ತಾಲಿಬಾನಿಗಳ ವಶದಲ್ಲಿ ಸುಮಾರು 200 ಜನ ಭಾರತೀಯರು

ನವದೆಹಲಿ, ಆ. 16: ತಾಲಿಬಾನಿಗಳು ಇಗಾಗಲೇ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದು  ಇದೀಗ ಅಫ್ಘಾನಿಸ್ತಾನದಲ್ಲಿ ಸುಮಾರು 200 ಜನ ಭಾರತೀಯರು ಇನ್ನೂ ಇದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇವರಲ್ಲಿ ವಿದೇಶಾಂಗ ಇಲಾಖೆಯ ಉದ್ಯೋಗಿಗಳು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿಗಳು ಸಹ ಸೇರಿದ್ದು ಇವರೆಲ್ಲರೂ ಕೂಡ ಪ್ರಸ್ತುತ ಕಾಬೂಲ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಕಾಬೂಲ್‌ನಲ್ಲಿ ಸಿಲುಕಿರುವ ಜನರಲ್ಲಿ 100 ಜನರು ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸೇರಿದಂತೆ ವಿವಿಧ ಕಡೆ ಭದ್ರತೆಗಾಗಿ ಇವರು ನಿಯೋಜನೆಗೊಂಡಿದ್ದರು..ಅಫ್ಘಾನಿಸ್ತಾನ ತೊರೆಯಲು ಸಾವಿರಾರು ಜನರು ತಯಾರಾಗಿದ್ದಾರೆ. ಎಲ್ಲರೂ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಸಾವಿರಾರು ಜನರು ಜಮಾವಣೆಗೊಂಡಿದ್ದಾರೆ. ಭಾರತೀಯರನ್ನು ವಾಪಸ್ ಕರೆಸಲು ವಿದೇಶಾಂಗ ಇಲಾಖೆ ಮಾತುಕತೆಯನ್ನು ನಡೆಸುತ್ತಿದೆ. ಆದರೆ ಇನ್ನೂ ಅಂತಿಮ ಒಪ್ಪಿಗೆ ಸಿಕ್ಕಿಲ್ಲ.

ತಾಲಿಬಾನ್ ಗಳ ಅತಿರೇಕದ ವರ್ತನೆ ಹಿನ್ನಲೆಯಲ್ಲಿ ಭಾನುವಾರ ರಾತ್ರಿಯಿಂದ ಅಫ್ಘಾನಿಸ್ತಾನದಲ್ಲಿ ವಾಣಿಜ್ಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ . ಕಳೆದ 3-4 ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗಳ ಅಟ್ಟಹಾಸದಿಂದ ಜನರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಆದರೆ ವಿದೇಶಾಂಗ ಇಲಾಖೆ  ಅಲ್ಲಿರುವ ಭಾರತೀಯರನ್ನು ಏಕೆ ರಕ್ಷಣೆ ಮಾಡಿ ವಾಪಸ್ ಕರೆಸಲಿಲ್ಲ ಎಂಬುದು ಸದ್ಯದ ಪ್ರಶ್ನೆಯಾಗಿದೆ.

Exit mobile version