ಕೋವಿಡ್-19: 24 ಗಂಟೆಗಳಲ್ಲಿ ದೇಶಾದ್ಯಂತ 86,961 ಹೊಸ ಸೋಂಕು ಪ್ರಕರಣಗಳು ಪತ್ತೆ

ನವದೆಹಲಿ:  ಸೆ 21 ದೇಶದಲ್ಲಿ ಕೋವಿಡ್ 19 ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ;ಚೇತರಿಕೆ ಪ್ರಮಾಣವೂ ಹೆಚ್ಚಳ ಕಂಡು ಬರುತ್ತಿದೆ. ಈ ಬೆಳವಣಿಗೆ ಆಶಾದಾಯಕವಾದರೂ  ಈವರೆಗೆ  ಶೇ.80.12 ರಷ್ಟು ಅಂದರೆ 43.96 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಒಂದೇ ದಿನ 86,961 ಮಂದಿಗೆ  ಸೋಂಕು ತಗಲಿದ್ದು, ನಾಲ್ಕು ದಿನಗಳಿಂದ ಹೊಸ ಪ್ರಕರಣಗಳು ಇಳಿಕೆಯಾಗಿದ್ದು ಒಂದೇ ದಿನ 1,130 ರೋಗಿಗಳನ್ನು ಮಹಾಮಾರಿ ಬಲಿತೆಗೆದುಕೊಂಡಿದೆ.

ದೇಶದಲ್ಲಿ ಮೃತರಾದವರ  87,882 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕಳೆದ 20 ದಿನಗಳಿಂದ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.  ದೇಶದಲ್ಲಿ ರೋಗಿಗಳ ಗುಣಮುಖ ಸಂಖ್ಯೆ ಹೆಚ್ಚಿದ್ದರೂ  ಸಕ್ರಿಯ ಪ್ರಕರಣಗಳು ಆತಂಕಕಾರಿಯಾಗಿವೆ.

ಈಗ ದೇಶದಲ್ಲಿ 10,03,299 ಆಕ್ಟೀವ್ ಕೇಸ್ ಗಳಿವೆ. 43,96,399 ಮಂದಿ ಚೇತರಿಸಕೊಂಡಿದ್ದು, ಶೇ 80.12 ಕ್ಕೆ ಏರಿದ್ದು ಮರಣ ಪ್ರಕರಣ ಶೇ 1.60 ಕ್ಕೆ ಇಳಿದಿದೆ.

 ದೇಶದ ಅನೇಕ ರಾಜ್ಯಗಳಲ್ಲಿ ಸೆ 21 ಬೆಳಿಗ್ಗೆಯಿಂದಲೂ  ಹೊಸ ಪ್ರಕರಣಗಳು ವರದಿಯಾಗುತ್ತಲೇ  ಇದೆ. ಮಹಾರಾಷ್ಟರವು ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲೇ ಇದೆ. ದೇಶದಾದ್ಯಂತ  7.31 ಲಕ್ಷಕ್ಕೂ ಹೆಚ್ಚುಜನರಿಂದ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ 6.43 ಕೋಟಿಗೂ ಅಧಿಕ ಜನರನ್ನು ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್)  ತಿಳಿಸಿದೆ.

Exit mobile version