2023-24ನೇ ಸಾಲಿನ 5,8,9 ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Bengaluru: ರಾಜ್ಯ ಶಿಕ್ಷಣ ಇಲಾಖೆ ಈ ವರ್ಷ ನಡೆಸಲು (2023-24 Exam Time Table) ಉದ್ದೇಶಿಸಿರುವ ಪಬ್ಲಿಕ್ ಪರೀಕ್ಷೆಗಳ (Public Examination) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದೇ ಮೊದಲ ಬಾರಿಗೆ ಪ್ರಾಥಮಿಕ ಹಂತದಲ್ಲಿ 5ನೇ ತರಗತಿಗೆ ಮತ್ತು ಪ್ರೌಢ ಶಾಲಾ (High School) ಹಂತದಲ್ಲಿ 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ರಾಜ್ಯ ಶಿಕ್ಷಣ ಇಲಾಖೆ ನಡೆಸುತ್ತಿದೆ.

2023-24ನೇ ಸಾಲಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ (Karnataka Board of School Examination and Valuation) ವೇಳಾಪಟ್ಟಿ ಪ್ರಕಟಗೊಂಡಿದ್ದು,

5ನೇ ತರಗತಿಗೆ ಮಾರ್ಚ್ 11 ರಿಂದ 14 ವರೆಗೆ ಮತ್ತು 8 ಮತ್ತು 9ನೇ ತರಗತಿಗೆ ಮಾರ್ಚ್ 11 ರಿಂದ 18ರವರೆಗೆ ಪಬ್ಲಿಕ್ ಪರೀಕ್ಷೆ ನಡೆಯಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟ ಮಾಡಿರುವ (2023-24 Exam Time Table) ವಿಷಯವಾರು ವೇಳಾಪಟ್ಟಿ ಹೀಗಿದೆ.

5ನೇ ತರಗತಿ ವೇಳಾಪಟ್ಟಿ:
ಮಾರ್ಚ್ 11- ಪ್ರಥಮ ಭಾಷೆ
ಮಾರ್ಚ್ 12- ದ್ವೀತಿಯ ಭಾಷೆ
ಮಾರ್ಚ್ 13- ಪರಿಸರ ಅಧ್ಯಯನ
ಮಾರ್ಚ್ -14- ಗಣಿತ

8 ಮತ್ತು 9 ನೇ ತರಗತಿ ವೇಳಾಪಟ್ಟಿ:
ಮಾರ್ಚ್ 11- ಪ್ರಥಮ ಭಾಷೆ
ಮಾರ್ಚ್ 12- ದ್ವೀತಿಯ ಭಾಷೆ
ಮಾರ್ಚ್ 13- ತೃತೀಯ ಭಾಷೆ
ಮಾರ್ಚ್ 14- ಗಣಿತ
ಮಾರ್ಚ್ 15- ವಿಜ್ಞಾನ
ಮಾರ್ಚ್ 16- ಸಮಾಜ ವಿಜ್ಞಾನ
ಮಾರ್ಚ್ 18- ದೈಹಿಕ ಶಿಕ್ಷಣ

ಇದನ್ನು ಓದಿ: ಹೆತ್ತ ಮಗುವನ್ನೇ ಕೊಂದ ಬೆಂಗಳೂರಿನ CEO – ಸೂಟ್ಕೇಸ್ನಲ್ಲಿ ಸಾಗಿಸುವಾಗ ಅರೆಸ್ಟ್..!

Exit mobile version