‘ಅಗ್ನಿ’ಪಥ್ ಯೋಜನೆ ; ಕಲ್ಲು ತೂರಿ, 2 ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು!

Railway coaches

ಬಿಹಾರ : ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯಿಂದಾಗಿ ಇದುವರೆಗೆ 38ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು 11 ಇತರ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರತಿಭಟನೆಯಿಂದಾಗಿ 72 ಇತರ ರೈಲುಗಳು ತಡವಾಗಿ ಚಲಿಸುತ್ತಿವೆ ಎಂದು ರೈಲ್ವೆ ಇಲಾಖೆ(Railway Department) ಹೇಳಿದೆ. ಇದರಲ್ಲಿ ಐದು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಮತ್ತು 29 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು(Passenger Railway) ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದ ಕಾರಣ ರದ್ದುಗೊಳಿಸಲಾಗಿದೆ.

ಬಿಹಾರದ(Bihar) ಮುಂಗೇರ್ ಗಂಗಾ ಸೇತುವೆಗೆ ವಿದ್ಯಾರ್ಥಿಗಳು ನುಗ್ಗಿದ್ದಾರೆ. ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು,
ವಿದ್ಯಾರ್ಥಿ ಪ್ರತಿಭಟನಾಕಾರರು ಬಿಹಾರದಲ್ಲಿ ಶ್ರೀಕೃಷ್ಣ ಸೇತು (ಮುಂಗೇರ್ ಗಂಗಾ ಸೇತುವೆ) ಜಾಗವನ್ನು ಆಕ್ರಮಿಸಿದ್ದಾರೆ. ಮುಂಗೇರ್‌ನಿಂದ ಭಾಗಲ್‌ಪುರ-ಪಾಟ್ನಾ(Bhagalpur-Patna) ಮೂಲಕ ಖಗಾರಿಯಾಕ್ಕೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಪ್ರತಿಭಟನಕಾರರು ಬಿಹಾರದ ಖಗಾರಿಯಾದಲ್ಲಿ ರೈಲು ಹಳಿಗಳು, ರಾಷ್ಟ್ರೀಯ ಹೆದ್ದಾರಿಯನ್ನು(National Highway) ಪ್ರತಿಭಟನೆಯ ಸಲುವಾಗಿ ತಡೆದಿದ್ದಾರೆ.

ವಿದ್ಯಾರ್ಥಿ ಪ್ರತಿಭಟನಾಕಾರರು ಬಿಹಾರದ ಖಗಾರಿಯಾದಲ್ಲಿ ಕೋಸಿ ಎಕ್ಸ್‌ಪ್ರೆಸ್ ಅನ್ನು ತಡೆದು ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಾನ್ಸಿ-ಸಹರ್ಸಾ ಮತ್ತು ಮಾನ್ಸಿ-ಕಟಿಹಾರ್ ರೈಲು ವಿಭಾಗಗಳು ಮಾರ್ಗದ ಮಧ್ಯದಲ್ಲೇ ನಿಂತಿವೆ. ಬಿಹಾರ, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ಶುಕ್ರವಾರ ಮೂರನೇ ದಿನವೂ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಮುಂದುವರಿದಿವೆ.

ಪ್ರತಿಭಟನಾಕಾರರು ಮುಖ್ಯವಾಗಿ ಸರ್ಕಾರದ ನಾಲ್ಕು ವರ್ಷಗಳ ಯೋಜನೆಯ ವಿರುದ್ಧ ಭಾರಿ ವಿರೋಧವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಗ್ನಿಪಥ್ ಯೋಜನೆ ಅನಾವರಣಗೊಂಡ ಬೆನ್ನಲ್ಲೇ, ಒಂದು ಬಾರಿ ಮನ್ನಾ ಮಾಡುವ ಮೂಲಕ, ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ. ದೇಶದ ಹಲವಾರು ಭಾಗಗಳಲ್ಲಿ, ಪ್ರತಿಭಟನಾಕಾರರು ರೈಲು ಮಾರ್ಗಗಳನ್ನು ಗುರಿಯಾಗಿಸಿಕೊಂಡಿದ್ದರಿಂದ ರೈಲುಗಳನ್ನು ರದ್ದುಗೊಳಿಸಲಾಯಿತು ಮತ್ತು ಸಮಯದಲ್ಲಿ ವಿಳಂಬಗೊಳಿಸಲಾಗಿದೆ.

ಬಿಹಾರದಲ್ಲಿ, ರಾಜ್ಯದಾದ್ಯಂತ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಯುವಕರು ರೈಲು ನಿಲ್ದಾಣಕ್ಕೆ ನುಗ್ಗಿ ಹಳಿಗಳ ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಿದ್ದಾರೆ.

Exit mobile version