ದೆಹಲಿ, ಅ.14: ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥ ಅಕ್ಟೋಬರ್ 16ರಂದು ಪ್ರಧಾನಿ ಮೋದಿ 75 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಭಾರತ ಹಾಗೂ ಎಫ್ಎಓ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ನೀಡಿರುವ ಆದ್ಯತೆಯನ್ನ ಜಗತ್ತಿಗೆ ಸಾರುವ ನಿಟ್ಟಿನಲ್ಲಿ 8 ಬಗೆಯ ಬೆಳೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಎಂದು ಪ್ರಧಾನಿ ಕಛೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ದೇಶದ ಅಂಗನವಾಡಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಹಾಗೂ ತೋಟಗಾರಿಕಾ ಇಲಾಖೆಗಳು ಈ ಮಹತ್ವಪೂರ್ಣ ಕಾರ್ಯಕ್ಕೆ ಸಾಕ್ಷಿಯಾಗಲಿವೆ. ಇನ್ನುಳಿದಂತೆ ಕೇಂದ್ರದ ಕೃಷಿ ಸಚಿವರು, ಹಣಕಾಸು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಜನಸಾಮಾನ್ಯರನ್ನು ಆರ್ಥಿಕತೆ ಹಾಗೂ ಪೌಷ್ಠಿಕತೆ ಹೆಚ್ಚಿಸುವಲ್ಲಿ ಎಫ್ಎಒನ ಪಾತ್ರ ಪ್ರಮುಖವಾದದ್ದು. ಭಾರತ ಎಫ್ಎಒ ಜೊತೆ ಐತಿಹಾಸಿಕ ಒಡನಾಟವನ್ನು ಹೊಂದಿದೆ ಎಂಬುದಾಗಿ ಹೇಳಿದೆ.