ಕರ್ನಾಟಕದ `ಅಬ್ದುಲ್ ಖಾದರ್ ನಡಕಟ್ಟಿನ್’ ಅವರಿಗೆ ಪದ್ಮಶ್ರೀ ಪ್ರಶಸ್ತಿ!

abdul nadakattin

ನವದೆಹಲಿ(ಭಾರತ) ಮಾರ್ಚ್ 29 : ಕರ್ನಾಟಕದ(Karnataka) ಧಾರವಾಡದ(Dharwad) ತಳಮಟ್ಟದ ಕೃಷಿ ಆವಿಷ್ಕಾರಕ ಅಬ್ದುಲ್ ಖಾದರ್ ನಡಕಟ್ಟಿನ್(Abdul khadar Nadakattin) ಅವರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramnath Kovind) ಅವರಿಂದ ಪದ್ಮಶ್ರೀ(Padmashree) ಪ್ರಶಸ್ತಿ ದೊರೆತಿದೆ.

ಕೃಷಿ(Agriculture) ವಿಭಾಗಕ್ಕೆ ಅವರು ನೀಡಿರುವ ಅಗಾಧ ಸೇವೆ, ಕೊಡುಗೆಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಸ್ವೀಕರಿಸಿದರು. ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ ಮುಖೇನ 40ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಅವರು ಮನ್ನಣೆ ಪಡೆದಿದ್ದಾರೆ. “ನಾನೊಬ್ಬ ಸಾಮಾನ್ಯ ರೈತ, ಆದ್ರೆ ಕಳೆದ 35 ವರ್ಷಗಳಲ್ಲಿ ಕೃಷಿಯಲ್ಲಿ ಬಳಸುವ ಯಂತ್ರಗಳ ಕುರಿತು ನಾನು ಮಾಡಿದ ಸಂಶೋಧನೆಗಾಗಿ ಭಾರತ ಸರ್ಕಾರ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ” ಎಂದು ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ್ ಅವರು ಹೆಮ್ಮೆಯಿಂದ ಮಾಧ್ಯಮಗಳಿಗೆ ಹೇಳಿದರು.

“ನಾನು ಇದನ್ನು ದೇಶದ ಎಲ್ಲಾ ರೈತರಿಗೆ ಅರ್ಪಿಸಲು ಬಯಸುತ್ತೇನೆ” ಎಂದು ಅವರು ಸಂತಸದಿಂದ ಹೇಳಿದರು. ಅಬ್ದುಲ್ ಅವರು ಚಿಕ್ಕವಯಸ್ಸಿನಲ್ಲಿದ್ದಾಗಲೇ ಮಾವು, ಸಪೋಟ, ಮೆಣಸಿನಕಾಯಿ ಬೆಳೆಯನ್ನು ಮಿಶ್ರ ಬೆಳೆಯಾಗಿ ಪರಿವರ್ತಿಸಿದ್ದರು. ಮೆಕಾನಿಕ್ ಹವ್ಯಾಸವೂ ಕೃಷಿಗೆ ಹೊಸ ಅವಿಷ್ಕಾರ ನೀಡಿತು. ವಿಶ್ವಶಾಂತಿ ಕೃಷಿ ಸಂಶೋಧನೆ ಮತ್ತು ಇಂಡಸ್ಟ್ರಿಯಲ್ ಸಂಶೋಧನೆ ಕೇಂದ್ರವನ್ನು 1975 ಸ್ಥಾಪನೆ ಮಾಡಿದರು. ಇಂದು ಅವರ ‘ನಡಕಟ್ಟಿನ್’ ಹೆಸರಿನಡಿ ಉಪಯೋಗವಾಗುತ್ತಿರುವ ಎಷ್ಟೋ ಕೃಷಿ ಉಪಕರಣಗಳು ಯಶಸ್ವಿಯಾಗಿ ದೇಶಾದ್ಯಂತ ಮಾರಾಟವಾಗುತ್ತಿದೆ.

Exit mobile version