ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನಕ್ಕೆ 20 ವರ್ಷ

ನವದೆಹಲಿ ಅ 7 : ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಜೀವನ ಪ್ರಾರಂಭಿಸಿ ಇಂದಿಗೆ 20 ವರ್ಷಗಳು ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರಾಗಿ ರಾಜಕೀಯದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. 2001ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದರು.  13 ವರ್ಷ ಮುಖ್ಯ​ಮಂತ್ರಿ​ಯಾಗಿ ಅಧಿಕಾರ ನಿರ್ವಹಿಸಿದ್ದು, 7 ವರ್ಷ​ದಿಂದ ಪ್ರಧಾನಿ ಹುದ್ದೆ​ಯಲ್ಲಿ ಕೆಲ​ಸ ಮಾಡುತ್ತಿದ್ದಾರೆ. 2001ರಿಂದ 2014ರವರೆಗೆ ಗುಜರಾತ್​​ನ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು, ಅಲ್ಲಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಎಂಪಿ ಸೀಟ್​​ನಿಂದ ಗೆದ್ದು ಪ್ರಧಾನಮಂತ್ರಿ ಹುದ್ದೆಗೆ ಏರಿದರು. 20 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜಕೀಯದಲ್ಲಿ ತನ್ನ 20 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ವಿಡಿಯೋ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದೆ.

ಸಾರ್ವಜನಿಕ ಸೇವೆಯ 20ವರ್ಷಗಳಲ್ಲಿ 7 ವರ್ಷ ಪ್ರಧಾನಿ ಹುದ್ದೆ ನಿಭಾಯಿಸಿರುವ ನರೇಂದ್ರ ಮೋದಿ ಅವಧಿ ಇನ್ನೂ ಮೂರು ವರ್ಷ ಇದೆ. ಇಂದಿಗೆ ಸರಿಯಾಗಿ 20ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಹಾಗೇ, ನರೇಂದ್ರ ಮೋದಿಯವರು ಸಾರ್ವಜನಿಕರಿಗೆ ಕೊಟ್ಟ ಅತ್ಯುಪಯೋಗಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ.  ಪ್ರಧಾನಿ ಮೋದಿಯವರ ಬಹುಮುಖ್ಯ, ಮಹತ್ವಾಕಾಂಕ್ಷಿ ಯೋಜನೆಗಳಲ್ಲಾದ ಸ್ವಚ್ಛ ಭಾರತ ಮಿಷನ್​ ಅಡಿಯಲ್ಲಿ ಇಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸುವರು. ಅದರಲ್ಲೂ ಮುಖ್ಯವಾಗಿ ನದಿ ಶುದ್ಧೀಕರಣ ಕಾರ್ಯ ನಡೆಯಲಿದೆ. ಎಂದು ಬಿಜೆಪಿ ಮೂಲಗಳಿ ಸ್ಪಷ್ಟಪಡಿಸಿವೆ.

Exit mobile version