22 ವರ್ಷ ರಾಜಕೀಯ ಏನು ಪ್ರಯೋಜನ? ; ತನ್ನ ಗ್ರಾಮಕ್ಕೆ ವಿದ್ಯುತ್ ಇಲ್ಲ, ಈಗ ಸಮುದಾಯಕ್ಕೆ ಏನು ಮಾಡ್ತಾರೆ? : YSR

YSR

ರಾಷ್ಟ್ರಪತಿ ಚುನಾವಣಾ(President Election) ಕಣ ಗದಿಗೆದರಿದೆ. ಈಗಾಗಲೇ ಬಿಜೆಪಿ(BJP) ದ್ರೌಪದಿ ಮುರ್ಮು(Draupadi Murmu) ಅವರನ್ನು ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮುರ್ಮು ಅವರು ಚುನಾಯಿತರಾದರೆ, ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ. ದ್ರೌಪದಿ ಮುರ್ಮು ಅವರು ಅತ್ಯಂತ ಕೆಳಹಂತದ ರಾಜಕೀಯ ವ್ಯವಸ್ಥೆಯಿಂದ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗುವವರೆಗೂ ಅನೇಕ ಸವಾಲುಗಳನ್ನು ಎದುರಿಸಿ, ಹೋರಾಟದ ಮೂಲಕ ಮುನ್ನಲೆಗೆ ಬಂದಿದ್ದಾರೆ.

ಬಿಜೆಪಿ(BJP) ನೇತೃತ್ವದ ಎನ್‍ಡಿಎ(NDA) ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಜಾರ್ಖಂಡ್‍ನ(Jharkhand) ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ವಿಪಕ್ಷಗಳು ದೆಹಲಿಯಲ್ಲಿ(New Delhi) ಸಭೆ ನಡೆಸಿ, ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾವನ್ನು ಅಭ್ಯರ್ಥಿಯಾಗಿ ಘೋಷಿಸಿದ್ದವು. ಇದೀಗ ಎನ್‍ಡಿಎ ಬುಡಕಟ್ಟು ಸಮುದಾಯಕ್ಕೆ(Tribal Community) ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾದರೆ, ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಸಮುದಾಯದ ಮಹಿಳೆಯಾಗಲಿದ್ದಾರೆ. ಇನ್ನು ಈ ಕುರಿತು ಟ್ವೀಟ್(Tweet) ಮಾಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು, ದ್ರೌಪದಿ ಮುರ್ಮು ಅವರು, ಸಮಾಜ ಸೇವೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಜೊತೆಗೆ ಶ್ರೀಮಂತ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಅವರು ಭಾರತದ ಶ್ರೇಷ್ಠ ರಾಷ್ಟ್ರಪತಿಯಾಗಲಿದ್ದಾರೆ ಎಂದಿದ್ದಾರೆ.

ಈ ಹೇಳಿಕೆಗಳ ಬೆನ್ನಲ್ಲೇ ಟಿ.ಸಿ.ಆರ್ ಪಕ್ಷದ(TCR Party) ಸಾಮಾಜಿಕ ಜಾಲತಾಣದ ಸಂಚಾಲಕರಾಗಿರುವ ವೈ. ಸತೀಶ್ ರೆಡ್ಡಿ(Y Sathish Reddy) ಟ್ವೀಟ್ ಮಾಡಿ, 22 ವರ್ಷ ರಾಜಕೀಯ ವೃತ್ತಿ, ಶಾಸಕಿಯಾಗಿ, ಮಂತ್ರಿಯಾಗಿ, ಗರ್ವನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆದ್ರೆ, ಅಧಿಕಾರದಲ್ಲಿದ್ದರೂ ಕೂಡ ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಿಕೊಟ್ಟಿಲ್ಲ. ಇನ್ನು ಸಮುದಾಯಕ್ಕೆ ಇವರು ಏನು ಕೊಡುಗೆ ನೀಡಲಿದ್ದಾರೆ? 22 ವರ್ಷದ ರಾಜಕೀಯದಲ್ಲಿದ್ದು ಏನು ಪ್ರಯೋಜನ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

Exit mobile version