ಪತ್ರಕರ್ತರಿಗೆ ಬೆದರಿಕೆ ಹಾಕುವ ಮತ್ತು ಹಲ್ಲೆ ಮಾಡುವವರಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ : ಸುಪ್ರೀಂಕೋರ್ಟ್‌

New Delhi : ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಪತ್ರಕರ್ತರಿಗೆ ಶ್ರೀರಕ್ಷೆಯಾಗುವ ಮಹತ್ವದ ತೀರ್ಪುನ್ನು ಸುಪ್ರೀಂಕೋರ್ಟ್‌(5 years rigorous imprisonment) ನೀಡಿದೆ. 

ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿರುವ ಮಾಧ್ಯಮವು ಹೆಚ್ಚು ಸಕ್ರಿಯವಾದಷ್ಟು, ಪ್ರಜಾಪ್ರಭುತ್ವವು ಗಟ್ಟಿಯಾಗಿ ನೆಲೆಯೂರುತ್ತದೆ. ಹೀಗಾಗಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು(5 years rigorous imprisonment) ಮಹತ್ವದ್ದಾಗಿದೆ.

ದೇಶದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ, ಯಾರೇ ಆದರೂ ಬೆದರಿಕೆಯೊಡ್ಡಿದರೆ, ಅಪಮಾನ ಮಾಡಿದರೆ ಅಥವಾ ಅವರ ಮೇಲೆ ಹಲ್ಲೆ ಮಾಡಿದರೆ, ಅಂತವರಿಗೆ 50ಸಾವಿರ ರೂಪಾಯಿ ದಂಡ ಹಾಗೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ : https://vijayatimes.com/central-govt-to-supremecourt/

ಇನ್ನು ಸುಪ್ರೀಂಕೋರ್ಟ್‌ ನೀಡಿರುವ ಈ ತೀರ್ಪನ್ನು ನಾಡಿನ ಅನೇಕ ಪತ್ರಕರ್ತರು ಸ್ವಾಗತಿಸಿದ್ದಾರೆ. ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಮತ್ತು ಪತ್ರಕರ್ತರಿಗೆ ಶ್ರೀರಕ್ಷೆಯಾಗಿದೆ ಎಂದು ವಂದೇ ಮಾತರಂ ರಾಜ್ಯ ಮುಖಂಡ ಹಾಗೂ ಪತ್ರಕರ್ತ ವಿ.ಜಿ.ವೃಷಭೇಂದ್ರ ಅಭಿಪಾಯ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಕಂಟಕ ಪ್ರಾಯವಾಗಿರುವವರ ವಿರುದ್ಧ, ನೈತಿಕ ಸಮರ ಸಾರುವ ನಿಷ್ಠಾವಂತ ಪತ್ರಕರ್ತರಿಗೆ ಸುಪ್ರೀಂಕೋರ್ಟ್ ತೀರ್ಪು ಶ್ರೀರಕ್ಷೆಯಾಗಿದ್ದು, ಪಾಮಾಣಿಕವಾಗಿ ಸಾಮಾಜಿಕ ಕಾಳಜಿಯಿಂದ ನಾಡಿನ ಸೇವೆ ಮಾಡಲು ಅನುಕೂಲವಾಗಲಿದೆ. ಭ್ರಷ್ಟಾಚಾರದ ವಿರುದ್ಧ, ಕಾನೂನಿನ್ವಯ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಾಡಿನಲ್ಲಿರುವ ಸಾಮಾಜಿಕ ಸೈನಿಕರಾಗಿದ್ದಾರೆ. 

https://fb.watch/h5mrL38_Hf/ ಬೆಂಗಳೂರು : ಕೋಣನಕುಂಟೆ ಕ್ರಾಸ್ ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮನಬಂದಂತೆ ಅವಮಾನಿಸಿದ ವ್ಯಕ್ತಿ!

ಈ ರೀತಿಯ ಭದ್ರತೆ ನೀಡುವುದರಿಂದ ಪತ್ರಕರ್ತರು ಇನ್ನಷ್ಟು ಪ್ರಭಾವ ಬೀರಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ‌ಹೇಳಿದೆ. ಸುಪ್ರೀಂಕೋರ್ಟ್‌ನೀಡಿರುವ ತೀರ್ಪನ್ನು ಪತ್ರಕರ್ತರ ಸಂಘದ‌ ಅಧ್ಯಕ್ಷ ಬಡಿಗೇರ ನಾಗರಾಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಅಧ್ಯಕ್ಷ ಎಲೆ ನಾಗರಾಜ ಸ್ವಾಗತಿಸಿದ್ದಾರೆ.

Exit mobile version