ಮೆಟ್ರೋ ಕಾರ್ಡ್‌ ರೀಚಾರ್ಜ್‌ ಗೆ ಮತ್ತೊಂದು ಆಪ್‌

ಬೆಂಗಳೂರು, ಅ.15: ಬೆಂಗಳೂರು ಮೆಟ್ರೊ ರೈಲು ನಿಗಮವು ‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ಗಳನ್ನು ಕರ್ನಾಟಕ ಮೊಬೈಲ್‌ ಒನ್ ಆಯಪ್‌ ಮೂಲಕವೂ ರಿಚಾರ್ಜ್‌ ಮಾಡಿಸಿಕೊಳ್ಳುವ ಸೌಲಭ್ಯವನ್ನು ಒದಗಿಸಿದೆ. ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ, ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪ್ರಯಾಣಿಕರು ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಸ್ಮಾರ್ಟ್‌ಕಾರ್ಡ್‌ಗಳ ಮೂಲಕ ಮಾತ್ರ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡಿರುವುದರಿಂದ ಈ ಕಾರ್ಡ್‌ಗಳ ರಿಚಾರ್ಜ್‌ ಮಾಡಿಸುವ ವೇಳೆಯಲ್ಲಿ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು. ನಿಗಮದ ವೆಬ್‌ಸೈಟ್‌ ಮತ್ತು ‘ನಮ್ಮ ಮೆಟ್ರೊ’ ಆಯಪ್‌ ಮೂಲಕ ರಿಚಾರ್ಜ್‌ಗೆ ಅವಕಾಶ ಇದೆ. ಅದರೊಂದಿಗೆ ಈಗ ಈ ಕರ್ನಾಟಕ ಮೊಬೈಲ್‌ ಒನ್‌ ಸೇವಾ ಕೇಂದ್ರದ ಮೂಲಕವೂ ರಿಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ.

ಈ ಮೊದಲು, ಏಳು ದಿನಗಳೊಳಗೆ ಸ್ಮಾರ್ಟ್‌ಕಾರ್ಡ್‌ ಬಳಕೆ ಮಾಡದಿದ್ದಲ್ಲಿ, ಆ ಮೊತ್ತವು ಸ್ಮಾರ್ಟ್‌ಕಾರ್ಡ್‌ಗೆ ಜಮಾ ಆಗುತ್ತಲೇ ಇರಲಿಲ್ಲ. ಈಗ, ಟಾಪ್‌ಅಪ್‌ ಮಾಡಿದ 60 ದಿನಗಳೊಳಗಾಗಿ ಸ್ಮಾರ್ಟ್‌ಕಾರ್ಡ್‌ಗಳನ್ನು ಯಾವುದೇ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರಸ್ತುತಪಡಿಸದಿದ್ದರೆ ಮಾಡಿದಂತಹ ವಹಿವಾಟು ರದ್ದಾಗುತ್ತದೆ ಎಂದು ನಿಗಮ ಹೇಳಿದೆ.

Exit mobile version