ಕರೋನಾ ದೈಹಿಕ ಕಾಯಿಲೆ ಮಾತ್ರವಲ್ಲ, ಜೀವನಕ್ಕೂ ಅಪಯಕಾರಿ: ಮೋದಿ

ಡಾ. ಜೋಸೆಫ್ ಮರ್ ಥೊಮ ಅವರು ತಮ್ಮ ಜೀವನವನ್ನು ಸಮಾಜ ಮತ್ತು ದೇಶದ ಒಳಿತಿಗಾಗಿ ಮುಡುಪಾಗಿಟ್ಟಿದ್ದಾರೆ. ಬಡತನ ನಿರ್ಮೂಲನೆ ಮತ್ತು ಮಹಿಳಾ ಸಶಕ್ತೀಕರಣ ಬಗ್ಗೆ ಅವರಿಗೆ ಅಪಾರವಾದ ಕಾಳಜಿ ಅವರಿಗೆ ಇದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ರೆವೆರೆಂಡ್ ಡಾ.ಜೋಸೆಫ್ ಮರ್ ಥೊಮ ಮೆಟ್ರೊಪೊಲಿಟನ್ ಅವರ 90ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಡಾ.ಜೋಸೆಫ್ ಬಗ್ಗೆ ಮಾತನಾಡಿ ಅವರು ಇನ್ನಷ್ಟು ವರ್ಷಗಳ ಕಾಲ ಆರೋಗ್ಯವಾಗಿ ಬದುಕಲಿ ಎಂಬ ಆಶಯ ವ್ಯಕ್ತಪಡಿದರು. ಜತೆಗ ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ವಿಚಾರದಲ್ಲಿ ದೇಶದ ಪರಿಸ್ಥಿತಿ ಉತ್ತಮವಾಗಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದು ಖುಷಿಯ ವಿಚಾರ ಎಂದರು.
ಕೋವಿಡ್-19 ವಿರುದ್ಧ ಇಡೀ ಜಗತ್ತು ಹೋರಾಡುತ್ತಿದೆ. ಈ ಕಾಯಿಲೆ ಶಾರೀರಿಕ ಕಾಯಿಲೆ ಮಾತ್ರವಲ್ಲ. ಜನರ ಜೀವನಕ್ಕೆ ಕೂಡ ಅಪಾಯವಾಗಿದೆ. ಕರೋನಾ ವಾರಿಯರ್ಸ್‍ಗಳ ಶ್ರಮದಿಂದ ಭಾರತ ಕರೋನಾ ವಿರುದ್ಧ ಉತ್ತಮ ಪರಿಸ್ಥಿತಿಯಲ್ಲಿದೆ. ಕರೋನಾ ಪರಿಣಾಮ ಭಾರತದ ಮೇಲೆ ಗಂಭೀರವಾಗುತ್ತದೆ ಎಂದು ಕೆಲವರು ಹೇಳಿದ್ದರು. ಆದರೆ ಭಾರತ ಕರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದೆ ಎಂದರು.

Exit mobile version