ದೇಶವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸ್ಯಾಂಡಲ್ವುಡ್ ತಾರೆಯನ್ನೂ ಬಿಟ್ಟಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಬ್ಬರ ನಂತರ ಒಬ್ಬರಂತೆ ಕೊರೊನಾ ಸೋಂಕು ಕಾಣಿಸುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆಗೆ ಕೊರೊನಾ ಅಂಟಿದ್ದು, ನಟ ಅರ್ಜುನ್ ಸರ್ಜಾ ಪುತ್ರಿ ಹಾಗೂ ನಟಿ ಐಶ್ವರ್ಯಾ ಅರ್ಜುನ್ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಈ ಬಗ್ಗೆ ಸ್ವತಃ ಐಶ್ವರ್ಯ ಅರ್ಜುನ್ ಅವರೇ ಹೇಳಿಕೊಂಡಿದ್ದು, ನನಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಹೋಂ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಮನೆಯಲ್ಲೇ ಇರಿ, ಎಂದು ಐಶ್ವರ್ಯ ಕೋರಿದ್ದಾರೆ. ಕಳೆದ ಜು.15ರಂದು ನಟ ಧ್ರುವ ಸರ್ಜಾ, ತಮಗೆ ಕೊರೊನಾ ವೈರಸ್ ಇರುವುದನ್ನು ಖಚಿತಪಡಿಸಿದ್ದರು.