ಚೆನ್ನೈಗೆ ವರುಣಾಘಾತ

ಚೆನ್ನೈ, ಅ. 29: ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್​ ಶುರುವಾಗಿದ್ದು, ಇಂದು ಬೆಳಗ್ಗೆಯಿಂದ ಮಳೆ ಆರ್ಭಟಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಆಗಿರಲಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗುಸಹಿತ ನಿರಂತರ ಮಳೆ ಇನ್ನೂ ಎರಡು-ಮೂರು ಘಂಟೆಗಳು ಮುಂದುವರಿಯಲಿದೆ ಎಂದು ವರದಿ ನೀಡಿದೆ.

ನುಂಗಂಬಕ್ಕಂ ಪ್ರದೇಶದಲ್ಲಿ ಬೆಳಿಗ್ಗೆ 8:30ರವರೆಗೆ 133.4 ಮಿ.ಮೀ ಮಳೆಯಾಗಿದ್ದರೆ, ಮೀನಾಂಬಕ್ಕಮ್​ನಲ್ಲಿ 53.8ಎಂಎಂ ಮಳೆ ಬಿದ್ದಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಕಳೆದ 5 ವರ್ಷಗಳಲ್ಲಿ ಬಿದ್ದಿರಲಿಲ್ಲ. 2014ರಲ್ಲಿ ಒಂದು ದಿನ 161.9ಮಿಮೀ ಮಳೆಯಾಗಿತ್ತು.

ಗ್ರೇಟರ್​ ಚೆನ್ನೈ ಕಾರ್ಪೋರೇಶನ್​ ಸಹಾಯವಾಣಿ ತೆರೆದು, ಫೋನ್​ನಂಬರ್​ಗಳನ್ನು ಸಾರ್ವಜನಿಕರಿಗೆ ಒದಗಿಸಿದೆ. ಮಳೆಯಿಂದ ಆಗುವ ಅನಾಹುತ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ವಹಿಸಲಾಗಿದೆ.

Exit mobile version