ದೆಹಲಿ: ನಿಷೇಧಿತ ಪಬ್ ಜಿ ಗೇಮ್ ಶೀಘ್ರ ವಾಪಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಚೀನೀ ಪಾಲುದಾರಿಕೆ ಇದೆ ಎಂಬ ಕಾರಣಕ್ಕೆ ಭಾರತ ಸರ್ಕಾರವು ಇತ್ತೀಚೆಗೆ 117 ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಈ ಪೈಕಿ ಜನಪ್ರಿಯ ಪಬ್ಜಿ ಗೇಮ್ ಸಹ ಸೇರ್ಪಡೆಯಾಗಿತ್ತು.
ಈ ಆ್ಯಪ್ ಬ್ಯಾನ್ ಆಗಿದ್ದರಿಂದ ಕೋಟ್ಯಂತರ ಅಭಿಮಾನಿಗಳು ಆ್ಯಪ್ಅನ್ನು ವಾಪಸ್ ತರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಕ್ಕೊತ್ತಾಯ ವ್ಯಕ್ತಪಡಿಸಿದ್ದರು.
ಚೀನಾ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಟೆನ್ಸೆಂಟ್ ಎನ್ನುವ ಕಂಪನಿ ನಡೆಸುತ್ತಿದ್ದವು. ಇದು ಪಬ್ ಜಿ ಗೇಮ್ನ ಪೋಷಕ ಸಂಸ್ಥೆಯಾಗಿದೆ. ಇದರ ಮುಖ್ಯ ಪಾಲುದಾರಿಕೆಯು ದಕ್ಷಿಣ ಕೊರಿಯಾ ಹೊಂದಿತ್ತು. ಇದೀಗ ಟೆನ್ಸೆಂಟ್ ಕಂಪನಿಯ ಸಂಪೂರ್ಣ ಪಾಲುದಾರಿಕೆಯನ್ನು ಚೀನಾ, ದಕ್ಷಿಣ ಕೊರಿಯಾಗೆ ಬಿಟ್ಟುಕೊಟ್ಟಿದೆ.
ಇದರಿಂದಾಗಿ ಟೆನ್ಸೆಂಟ್ ಕಂಪನಿಯ ಮಾಲೀಕತ್ವವನ್ನು ದಕ್ಷಿಣ ಕೊರಿಯಾ ಹೊಂದಲಿದ್ದು, ಚೀನಾ ಕಂಪನಿ ಎನ್ನುವ ಕಪ್ಪು ಪಟ್ಟಿಯಿಂದ ಹೊರಬರಲಿದೆ. ಹಾಗಾಗಿ ಪಬ್ಜಿ ಗೇಮ್ ಸದ್ಯದಲ್ಲೇ ನಿಷೇಧದ ಸಂಕೋಲೆಯಿಂದ ಹೊರಬರಲಿದೆ.