ವಾಹನ ಚಾಲಕರೇ ಹೊಸ ಸಂಚಾರ ನಿಯಮ ಜಾರಿಯಾಗಿದೆ: ನಿಯಮ ಮೀರಿದ್ರೆ ₹ 40000 ದಂಡ !

Bangalore : ವಾಹನ ಚಾಲಕರೇ ಎಚ್ಚರ! ಹೊಸ ಸಂಚಾರಿ ನಿಯಮವನ್ನು ಅರಿತುಕೊಳ್ಳಿ. ಇಲ್ಲದಿದ್ದರೆ ಬೀಳುತ್ತೆ ಭರ್ಜರಿ ದಂಡ. ಯಾಕಂದ್ರೆ ರಸ್ತೆಯಲ್ಲಿ ಪ್ರಯಾಣಿಸುವುದು ಅತ್ಯಂತ ಜವಾಬ್ದಾರಿಯುತ ಕೆಲಸ ಮತ್ತು ನೀವು ಮೋಟಾರು ವಾಹನದಲ್ಲಿ (₹ 40000 fine for violation) ಪ್ರಯಾಣಿಸುತ್ತಿದ್ದರೆ ನಿಮ್ಮ ಜವಾಬ್ದಾರಿಯು ಇನ್ನಷ್ಟು ಹೆಚ್ಚಾಗುತ್ತದೆ.

ಎಲ್ಲಾ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದು ಸುರಕ್ಷಿತ ಸಂಚಾರ ವಾತಾವರಣವನ್ನು ಸೃಷ್ಟಿಸುತ್ತದೆ.

ಸಂಚಾರಕ್ಕೆ ಸಂಬಂಧಿಸಿದಂತೆ ಹಲವು ನೀತಿ ಮತ್ತು ನಿಯಮಗಳಿವೆ.

ಸುರಕ್ಷಿತ ಸಂಚಾರ ವಾತಾವರಣ ನಿರ್ಮಿಸಲು ಕೇಂದ್ರ ಸರಕಾರದಿಂದ ಹಿಡಿದು ಎಲ್ಲ ರಾಜ್ಯಗಳ ಸರಕಾರಗಳವರೆಗೆ (State Govt) ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ.


ಕಟ್ಟು ನಿಟ್ಟಿನ ನಿಯಮಗಳ ಹೊರತಾಗಿಯೂ, ಸಂಚಾರ ನಿಯಮಗಳನ್ನು (₹ 40000 fine for violation) ಉಲ್ಲಂಘಿಸುವ ಅನೇಕ ಜನರಿದ್ದಾರೆ.

ಅಂತಹ ಜನರು ಇನ್ಮುಂದೆ ಜಾಗರೂಕರಾಗಿರಬೇಕು. ಏಕೆಂದರೆ ನೀವು ಸಂಚಾರ ನಿಯಮಗಳನ್ನು (traffic rules) ಉಲ್ಲಂಘಿಸಿದರೆ ನಿಮಗೆ ದಂಡ ವಿಧಿಸಬಹುದು. ಇದರೊಂದಿಗೆ,

ನೀವು ಜೈಲು ಶಿಕ್ಷೆಗೆ ಒಳಗಾಗಬಹುದು. ದಂಡದ ಮೊತ್ತವು ತುಂಬಾ ಹೆಚ್ಚಿರಬಹುದು.

ಇದನ್ನೂ ಓದಿ : https://vijayatimes.com/cow-urine-drinking-side-effects/

ನೀವು ಒಂದೇ ಸಮಯದಲ್ಲಿ ಹಲವಾರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ, ಎಲ್ಲಾ ನಿಯಮಗಳನ್ನು ಏಕಕಾಲದಲ್ಲಿ ಉಲ್ಲಂಘಿಸಿದ್ದಕ್ಕಾಗಿ ನಿಮಗೆ ಭಾರೀ ದಂಡವನ್ನು ವಿಧಿಸಬಹುದು.

ಉದಾಹರಣೆಗೆ, ನಿಮ್ಮ ಕಾರು ಮಾಲಿನ್ಯ ಪ್ರಮಾಣಪತ್ರವನ್ನು ಹೊಂದಿಲ್ಲ ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ಈಗಾಗಲೇ ಅನರ್ಹಗೊಳಿಸಲಾಗಿದೆ,

ಅದರೊಂದಿಗೆ ನೀವು ಕೂಡ ಕುಡಿದಿದ್ದೀರಿ ಮತ್ತು ಕಾರು ವಿಮೆಯನ್ನು ಹೊಂದಿಲ್ಲ ಎಂದು ಭಾವಿಸೋಣ.ಅಂತಹ ಪರಿಸ್ಥಿತಿಯಲ್ಲಿ ಪೊಲೀಸರು ನಿಮ್ಮನ್ನು ತಡೆದರೆ,

ನೀವು ಆ ಎಲ್ಲಾ ಅಪರಾಧಗಳಿಗೆ ದಂಡ ಕಟ್ಟಬೇಕಾಗುತ್ತೆ. ಬರೀ ಒಂದು ನಿಯಮದ ಉಲ್ಲಂಘನೆಗಾಗಿ ಅಲ್ಲ. ನಿಮ್ಮ ಎಲ್ಲಾ ತಪ್ಪುಗಳನ್ನು ಸೇರಿಸಿ ನಿಮಗೆ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/shocking-statement-of-revanna/

ಹಾಗಾಗ ಇನ್ಮುಂದೆ ರೋಡಿಗಿಳಿಯೋ ಮುನ್ನ ಎಚ್ಚರದಿಂದಿರಿ. ಯಾವ ಯಾವ ಅಪರಾಧಗಳಿಗೆ ಎಷ್ಟೇಷ್ಟು ದಂಡ? ಎರಡನೇ ಬಾರಿ ಕುಡಿದು ವಾಹನ ಚಲಾಯಿಸಿದರೆ 15 ಸಾವಿರ ರೂ.,

ಅನರ್ಹ ಚಾಲನಾ ಪರವಾನಗಿ ಹೊಂದಿ ವಾಹನ ಚಲಾಯಿಸಿದರೆ 10 ಸಾವಿರ ರೂ.,ಮಾಲಿನ್ಯ ಪ್ರಮಾಣ ಪತ್ರ ಇಲ್ಲದೇ ಇದ್ದರೆ 10 ಸಾವಿರ ರೂ.,

ವಿಮೆ ಇಲ್ಲದೇ ವಾಹನ ಚಲಾಯಿಸಿದರೆ 4 ಸಾವಿರ ರೂ.ಅನ್ನಿಸಬಹುದು,ಇವೆಲ್ಲ ಸೇರಿ ನಿಮಗೆ 39 ಸಾವಿರ ರೂ. ದಂಡ ವಿಧಿಸಬಹುದು. ಹಾಗಾಗಿ ಎಲ್ಲಾ ಸಂಚಾರ ನಿಯಮಗಳನ್ನು ಅನುಸರಿಸಿ..

Exit mobile version