ಯಶಸ್ವಿಯಾಗಿ ಉಡಾವಣೆ ಯಾಯಿತು ವರ್ಷದ ಮೊದಲ ಉಪಗ್ರಹ

Free Satellite Internet

ಶ್ರೀಹರಿಕೋಟಾ, ನ. 07: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ ಡಿಎಸ್ ಸಿ) ಎಸ್ ಆರ್ ಎಚ್ ಆರ್ ನಿಂದ 9 ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹಕವು ತನ್ನ 51ನೇ ಮಿಷನ್ (ಪಿಎಸ್ ಎಲ್ ವಿ-ಸಿ49) ಇಓಎಸ್-01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಉಡಾವಣೆ ಮಾಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇರಿದಂತೆ ಒಂಬತ್ತು ಅಂತಾರಾಷ್ಟ್ರೀಯ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹನ (ಪಿಎಸ್ ಎಲ್ ವಿ)-ಸಿ49 ಉಪಗ್ರಹವನ್ನ ಶನಿವಾರ ಮಧ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ 2020ರ ನವೆಂಬರ್ 7ರಂದು ಉಡಾವಣೆಯನ್ನ ತಾತ್ಕಾಲಿಕವಾಗಿ 1502 Hrs IST ನಲ್ಲಿ ನಿಗದಿಮಾಡಲಾಗಿದೆ’ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಭಾರತದ ಪಿಎಸ್ ಎಲ್ ವಿ-ಸಿ49 ಹಯು EOS-01 ಅನ್ನ ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಉಡಾವಣೆ ಮಾಡಿದೆ.

Exit mobile version