ಚಹಾ, ಸಿಗರೇಟ್ ತಂದು ಕೊಡುವ ರೌಡಿಯಿಂದ ನಾನೇನು ಕಲಿಯಬೇಕಿಲ್ಲ : ಡಿಕೆಶಿಗೆ ಯತ್ನಾಳ್ ಟಾಂಗ್!

Basavangowda

ಕೊತ್ವಾಲ್ ರಾಮಚಂದ್ರನಿಗೆ(Kotwal Ramachandra) ಚಹಾ(Tea), ಸಿಗರೇಟು(Cigerate) ತಂದು ಕೊಡುವ ಕಾರ್ಯ ಮಾಡುತ್ತಿದ್ದ ಪುಡಿ ರೌಡಿಯಿಂದ ನಾನೇನು ಕಲಿಸುವ ಅವಶ್ಯಕತೆ ನನಗಿಲ್ಲ.

ನಾನು ಉತ್ತಮ ರಾಜಕೀಯ(Politics) ಮತ್ತು ಕೌಟುಂಬಿಕ(Family) ಹಿನ್ನಲೆ ಹೊಂದಿದ್ದೇನೆ. ರೌಡಿಗಳಿಗೆ ಬಕೆಟ್ ಹಿಡಿದು ರಾಜಕೀಯಕ್ಕೆ ಬಂದಿಲ್ಲ ಎಂದು ವಿಜಯಪುರದ(Vijayapura) ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil Yathnal) ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‍ಗೆ(DK Shivkumar) ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮಾನ ಇದ್ದವರಿಗೆ ಮಾನನಷ್ಟ ಆಗುತ್ತೆ, ಮಾನವಿಲ್ಲದವರಿಗೆ ಮಾನನಷ್ಟ ಎಲ್ಲಿ ಆಗುತ್ತೇ? ಡಿ.ಕೆ ಶಿವಕುಮಾರ್ ಈಗಾಗಲೇ ಒಂದು ಬಾರಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇನ್ನು ಮತ್ತೇನು ಹಾಕ್ತಾನೆ. ಹಣ ಇದೆ ಎಂದು ಹಾಕ್ತಾನೆ. ಹಾಕಲಿ ಅದಕ್ಕೆಲ್ಲಾ ಹೆದರುವ ಜಾಯಮಾನ ನನ್ನದಲ್ಲ. ಏನಾಗುತ್ತೋ ನೋಡೋಣ ಎಂದು ಸವಾಲು ಹಾಕಿದರು.

ಧ್ವನಿವರ್ಧಕ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಅನಿಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡಬೇಕು. ಸುಪ್ರೀಂಕೋರ್ಟ್ ಆದೇಶವನ್ನು ಯತಾವತ್ತಾಗಿ ಪಾಲಿಸಬೇಕು. ಈ ಕೂಡಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಈಗಾಗಲೇ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡುವಲ್ಲಿ ದಿಟ್ಟಹೆಜ್ಜೆ ಇಟ್ಟಿದೆ.

20 ಸಾವಿರಕ್ಕೂ ಹೆಚ್ಚು ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡಿದೆ. ನಮ್ಮ ರಾಜ್ಯದಲ್ಲಿಯೂ ಈ ರೀತಿಯ ಕಾರ್ಯ ನಡೆಯಬೇಕು. ನಮ್ಮ ರಾಜ್ಯದ ಗೃಹ ಸಚಿವರು ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಮಸೀದಿ, ಚರ್ಚ್ ಮತ್ತು ದೇವಸ್ಥಾನ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು. ಈ ರೀತಿ ನಿಯಮ ಬಾಹಿರವಾಗಿ ಧ್ವನಿವರ್ಧಕಗಳನ್ನು ಬಳಸುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಇನ್ನು ಅಕ್ರಮ ಧ್ವನಿವರ್ಧಕಗಳನ್ನು ತೆಗೆಯಲು ಅವರು ಹೇಳಿದಂತೆ ಕೇಳದೆ ಹೋದ್ರೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದಂತೆ ದೇವಸ್ಥಾನಗಳಲ್ಲಿ ದಿನಕ್ಕೆ ಐದು ಬಾರಿ ಹನುಮಾನ್ ಚಾಲೀಸ್, ಭಜನೆ, ಸುಪ್ರಭಾತ ಹಾಕುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

Exit mobile version