ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೊನಾ ಸೊಂಕಿತರ ಸಂಖ್ಯೆ

ಮೈಸೂರಿನಲ್ಲಿ ದಿನ ದಿನಕ್ಕೂ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇಂದು ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಅಂತ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣನವರು ಮಾಹಿತಿ ನೀಡಿದ್ದಾರೆ. ಅವರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡಿ, ಕೊರೋನಾ ಗಂಭೀರ ಸಮಸ್ಯೆ ಮೈಸೂರಿನಲ್ಲೂ ಹರಡಿರೋದು ನೋವಿನ ಸಂಗತಿಯಾಗಿದ್ದು, ಜುಬಿಲಿಯಂಟ್ ಕಾರ್ಖಾನೆಯ 1443 ಜನ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ

821 ಜನ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡುತ್ತ ಒಂದು ಸಾವಿರ ಮಂದಿ ಕ್ಯಾರಂಟೈನ್ ಮಾನಿಟರಿಂಗ್ ಮಾಡಲು ವಿಶೇಷ ತಂಡ ರಚನೆ ಮಾಡಲಾಗಿದ್ದು, ಕ್ವಾರಂಟೈನ್ ಇದ್ದವರು ಮನೆಯಿಂದ ಹೊರಗೆ ಬಂದು ತೊಂದರೆ ಕೊಟ್ಟರೆ ಕ್ರಿಮಿನಲ್ ಕೇಸ್ ದಾಖಲು ಮಾಡ್ತೇವೆ ಸಾಮಾಜಿಕ ಅಂತರ ಕಾಪಾಡಲು ಎಲ್ಲಾ ತಾಲೂಕುಗಳ ಬಿಇಓ ನೇತೃತ್ವದಲ್ಲಿ ಪ್ಲೇಯಿಂಗ್ ಸ್ಕ್ವಾಡ್ ರಚನೆ ವಲಸೆ ಬಂದವರು, ಹಾಡಿಗಳಲ್ಲಿ ವಾಸ ಮಾಡೋ ಸ್ಥಳಗಳಲ್ಲಿ ಆಹಾರ ಪೂರೈಕೆ ರೇಷನ್ ಕಾರ್ಡ್ ಸಮಸ್ಯೆ ಮುಂದೊಡ್ಡದೆ ಬಿಪಿಎಲ್ ಕುಟುಂಬಗಳಿಗೆ ಅಹಾರ ಪದಾರ್ಥ ಕೊಡಲೇಬೇಕು ಇನ್ನೂ ಮುರ್ನಾಲ್ಕು ದಿನ ನಾನು ಮೈಸೂರಿನಲ್ಲೇ ಇದ್ದು ಎಲ್ಲವನ್ನು ಪರಿಶೀಲನೆ ಮಾಡ್ತೇನೆ ಅಂತ ಹೇಳಿದರು.

Exit mobile version