ರಾಜ್ಯ, ಕೇಂದ್ರಾಡಳಿತಗಳಲ್ಲಿ ಇನ್ನು 1.93 ಕೋಟಿ ಲಸಿಕೆ ಲಭ್ಯ

ನವದೆಹಲಿ, ಜೂ. 04: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನು 1.93 ಕೋಟಿಗೂ ಹೆಚ್ಚು ಕೊರೊನಾ ಲಸಿಕೆ ಡೋಸ್ ಗಳು ಲಭ್ಯವಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕೇಂದ್ರವು ಇಲ್ಲಿಯವರೆಗೆ ಉಚಿತ ಮತ್ತು ನೇರ ರಾಜ್ಯ ಖರೀದಿ ವಿಭಾಗಗಳ ಮೂಲಕ 24 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ. ಇದರಲ್ಲಿ ವ್ಯರ್ಥವಾದ ಲಸಿಕೆ ಸೇರಿದಂತೆ ಒಟ್ಟು 22,27,33,963 ಡೋಸ್ಗಳನ್ನು ಬಳಸಲಾಗಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1,93,95,287 ಡೋಸ್ ಲಭ್ಯವಿದೆ’ ಎಂದು ಅದು ಹೇಳಿದೆ.

ದೇಶದಾದ್ಯಂತ ಲಸಿಕಾ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿವೆ.

Exit mobile version