ಹಿಜಾಬ್ ಕುರಿತು ಪ್ರತಿಭಟನೆ ಮಾಡಿದ 23 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಕಾಲೇಜು!

ಮಂಗಳೂರು : ತರಗತಿಯೊಳಗೆ ಹಿಜಾಬ್(Hijab) ಧರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಳೆದ ವಾರ ಪ್ರತಿಭಟನೆ ನಡೆಸಿದ 23 ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿ(Uppinangadi) ಸರಕಾರಿ ಪ್ರಥಮ ದರ್ಜೆ ಕಾಲೇಜು(Government First Grade Collage) ಆಡಳಿತ ಮಂಡಳಿ ಸದ್ಯ ಅಮಾನತು ಮಾಡಿದೆ.

ಪುತ್ತೂರು(Puttur) ಬಿಜೆಪಿ ಶಾಸಕ(BJP MLA) ಮತ್ತು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಧ್ಯಕ್ಷ ಸಂಜೀವ ಮಠಂದೂರು ಮಂಗಳವಾರ ಪಿಟಿಐಗೆ ಮಾಹಿತಿ ನೀಡಿದ್ದಾರೆ. “ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು. ಮೂಲಗಳ ಪ್ರಕಾರ, ಕಳೆದ ವಾರ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಕಾಲೇಜಿಗೆ ಹುಡುಗಿಯರು ಹಿಜಾಬ್ ಧರಿಸಿ ಬಂದು, ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಸೋಮವಾರ ಸಿಡಿಸಿ ಸಭೆ ನಡೆಸಿ ಅವರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಹಿಜಾಬ್‌ನೊಂದಿಗೆ ಕಾಲೇಜಿಗೆ ಬಂದ ಏಳು ವಿದ್ಯಾರ್ಥಿನಿಯರನ್ನು ಸಮಿತಿಯು ಈ ಹಿಂದೆ ಅಮಾನತುಗೊಳಿಸಿತ್ತು. ಎಲ್ಲೆಲ್ಲಿ ಡ್ರೆಸ್ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರೂ ಏಕರೂಪದ ಉಡುಗೆ ನಿಯಮವನ್ನು ಪಾಲಿಸಬೇಕು ಎಂಬ ವಿಷಯದ ಕುರಿತು ಈ ವರ್ಷದ ಮಾರ್ಚ್‌ನಲ್ಲಿ ಕರ್ನಾಟಕ ಹೈಕೋರ್ಟ್(Karnataka Highcourt) ತೀರ್ಪು(Verdict) ನೀಡಿದ್ದರೂ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ.

ಉಡುಪಿಯ ಕರಾವಳಿ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳು, ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸಿದ ಹಿನ್ನಲೆ ಹೈಕೋರ್ಟ್‌ ಮೊರೆ ಹೋದ ನಂತರ ಈ ತೀರ್ಪು ಬಂದಿದೆ. ಈ ವಿಷಯವು ವಿದ್ಯಾರ್ಥಿಗಳ ಒಂದು ವಿಭಾಗದಿಂದ ಆಂದೋಲನವನ್ನು ಹುಟ್ಟುಹಾಕಿತು. ಕೇಸರಿ ಶಾಲುಗಳ ವಿರುದ್ಧ ಹಿಜಾಬ್ ಧರಿಸುವಿಕೆ ಕುರಿತು ಈ ವರ್ಷದ ಆರಂಭದಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಗೊಂದಲಗಳು ಸೃಷ್ಟಿಯಾಗಿತ್ತು.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು, ಸರ್ಕಾರವು ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಒಂದು ವಾರದವರೆಗೆ ಶಾಲಾ-ಕಾಲೇಜುಗಳನ್ನು ಕೂಡ ಮುಚ್ಚಿತ್ತು!

Exit mobile version