ಕಳೆದ ೨೪ಗಂಟೆಯಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆ: 3,876 ಮಂದಿ ಸಾವು

ನವದೆಹಲಿ, ಮೇ. 11: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆಯಾಗಿದ್ದು 3,876 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,29,92,517 (2.29 ಕೋಟಿ) ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದೇ ವೇಳೆ 3,56,082 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ 1,90,27,304 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37,15,221 ಆಗಿದ್ದು 2,49,992 ಮಂದಿ ಮೃತಪಟ್ಟಿದ್ದಾರೆ. ಲಸಿಕೆ ಪಡೆದವರ ಸಂಖ್ಯೆ 17,27,10,066 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ 18 ಕೋಟಿಗಿಂತಲೂ ಹೆಚ್ಚು ಡೋಸ್ ಕೊವಿಡ್ ಲಸಿಕೆಗಳನ್ನು ಈವರೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. 90ಲಕ್ಷಕ್ಕಿಂತೂ ಹೆಚ್ಚು ಡೋಸ್ ವಿತರಣೆಯಾಗದೆ ರಾಜ್ಯಗಳಲ್ಲಿ ಉಳಿದೆ. ಇನ್ನು ಮೂರು ದಿನಗಳಲ್ಲಿ7 ಲಕ್ಷಕ್ಕಿಂತಲೂ ಹೆಚ್ಚು ಡೋಸ್ ರಾಜ್ಯಗಳಿಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ 2021 ಮೇ 10ರ ವರೆಗೆ 30,56,00,187 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳ ಪೈಕಿ 18,50,110 ಮಾದರಿಗಳನ್ನು ನಿನ್ನೆ ಪರೀಕ್ಷೆಗೊಳಪಡಿಸಲಾಗಿದೆ.

Exit mobile version