ಯಾರಿದು ಪೋಸ್ಟ್‌ ಮ್ಯಾನ್‌ ಸಿವನ್‌ ?

ಇವತ್ತು ನಾವು ಹೇಳೋಕೆ ಹೊರಟಿರೋದು ಒಬ್ಬ ನಿಷ್ಠಾವಂತ ಶ್ರೇಷ್ಠ ಅಧಿಕಾರಿಯ ಕಾರ್ಯ ಸಾಧನೆಯ ಬಗ್ಗೆ, ಇತ್ತಿಚಿಗೆ ಯಾವುದೆ ಸೋಷಿಯಲ್ ಮಿಡಿಯಾದಲ್ಲಿ ಎಲ್ಲೆ ನೋಡಿದ್ರು ಈ ನಿಷ್ಠಾವಂತ
ಅಧಿಕಾರಿಯದ್ದೆ ಮಾತು, ಸಾಮಾನ್ಯವಾಗಿ ಯಾರು ಕೂಡ ಸುಕಾಸುಮ್ಮನೆ ಒಬ್ಬರನ್ನಾ ಹೊಗಳಲ್ಲಾ, ಆತನಿಗೆ ವಂದನೆಗಳನ್ನಾ ಸಲ್ಲಿಸಲ್ಲಾ , ಅಷ್ಟೊಂದು ಹೆಗ್ಗಳಿಕೆಗೆ ಕಾರಣಾನೆ ಆತನ ಶೃದ್ದೆ, ಆತ ತನ್ನ ಕೆಲಸದ ಮೇಲೆ ಇಟ್ಟಿರುವ ಪ್ರೀತಿ,

ಹಾಗಾದ್ರೆ ಆತ ಯಾರು ಗೊತ್ತಾ ತಮಿಳುನಾಡಿನ 66 ವಯಸ್ಸಿನ ವೃದ್ದ ಪೋಸ್ಟ ಮ್ಯಾನ್ ಸಿವನ್ ಕುನೂರ್. ಪ್ರತಿದಿನಾ 15 ಕಿಲೋಮಿಟರ್ ಕಾಡಲ್ಲಿ ಕಾಲ್ನಡಿಗೆ ಮಾಡುತ್ತಾ ಕಾಡಿನಲ್ಲಿರೋ ಹಳ್ಳಿಗೆ ಪತ್ರಗಳನ್ನಾ ತಲುಪಿಸ್ತಾ ಇದ್ರು, ನನ್ನ ಕೆಲಸವೆ ನನ್ನ ದೇವರು ಅದಕ್ಕಾಗಿ ನಾನು ಯಾವ ಮಟ್ಟಿಗಾದರೂ ತಲುಪ ಬಲ್ಲೆ ಅಂತಾರೆ , ವ್ಹಾ ಇಂತಹ ಕಾಲದಲ್ಲಿ ಅದು ಅಂತಹ ವಯಸ್ಸಿನಲ್ಲಿ ಅಷ್ಟೊಂದು ಶೃದ್ದೆ, ಅಷ್ಟೊಂದು ಕೆಲಸದ ಮೇಲಿನ ಅಭಿಮಾನಾ ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತೆ .

ಈಗಿನ ಜಮಾನದಲ್ಲಿ ಹೆಂಗೋ ಟೈಮ್ ಪಾಸ್ ಮಾಡಿ ಕಾಲಾ ಕಳೆದು, ಮನೆಗೋಗಿ ಅರಾಮಾಗಿ ನಿದ್ದೆ ಮಾಡೋರೆ ಜಾಸ್ತಿ , ಅಂತದ್ರಲ್ಲಿ ಕಾಯಕವೆ ಕೈಲಾಸ ಅಂತಾ ನಂಬ್ಕೊAಡು ದಿನಾ ೧೫ ಕಿಲೋ ಮೀಟರ್ ನಡೆದುಕೊಂಡು ಹೋಗಿ ಪೋಸ್ಟ ಲೆಟ್ರ‍್ಸ್ ಅನ್ನಾ ಜನರಿಗೆ ತಲುಪಿಸೋದು ಅಂದ್ರೆ ಸಾಮಾನ್ಯಾನಾ , ಅದು ಸಾಕಷ್ಟು ವನ್ಯ ಪ್ರಾಣಿಗಳಿರುವಂತಹ ದಟ್ಟವಾದ ಕಾಡಿನ ಮಧ್ಯ ಕಾಲ್ನಡಿಗೆಯಲ್ಲಿ ಹೋಗಿ ತನ್ನ ಕೆಲಸ ಪೂರೈಸ್ತಿದಿದ್ದು ಸಾಮಾನ್ಯದ ಸಂಗತೀನಾ , ನಿಜಕ್ಕು ಸಿವನ್ ಕುನೂರ್ ಅವರು ಒಬ್ಬ ನಿಷ್ಠಾವಂತ ಅಧಿಕಾರಿನೆ.

ಇನ್ನೂ ಕಾಡಿನಲಿರೋ ್ಲ ಪ್ರಾಣಿಗಳ ವಿಚಾರಕ್ಕೆ ಬಂದ್ರೆ, ಎಲ್ಲ ಪ್ರಾಣಿಗಳು ಕೂಡ ನನ್ನ ಸ್ನೇಹಿತರಿದ್ದ ಹಾಗೆ ಅಂತಾರೆ, ಅಲ್ಲಾ ರೋಡ್ ಅಲ್ಲಿ ನಡೆದಕೊಂಡು ಹೋಗುವಾಗ ಒಂದು ನಾಯಿ ಬೊಗಳಿದ್ರೆನೆ ಬೆಚ್ಚಿ ಬೀಳ್ತೀವಿ ಅಂತದ್ರಲ್ಲಿ ಹುಲಿ,ಸಿಂಹ ಆನೆಗಳಿರುವಂತಹ ಅಂತಹ ಕಾಡಲ್ಲಿ ಈತ ಒಬ್ಬನೆ ನಡೆದಕೊಂಡು ಹೋಗುವುದಲ್ಲದೆ ಆ ಪ್ರಾಣಿಗಳ ಸ್ನೇಹವನ್ನಾ ಕೂಡ ಗಳಿಸಿದ್ರು ಅಂದ್ರೆ ನಿಜಕ್ಕೂ ಅಚ್ಚರಿನೆ, ರಿಯಲಿ ಹಿ ಇಸ್ ಯಾನ್ ಅಡ್ವೆಂಚರಿಸ್ಟ್ ಮ್ಯಾನ್.

ಅವರ ಕೆಲಸದ ಸಮರ್ಪಣೆ ವಿಚಾರಕ್ಕೆ ಬಂದ್ರೆ ಇಂತಹ ಡೆಡಿಕೆಷನ್ ಇರುವ ನಿಷ್ಠಾವಂತ ಅಧಿಕಾರಿ ಇನ್ನೊಬ್ಬರಿಲ್ಲಾ ಅಂತಾ ಹೇಳಬಹುದು, ಒಂದು ಹಳ್ಳಿಲಿ ಒಬ್ಬ ಅಜ್ಜಿಗೆ ಪಿಂಚಣಿ ಹಣ ತಲುಪಿಸೋದಕ್ಕೆ ಹೋದಾಗ ಆ ಅಜ್ಜಿ ತೀರಿಹೋಗಿದ್ರಿಂದ ಆ ಪಿಂಚಣಿ ಹಣವನ್ನ ಅಜ್ಜಿಯ ಮಗನಿಗಾಗ್ಲಿ , ಅವರ ಮೊಮ್ಮಕ್ಕಳಿಗಾಗಿ ಕೊಡಲು ನಿರಾಕರಿಸಿ ಬಂದ ಹಣವನ್ನಾ ಮರುಪಾವತಿಸಿ ಕೆಲಸದಲ್ಲಿ ನಿಷ್ಠೆಯನ್ನಾ ತೋರಿಸಿದ್ದಾರೆ.

ಕಾಲುದಾರಿಲಿ ಸಾಕಷ್ಟು ಕಲ್ಲುಗಳಿದಾವೆ ಅಂತಾ ಗುರಿ ತಲುಪೋದನ್ನಾ ನಿಲ್ಲುಸ್ತೀವಾ ಖಂಡಿತಾ ಇಲ್ಲಾ , ಹಾಗೆನೆ ಕೆಲಸ ಮಾಡುವಾಗ ಸಾಕಷ್ಟು ಅಡೆ ತಡೆಗಳು ಬಂದೇ ರ‍್ತಾವೆ ಹಾಗಂತಾ ನಮ್ಮ ಕರ್ತವ್ಯ ನಿಲ್ಲಿಸೋಕ ಆಗುತ್ತಾ ಅನ್ನೋದೆ ಸಿವನ್ ಅವರ ಮಾತು, ಸಾಕಷ್ಟು ಗಣ್ಯ ಅಧಿಕಾರಿಗಳು ಕೂಡ ಇವರ ಕೆಲಸವನ್ನಾ ಹೊಗಳಿ ಕೊಂಡಾಡಿದ್ದಾರೆ. ಇವರ ಕಾರ್ಯ ಕುರಿತು ಒಂದು ದಾಖಲೆಯ ಚಿತ್ರವನ್ನ ಕೂಡ ಚಿತ್ರಿಸಿದ್ದಾರೆ , ಅದರಲ್ಲೂ ವಿಶೇಷ ಏನಪ್ಪಾ ಅಂದ್ರೆ ಅಂಚೆಪೇದೆ ಸಿವನ್ ಅವರೆ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಂಚೆಪೇದೆ ಸಿವನ್ ಅವರು ೧೦ ನೇ ತರಗತಿಯಲ್ಲಿ ಅನುತ್ತಿರ್ಣರಾದವರು, ಆದರೂ ಛಲ ಬಿಡದೆ ಹೊಸ ಪರೀಕ್ಷಾ ವಿಧಾನದಲ್ಲಿ ೧೦ ನೆ ತರಗತಿಲಿ ಉತ್ತೀರ್ಣರಾಗಿ ಅಂಚೆ ಕಚೇರಿಯಲ್ಲಿ
ಕೆಲಸವನ್ನಾ ಪಡೆದುಕೊಳ್ತಾರೆ, ಅಂಚೆಪೇದೆ ಆಗುವುದಕ್ಕಿಂತಾ ಮುಂಚೆ 25 ವರ್ಷಗಳ ಕಾಯಂಸ್ಟಾಂಪ್ ಮಾರಾಟಗಾರರಾಗಿ ಕೆಲಸ ಮಾಡಿದ್ದಾರೆ.

ಇನ್ನೂ ಇವರ ವೈಯಕ್ತಿಕ ಜೀವನಕ್ಕೆ ಬಂದ್ರೆ ಚಿಕ್ಕ ಸಂಸಾರವೆ ಚೊಕ್ಕ ಸಂಸಾರ, ನಾವಿಬ್ರು ನಮಗಿಬ್ರು ಅನ್ನೋ ಹಾಗೆ ಎರಡೂ ಮಕ್ಕಳನ್ನು ಒಳ್ಳೆಯ ಹುದ್ದೆಗೆ ಸೇರಿಸಿದ್ದಾರೆ, ಭಾರವಾದ ಹೃದಯದಿಂದ ಆದರೂ ತೃಪ್ತಿಕರ ಆತ್ಮದಿಂದ ತಮ್ಮ ಕೆಲಸದಲ್ಲಿ ನಿವೃತ್ತಿಯನ್ನಾ ಹೊಂದಿ, ಸಂತಸದ ಜೀವನವನ್ನಾ ನಡೆಸ್ತಿದಾರೆ.

Exit mobile version