಿಕ್ :
ಫ್ರೀಸ್ಟೈಲ್ (Freestyle) ಕುಸ್ತಿಪಟು ಸಾಕ್ಷಿ ಮಲಿಕ್. 2016 ರಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ 58 ಕೆಜಿ ವಿಭಾಗದಲ್ಲಿ

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಾಕ್ಷಿ ಮಲಿಕ್ (Sakshi malik) ಪಾತ್ರರಾಗಿದ್ದರು.ಗ್ಲಾಸ್ಕೋದಲ್ಲಿ 2014ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾಕ್ಷಿ ಮಲಿಕ್ ಬೆಳ್ಳಿ ಪದಕ ಮೂಡಿಗೇರಿಸಿದ್ದರು.

ದೋಹಾದಲ್ಲಿ 2015ರಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದಾರೆ.ಅಷ್ಟೇ ಅಲ್ಲದೆ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ,2016 ರಲ್ಲಿ ಚಂದ್ ಖೇಲ್ ರತ್ನ ಪ್ರಶಸ್ತಿ ಗಳಿಸಿದ್ದಾರೆ.

ವಿನೇಶ್ ಫೋಗಟ್ :
ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂದರೆ ಅವರೇ ವಿನೇಶ್ ಫೋಗಟ್ (Vinesh Phogat) .

ಅಷ್ಟೇ ಅಲ್ಲದೆ ಒಂದಕ್ಕಿಂತ ಹೆಚ್ಚು ಪದಕಗಳನ್ನು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಮತ್ತು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ (Wrestlers throw their metals) ಅವಾರ್ಡ್ಸ್ಗೆ 2019 ರಲ್ಲಿ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಅಥ್ಲೆಟ್ ವಿನೇಶ್ ಫೋಗಟ್.

2018 ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಮತ್ತು ಕಾಮನ್‌ವೆಲ್ತ್ (Common Wealth) ಗೇಮ್ಸ್‌ನಲ್ಲಿ ಇವರು ಚಿನ್ನದ ಪದಕವನ್ನು ಸಹ ಗೆದ್ದಿದ್ದಾರೆ.

ಅಷ್ಟೇ ಅಲ್ಲದೆ ಅರ್ಜುನ ಪ್ರಶಸ್ತಿ ಮತ್ತು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಕೂಡ ಭಜನರಾಗಿದ್ದಾರೆ.

ಬಜರಂಗ್ ಪುನಿಯಾ :

ಫ್ರೀಸ್ಟೈಲ್ ಕುಸ್ತಿಪಟು ಬಜರಂಗ್ ಪುನಿಯಾ (Punia) .2020 ರಲ್ಲಿ ನಡೆದ ಟೋಕಿಯೊ (Tokyo) ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಪುನಿಯಾ ಪಡೆದುಕೊಂಡಿದ್ದಾರೆ.

4 ಪದಕಗಳನ್ನು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಎಂದರೆ ಅವರೇ ಪುನಿಯಾ.

ಅಷ್ಟೇ ಅಲ್ಲದೆ ಪದ್ಮಶ್ರೀ ಪ್ರಶಸ್ತಿ,ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ,ಮತ್ತು 2020 ರಲ್ಲಿ FICCI ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ ಕೂಡ ಗಳಿಸಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) , ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಭಾರತದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರೂ ಆಗಿದ್ದು,

ಪ್ರಸ್ತುತ ಎರಡು ಪ್ರತ್ಯೇಕ ಎಫ್‌ಐಆರ್‌ಗಳಲ್ಲಿ (FIR)ಲೈಂಗಿಕ ದೌರ್ಜನ್ಯದ ಎರಡು ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ, ಕುಸ್ತಿಪಟುಗಳು ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ,

ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಏಪ್ರಿಲ್ 23 ರಂದು ಜಂತರ್ ಮಂತರ್‌ನಲ್ಲಿ (Jantar Mantar) ಪ್ರಾರಂಭವಾದ ಪ್ರತಿಭಟನೆಯು ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಹೃದಯ ವಿದ್ರಾವಕ ದೃಶ್ಯಗಳಿಂದ ಗುರುತಿಸಲ್ಪಟ್ಟಿದೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಪೊಲೀಸರು ಕುಸ್ತಿಪಟುಗಳನ್ನು ಬಂಧಿಸಿ ಬಲವಂತವಾಗಿ ವಶಕ್ಕೆ ತೆಗೆದುಕೊಂಡರು.

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ತಮ್ಮ ಉದ್ದೇಶದ ಬಗ್ಗೆ ಗಮನ ಹರಿಸುವ ಉದ್ದೇಶದಿಂದ ಮಂಗಳವಾರ ಸಂಜೆ 6 ಗಂಟೆಗೆ ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಹಾಕಲು ನಿರ್ಧರಿಸಿದ್ದಾರೆ.

ಇದರ ಬೆನ್ನಲ್ಲೇ ಕುಸ್ತಿಪಟುಯೊಬ್ಬರು ಇಂಡಿಯಾ ಗೇಟ್ (India Gate) ಬಳಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ರಶ್ಮಿತಾ ಅನೀಶ್

Exit mobile version