2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ ಭರವಸೆ

New Delhi: 2047ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಆ ವೇಳೆಗೆ ಭ್ರಷ್ಟಾಚಾರ, ಜಾತೀಯತೆ (2047 India developed nation -Modi)

ಮತ್ತು ಕೋಮುವಾದಕ್ಕೆ ದೇಶದಲ್ಲಿ ಜಾಗ ಇರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನ್ನ ವಿಶ್ವಾಸವನ್ನು ಜಿ20 ಶೃಂಗಸಭೆಯ

ಹಿನ್ನೆಲೆಯಲ್ಲಿ ಪಿಟಿಐ (PTI) ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೋದಿ ಬಹಿರಂಗಪಡಿಸಿದರು, ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ (Delhi) ಸೆಪ್ಟೆಂಬರ್‌

8 – 10ರವರೆಗೆ ಜಿ20 ಶೃಂಗಸಭೆ ನಡೆಯಲಿದ್ದು,ಎಲ್ಲಾ ಕಾರ್ಯಕ್ರಮಗಳು (2047 India developed nation -Modi) ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನೀಡಿದ ಸಂದರ್ಶನದಲ್ಲಿ, ನಮ್ಮ ಸರಕಾರ 2014ರಲ್ಲಿ ಆಡಳಿತಕ್ಕೆ ಬಂದ ನಂತರ ದೇಶವು ಶಿಕ್ಷಣ, ಆರೋಗ್ಯ,ವಿಜ್ಞಾನ-ತಂತ್ರಜ್ಞಾನ, ಬ್ಯಾಂಕಿಂಗ್‌ (Banking)

ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಮುಂದೆ ಬಂದಿರುವುದು ಸಾಕ್ಷಿಯಾಗಿದೆ. ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರುತ್ತದೆ ಎಂಬ ಬಗ್ಗೆ ಅದಮ್ಯ ವಿಶ್ವಾಸವಿದೆ.

ನಮ್ಮ ಭಾರತದ ಆರ್ಥಿಕತೆಯು ನಾವೀನ್ಯತೆಗಳ ಮೂಲಕ ಮತ್ತಷ್ಟು ವಿಸ್ತೃತವಾಗಲಿದೆ. ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ಅವಕಾಶವೇ ಇರುವುದಿಲ್ಲ, ಜೊತೆಗೆ ಬಡವರು ಸಹ

ಬಡತನದಿಂದ ಹೊರಬರಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಭಾರತವು ವಿಶ್ವದಲ್ಲಿಯೇ “ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ವಲಯಗಳು ಅತ್ಯುತ್ತಮ ಹಂತಕ್ಕೆ ತಲುಪಲಿವೆ . ಪ್ರತಿಯೊಬ್ಬ ಭಾರತೀಯರ ಜೀವನದ ಗುಣಮಟ್ಟವು ರಾಷ್ಟೀಯ ಅಂತಾರಾಷ್ಟ್ರೀಯ

ಮಟ್ಟದ ಸಾಲಿನಲ್ಲೂ ಸಹ ನಿಲ್ಲಲಿದೆ. ಅರಣ್ಯ ಹಾಗೂ ಸಂಸ್ಕೃತಿಯ ರಕ್ಷಣೆಯ ಜೊತೆಗೆ ಇದನ್ನು ಸಾಧಿಸಲಾಗುವುದು. ದಕ್ಷತೆ, ಪರಿವರ್ತನೆ, ಸುಧಾರಣೆಯತ್ತ ನಮ್ಮ ಪಯಣ ನಿರಂತವಾಗಿ ಸಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಭಾರತ ದೇಶವು ಜಿ20 (G-20) ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವುದು ಮೂರನೇ ಜಗತ್ತು ಎಂದು ಕರೆಸಿಕೊಂಡಿರುವ ದೇಶಗಳಲ್ಲಿ ಆತ್ಮವಿಶ್ವಾಸದ ಬೀಜಗಳನ್ನು

ಬಿತ್ತಿದೆ. ಭಾರತದ ವಿವಿಧ ಪ್ರದೇಶಗಳಿಗೆ 1 ಲಕ್ಷಕ್ಕೂ ಅಧಿಕ ವಿದೇಶಿ ಗಣ್ಯರು ಭೇಟಿ ನೀಡಿ ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದ್ದಾರೆ. ಸುಮಾರು 10 ವರ್ಷಗಳಲ್ಲಿ ಕಂಡು ಬಂದಿರುವ ಸುಧಾರಣೆಗಳು

ದೇಶದ ಜನರನ್ನು ಗಟ್ಟಿಗೊಳಿಸಿವೆ ಎಂಬ ಸಂಗತಿಯನ್ನು ಮನಗಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿಯವರು” ದೇಶದ ಏಳಿಗೆಯನ್ನು ಜಗತ್ತು ಭವಿಷ್ಯದ ರೋಡ್‌ ಮ್ಯಾಪ್‌ನಂತೆ (Road Map) ನೋಡಲಾಗುತ್ತಿದೆಯೇ ಹೊರತು ಬರಿ ಒಂದು ಐಡಿಯಾದಂತೆ ಗಮನಿಸುತ್ತಿಲ್ಲ. ಭಾರತದ

ಜಿಡಿಪಿಯ (GDP) ಗಾತ್ರವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದೇ, ನಮ್ಮ ಸರಕಾರದ ‘ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌’ (Sabka Sath, Sabka Vikas) ನೀತಿಯು ಲೋಕಕಲ್ಯಾಣಕ್ಕೆ

ಮಾರ್ಗದರ್ಶಿ ಸೂತ್ರವಾಗಲಿದ್ದು, ಮಾನವ ಕೇಂದ್ರೀತ ದೃಷ್ಟಿಕೋನದಲ್ಲಿ ಪ್ರಗತಿಯನ್ನು ಕಾಣುವ ಪರಿಪಾಠ ಶುರುವಾಗಿದೆ ಎಂದು ಹೇಳಿದ್ದಾರೆ.

ಮೋದಿ ಅವರು ಚೀನಾಗೆ (China) ಪರೋಕ್ಷವಾಗಿ “ತನ್ನ ನೆಲದಲ್ಲಿ ಎಲ್ಲಿ ಬೇಕಾದರೂ ಜಿ20 ಸಭೆಗಳನ್ನು ನಡೆಸಲು ಭಾರತ ಸರ್ವಸ್ವತಂತ್ರವಾಗಿದೆ. ಇದಕ್ಕೆ ಯಾರಪ್ಪಣೆಯೂ ಬೇಕಿಲ್ಲ,” ಎಂದು ಎಚ್ಚರಿಕೆ

ನೀಡಿದ್ದಾರೆ. ಚೀನಾಗೆ ಮೋದಿ ಲಡಾಕ್‌,ಅರುಣಾಚಲ (Arunachala) ಪ್ರದೇಶದಲ್ಲಿ ಭಾರತವು ಜಿ20 ಸಭೆಗಳನ್ನು ನಡೆಸಿದಕ್ಕೆ ಕ್ಯಾತೆ ತೆಗೆದಿರುವುದಕ್ಕೆ ಚೀನಾಗೆ ಈ ರೀತಿಯಾಗಿ ಖಡಕ್ ಉತ್ತರ ಕೊಟ್ಟಿದ್ದಾರೆ.

ಇದನ್ನು ಓದಿ: ಸಿಂಧೂರಿಗೆ ಸಂಕಷ್ಟ: ಹಣಕಾಸು ಅವ್ಯವಹಾರದ ಆರೋಪದ ಹಿನ್ನೆಲೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

Exit mobile version