ಪೌರ ಕಾರ್ಮಿಕರಿಗೆ ಕೇಂದ್ರದಿಂದ ಗುಡ್ ನ್ಯೂಸ್

ಬೆಂಗಳೂರು, ನ. 20: ಹಲವಾರು  ವರ್ಷಗಳಿಂದ  ಮ್ಯಾನ್ ಹೋಲ್ ಕೆಲಸವನ್ನು ಪೌರ ಕಾರ್ಮಿಕರಲ್ಲಿ ಮಾಡಿಸುವುದು ರೂಡಿಯಾಗಿತ್ತು.  ಮ್ಯಾನ್​ ಹೋಲ್​ ಶುದ್ಧಿ ಕಾರ್ಯಕ್ಕೆ ಕಾರ್ಮಿಕರನ್ನ ಬಳಕೆ ಮಾಡೋದನ್ನ ಸಂಪೂರ್ಣವಾಗಿ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನ ಜಾರಿಗೊಳಿಸಲು  ಸಿದ್ದವಾಗಿದೆ.

 ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಈ ಹಿಂದೆಯೇ ಇದ್ದ ಪಿಇಎಂಎಸ್​ಆರ್​ ಆಕ್ಟ್​ನಲ್ಲಿ ಕೆಲವು ತಿದ್ದುಪಡಿ ತಂದಿದ್ದು ಕಾರ್ಮಿಕರು ಮ್ಯಾನ್ ಹೋಲ್‌ಗೆ ಇಳಿಯುವುದನ್ನು ತಪ್ಪಿಸಲು ಮೆಷೀನ್‌ಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡುತ್ತಿದ್ದು ಪೌರಾಡಳಿತ ಕಾರ್ಮಿಕರಿಗೆ ಯಂತ್ರಗಳ ಖರೀದಿ ಮಾಡಿಕೊಡಬೇಕೆಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಅವರು ಹೇಳಿದ್ದಾರೆ. ವಿಶ್ವ ಶೌಚಾಲಯ ದಿನವಾದ ಗುರುವಾರದಂದು ಈ  ಘೋಷಣೆ ಮಾಡಿದ್ದಾರೆ.

Exit mobile version