ಉತ್ತರ ಪ್ರದೇಶ,ಜೂ.14: ಆಟವಾಡುತ್ತಿದ್ದ 4 ವರ್ಷದ ಮಗು 150 ಅಡಿ ಆಳದ ಬೋರ್ವೆಲ್ಗೆ ಬಿದ್ದಿರುವ ಘಟನೆಯೊಂದು ಆಗ್ರಾದ ಧರಿಯೈ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಸರಿಸುಮಾರು 8:30 ಸಮಯದಲ್ಲಿ ಆಗ್ರಾದ ನಿಬೊಹಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಫತೆಹಾಬಾದ್ನಲ್ಲಿ ಘಟನೆ ನಡೆದಿದ್ದು, ಮಗು ಪ್ರತಿಕ್ರಿಯೆ ನೀಡುತ್ತಿದೆ ಹಾಗೂ ಮಗುವಿನ ಚಲನ-ವಲನಗಳು ಗಮನಕ್ಕೆ ಬರುತ್ತಿದೆ ಎಂದು ಅಧಿಕಾರಿ ಸೂರಜ್ ಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ತಡಮಾಡದೇ ಹಗ್ಗವನ್ನು ಬೋರ್ವೆಲ್ಗೆ ಇಳಿಬಿಟ್ಟಿದ್ದೇವೆ. ಮಗು ನಮ್ಮ ಮಾತನ್ನು ಕೇಳಿಸಿಕೊಂಡು ಪ್ರತಿಕ್ರಿಯೆ ನೀಡುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.