‘ಜಿಲ್ಲಾ ನ್ಯಾಯಾಧೀಶರು’ ಎಂಬ ಬೋರ್ಡಿನ ಕಾರು ಬೈಕ್‌ಗೆ ಡಿಕ್ಕಿ; ಝೋಮ್ಯಾಟೋ ಡೆಲಿವರಿ ಯುವಕ ಸ್ಥಳದಲ್ಲೇ ಸಾವು!

Noida : ‘ಜಿಲ್ಲಾ ನ್ಯಾಯಾಧೀಶರು’ (District Judge) ಎಂಬ ಬೋರ್ಡ್‌ ಹೊಂದಿದ್ದ ಕಾರು ರಭಸವಾಗಿ ಬಂದು ಝೋಮ್ಯಾಟೋ (Zometo Delivery boy Died) ಡೆಲಿವರಿ ಯುವಕ ಸವಾರಿ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಝೋಮ್ಯಾಟೋ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಯುವಕ, ಕರ್ತವ್ಯ ನಿರತ ಸಾಗುವಾಗ ಸಾವನ್ನಪ್ಪಿರುವ ಬಗ್ಗೆ (Zomato Delivery boy Died) ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು,

ತನಿಖೆ ನಡೆಸುತ್ತಿರುವ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ನೀಡಿರುವ ವರದಿ ಅನುಸಾರ, ನೋಯ್ಡಾ (Noida) ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಥಲ ವೃತ್ತದ ಬಳಿ ಮುಂಜಾನೆ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಝೋಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಬಿಸ್ರಾಖ್‌ನ ಎಂದು ಗುರುತಿಸಲಾಗಿದ್ದು, ಅಪಘಾತದ ಬೆನ್ನಲ್ಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಯಿತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಕಾರು ಚಾಲಕ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ,
ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: https://vijayatimes.com/2023-odi-world-cup/

ಜಿಲ್ಲಾ ನ್ಯಾಯಾಧೀಶರು ಎಂಬ ಬೋರ್ಡಿನ ಕಾರೊಂದು ಝೋಮ್ಯಾಟೋ ಡೆಲಿವರಿ ಮಾಡುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.

ಅಪಘಾತಕ್ಕೀಡಾದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಥಾರ್ಥ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮತ್ತೊರ್ವ ಪೊಲೀಸರು ತಿಳಿಸಿದರು.

ಈ ಘಟನೆ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “ಬೈಕ್ ಸವಾರನನ್ನು ಬುಲಂದ್‌ಶಹರ್ ಮೂಲದವರು ಎನ್ನಲಾಗಿದೆ.

ಆದರೆ ಪ್ರಸ್ತುತ ಘಾಜಿಯಾಬಾದ್‌ನಲ್ಲಿ ವಾಸಿಸುತ್ತಿರುವ ಪರ್ವಿಂದರ್ ಕುಮಾರ್ ಎಂದು ಸ್ಪಷ್ಟಪಡಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಅವರು ನಿಧನರಾದರು.

ಯುವಕ ಝೋಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ (Delivery Executive) ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ಪರ್ವಿಂದರ್ ಕುಮಾರ್ ಅವರ ಕುಟುಂಬಕ್ಕೆ ಈ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಟೊಯೊಟಾ ಕೊರೊಲ್ಲಾ ಕಾರಿನ ಬಾನೆಟ್‌ನಲ್ಲಿ ಜಿಲ್ಲಾ ನ್ಯಾಯಾಧೀಶರು ಎಂಬ ಸ್ಟಿಕ್ಕರ್ ಇತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಕಾರಿನವರನ್ನು ಸಂಪರ್ಕಿಸಿ, ಸೆಕ್ಟರ್ 113 ಪೊಲೀಸ್ ಠಾಣೆಯ ಇನ್‌ಚಾರ್ಜ್ ಪ್ರಮೋದ್ ಕುಮಾರ್ ಅವರು ಭಾರತೀಯ ದಂಡ ಸಂಹಿತೆಯ,

ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಮತ್ತು 279 (ಅತ್ಯಾಕರ್ಷಕ ಚಾಲನೆ) ಅಡಿಯಲ್ಲಿ ಎಫ್‌ಐಆರ್ (FIR) ದಾ ಖಲಿಸಿದ್ದಾರೆ.

ಘಟನೆಯ ಸಮಯದಲ್ಲಿ ಕಾರಿನಲ್ಲಿ ಎಷ್ಟು ಜನರು ಇದ್ದರು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಸ್ಥಳದಲ್ಲಿ ಯಾರೂ ಪತ್ತೆಯಾಗಿಲ್ಲ. ಚಾಲಕ ಪರಾರಿಯಾಗಿದ್ದಾನೆ ಎಂದು ಕುಮಾರ್ ಪಿಟಿಐ (PTI) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವಾಹನವನ್ನು ಠಾಣೆಗೆ ತರಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Exit mobile version