ಮುಂಬೈ, ಅ. 28: ಬಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲಬ್ರಿಟಿಗಳು ಹಾಗೂ ಡ್ರಗ್ ಪೆಡ್ಲರ್ಗಳ ನಡುವಿನ ಸಂಬಂಧದ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಕರೀಷ್ಮಾ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ನಿನ್ನೆಯಷ್ಟೇ ಕರೀಷ್ಮಾ ಪ್ರಕಾಶ್ ಅವರ ವರ್ಸೋವಾ ನಿವಾಸದ ಮೇಲೆ ಎನ್ಸಿಬಿ ದಾಳಿ ನಡೆಸಿ 1.8 ಗ್ರಾಂ ಹಶೀಶ್ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಹೆಚ್ಚಿನ ತನಿಖೆಗಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೂಡ ಜಾರಿ ಗೊಳಿಸಿತ್ತು.
ಕಳೆದ ತಿಂಗಳು ಡ್ರಗ್ ನಂಟು ವಿಚಾರವಾಗಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿ ಹಲವರನ್ನು ಎನ್ಸಿಬಿ ವಿಚಾರಣೆ ನಡೆಸಿತ್ತು.