ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ರ ತಂದೆ, ಪತ್ನಿ ಹಾಗೂ ಪುತ್ರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದ್ದರಿಂದ ಸಚಿವ ಸುಧಾಕರ್ ಅವರು ಕೂಡ ಹೋಂ ಕ್ವಾರೆಂಟೇನ್ ಗೆ ಈಗಾಗಲೇ ಒಳಗಾಗಿದ್ದು. ಇದೀಗ ಕ್ವಾರೆಂಟೈನ್ ಮುಗಿಸಿ ಮಂಗಳವಾರದಂದು ವಿಧಾನಸೌಧದಲ್ಲಿ ಕಾಣಿಸಿಕೊಂಡಿದ್ದಾರೆ. “ಎರಡು ಬಾರಿ ಟೆಸ್ಟ್ ಮಾಡಿಸಿದಾಗ ನನ್ನ ಕೊರೋನಾ ರಿಪೋರ್ಟ್ ನೆಗೆಟಿವ್ ಬಂದಿದೆ. ಇದೀಗ ಕ್ವಾರೆಂಟೈನ್ ಮುಗಿಸಿ ಕರ್ತವ್ಯಕ್ಕೆ ಹಾಜಾರಾಗಿದ್ದೀನಿ. ಇನ್ನೆರಡೇ ದಿನಗಳಲ್ಲಿ ಪತ್ನಿ ಹಾಗು ಪುತ್ರಿ ಕೂಡ ಡಿಸ್ಚಾರ್ಜ್ ಆಗಲಿದ್ದಾರೆ. ನನ್ನ ಕುಟುಂಬದವರು ಗುಣಮುಖವಾಗಲಿ ಎಂದು ಹಾರೈಸಿದ ಎಲ್ಲರಿಗು ಧನ್ಯವಾದಗಳು” ಎಂದು ಸಚಿವರು ವಿಧಾನಸೌಧಾದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಈ ಹಿಂದೆ ಲ್ಯಾಬ್ ತೆರೆಯಲು ಸೂಚನೆ ನೀಡಿದೆ. ಕೇವಲ 2 ಲ್ಯಾಬ್ ಗಳಿಂದ ಈಗ 80 ಲ್ಯಾಬ್ ಗಳಾಗಿವೆ. ಇದೇ ರೀತಿ ಈಗ ಬೆಡ್ ಗಳ ಕೊರತೆ ಇರುವ ಕಾರಣ ಖಾಸಗಿ ಮೆಡಿಕಲ್ ಕಾಲೇಜು ಗಳಿಂದ ಬೆಡ್ ವ್ಯವಸ್ಥೆ ಕೂಡ ಮಾಡಲಾಗುತ್ತಿದ್ದೆ ಎಂದು ತಿಳಿಸಿದ್ದಾರೆ.