ರಾಜಧಾನಿಯ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಬಿಬಿಎಂಪಿಯಿಂದ ಒಟ್ಟು ₹8,932 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ

Bengaluru : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿದೆ ನಮ್ಮ ಕರ್ನಾಟಕ ರಾಜಧಾನಿ ಬೆಂಗಳೂರು (about BBMP budget proposal), ನಿರೀಕ್ಷೆಗೂ ಮೀರಿ ಇದೀಗ ರಾಜಧಾನಿ

ಬೆಳೆಯುತ್ತಿದ್ದು, ಮೂಲಸೌಕರ್ಯ ಕೂಡ ಕಲ್ಪಿಸುವುದು ಸವಾಲೆನಿಸಿದೆ.ಬಿಬಿಎಂಪಿಯು (BBMP) ಹೀಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರಕಾರವನ್ನು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ

8,932 ಕೋಟಿ ರೂ. ಅನುದಾನ ಒದಗಿಸುವಂತೆ (about BBMP budget proposal) ಕೋರಿದೆ.

ಪ್ರತಿ ವರ್ಷ ಸಾವಿರಾರು ಕೋಟಿಯನ್ನು ರಾಜಧಾನಿಯ ಅಭಿವೃದ್ಧಿಗೆ ವ್ಯಯಿಸುತ್ತಿದ್ದರೂ ಕೂಡ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬ ಗಾದೆಯಂತಾಗಿದೆ.ಪುರಸಭೆ, ನಗರಸಭೆ ಮತ್ತು 110 ಹಳ್ಳಿಗಳು 2007ರಲ್ಲಿ

ಪಾಲಿಕೆ ತೆಕ್ಕೆಗೆ ಸೇರಿಕೊಂಡಿವೆ ಇದೀಗ ಇವುಗಳ ಸ್ಥಿತಿ ಕೂಡ ಶೋಚನೀಯವಾಗಿದೆ. ಅಷ್ಟೇ ಅಲ್ಲದೆ ಮಹಾನಗರದ ಜನರನ್ನು ಕಸ, ರಸ್ತೆ ಗುಂಡಿ, ಟ್ರಾಫಿಕ್‌ಜಾಮ್‌, ಪ್ರವಾಹ ಸಮಸ್ಯೆಯು ತೀವ್ರವಾಗಿ ಬಾಧಿಸುತ್ತಿದೆ.

ಜು. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆಯವ್ಯಯ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ವೈಟ್‌ಟಾಪಿಂಗ್‌, ರಾಜಕಾಲುವೆಗಳ ಅಭಿವೃದ್ಧಿ, ಎಲಿವೇಟೆಡ್‌ ರಸ್ತೆಗಳ ನಿರ್ಮಾಣ, ರಸ್ತೆಗಳ ದುರಸ್ತಿ,

ತ್ಯಾಜ್ಯ ನಿರ್ವಹಣೆ, ಕೆರೆ, ಹೈಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಒಟ್ಟು 8,932 ಕೋಟಿ ರೂ. ಕೋರಿ ಪಾಲಿಕೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬಿಜೆಪಿ (BJP) ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ನಗರದ ಅಭಿವೃದ್ಧಿ ವಲಯಕ್ಕೆ 9,698 ಕೋಟಿ ರೂ.

ಅನುದಾನವನ್ನು 2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು.

16.3 ಕಿ.ಮೀ. ಉದ್ದದ ಎಲಿವೇಟೆಡ್‌

ಪಾಲಿಕೆಯು ಸಂಚಾರ ದಟ್ಟಣೆಯ ಚಕ್ರವ್ಯೂಹದಿಂದ ಮಹಾನಗರದ ಜನರನ್ನು ಪಾರು ಮಾಡಲು ಎಲಿವೇಟೆಡ್‌ ಕಾರಿಡಾರ್‌ಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಬಳ್ಳಾರಿ (Bellari) ರಸ್ತೆಯ ಬ್ಯಾಪ್ಟಿಸ್ಟ್‌

ಆಸ್ಪತ್ರೆ ಜಂಕ್ಷನ್‌ನಿಂದ ಪ್ರಾರಂಭಗೊಂಡು ಮಿನರ್ವ ವೃತ್ತದವರೆಗೆ (10.8 ಕಿ.ಮೀ.) ಮತ್ತು ಕೆ.ಆರ್‌. ಪುರದ (KR Puram) ಟಿನ್‌ಫ್ಯಾಕ್ಟರಿಯಿಂದ (Tin Factory) ಪ್ರಾರಂಭಗೊಂಡು ಹಳೆ ಹಲಸೂರು

ರಸ್ತೆವರೆಗೆ (5.5 ಕಿ.ಮೀ.) ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಸರಕಾರದಿಂದ ಒಟ್ಟು 1,650 ಕೋಟಿ ರೂ. ಅನುದಾನ ಒದಗಿಸುವಂತೆ ಕೋರಲಾಗಿದೆ.

ಇದನ್ನೂ ಓದಿ : ಹಗಲಿನಲ್ಲಿ ಬಳಸುವ ವಿದ್ಯುತ್‌ಗೆ ಶೇ.20 ಕಡಿಮೆ ಶುಲ್ಕ: ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಬದಲಾವಣೆಗೆ ಕೇಂದ್ರ ನಿರ್ಧಾರ

ಉತ್ತಮ ಪ್ರತಿಕ್ರಿಯೆಯು 2016 – 17ರಿಂದ ಆರಂಭವಾದ ವೈಟ್‌ಟಾಪಿಂಗ್‌ ಕಾಮಗಾರಿಗೆ ವ್ಯಕ್ತವಾಗಿದೆ. ಸಿಲಿಕಾನ್‌ ಸಿಟಿಯನ್ನು ಅಣಕಿಸುವಂತಹ ರಸ್ತೆ ಗುಂಡಿಗಳು ವೈಟ್‌ಟಾಪಿಂಗ್‌ ನಿಂದಾಗಿ ಮುಕ್ತವಾಗಿದೆ

ಹೀಗಾಗಿ ವೈಟ್‌ಟಾಪಿಂಗ್‌ ರಸ್ತೆಗಳಿಗೆ ಬೇಡಿಕೆ ಇದೆ. ಈವರೆಗೆ 190 ಕಿ.ಮೀ. ಉದ್ದದ ವೈಟ್‌ಟಾಪಿಂಗ್‌ ರಸ್ತೆಗಳನ್ನು ಒಂದು ಮತ್ತು ಎರಡನೇ ಹಂತದಲ್ಲಿ ನಿರ್ಮಿಸಲಾಗಿದೆ. 150 ಕಿ.ಮೀ. ಉದ್ದದ

ರಸ್ತೆಗಳಿಗೆ ಮೂರನೇ ಹಂತದಲ್ಲಿ ವೈಟ್‌ಟಾಪಿಂಗ್‌ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ಒಟ್ಟು 1200 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಈ ಹಿಂದಿನ ಬಿಜೆಪಿ ಸರಕಾರ ನಗರದಲ್ಲಿರುವ 12 ಅತಿದಟ್ಟಣೆ ಕಾರಿಡಾರ್‌ಗಳ (ಹೈಡೆನ್ಸಿಟಿ) ಪೈಕಿ 9 ಕಾರಿಡಾರ್‌ಗಳ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಗೆ ಅನುಮೋದನೆ ನೀಡಿ ಆದೇಶಿಸಿದೆ.

ಒಟ್ಟು 237.90 ಕೋಟಿ ರೂ. ವೆಚ್ಚ 83.13 ಕಿ.ಮೀ. ಉದ್ದದ ಕಾರಿಡಾರ್‌ಗಳ ಅಭಿವೃದ್ಧಿಗೆ ಮಾಡಲಾಗುತ್ತಿದೆ. ಹೈಡೆನ್ಸಿಟಿ ಕಾರಿಡಾರ್‌ಗಳನ್ನು ಪ್ರಸ್ತಾಪಿತ 192 ಕಿ.ಮೀ. ನಿಂದ 400 ಕಿ.ಮೀ.ಗೆ ನಗರದಲ್ಲಿ

ವಾಹನ ದಟ್ಟಣೆ ಹೆಚ್ಚಳದಿಂದ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.ಅಷ್ಟೇ ಅಲ್ಲದೆ ಒಟ್ಟು 371 ಕೋಟಿ ರೂ.ಲೈಟ್‌ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ರಸ್ತೆ ಮರು ನಿರ್ಮಾಣಕ್ಕೆ ಅಗತ್ಯವಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ನಗರದ 3ನೇ ಟರ್ಮಿನಲ್‌ ಅನ್ನು ನೈಋುತ್ಯ ರೈಲ್ವೆ ಇಲಾಖೆ ಬೈಯಪ್ಪನಹಳ್ಳಿಯಲ್ಲಿ(Baiyappanahalli) ನಿರ್ಮಿಸಿದೆ. ಮೆಟ್ರೋ ಮತ್ತು ಇತರೆ ರಸ್ತೆಗಳ ಸಂಪರ್ಕ ಈ ಟರ್ಮಿನಲ್‌ಗೆ ಇಲ್ಲ. ಇದಕ್ಕಾಗಿ 263 ಕೋಟಿ ರೂ.

ರೋಟರಿ ಮೇಲ್ಸೇತುವೆ ನಿರ್ಮಿಸಲು ಅಗತ್ಯವಿದೆ ಎಂದು ಪಾಲಿಕೆಯು ತಿಳಿಸಿದೆ. ಹಾಗೆಯೇ ಈಗಾಗಲೇ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಕೊಳವೆಗಳನ್ನು ಒಟ್ಟು 110 ಹಳ್ಳಿಗಳಿಗೆ

ಅಳವಡಿಸಬೇಕೆಂದು ಅಗೆದಿದ್ದ ರಸ್ತೆಗಳ ಪುನಶ್ಚೇತನಕ್ಕೆ ಒಟ್ಟು 300 ಕೋಟಿ ರೂ. ಒದಗಿಸುವಂತೆ ಮನವಿ ಮಾಡಲಾಗಿದೆ.

256 ಎಕರೆಯಲ್ಲಿ ಉದ್ಯಾನ, ಟ್ರೀ ಪಾರ್ಕ್

97 ಲಕ್ಷ ಟನ್‌ ಪಾರಂಪರಿಕ ತ್ಯಾಜ್ಯ ಮಂಡೂರು, ಮಾವಳ್ಳಿಪುರದಲ್ಲಿ ರಾಶಿ ಬಿದ್ದಿದೆ ಇವುಗಳನ್ನು ಜೈವಿಕ ಪರಿಹಾರದ ಮೂಲಕ ಮತ್ತು ಜೈವಿಕ ಗಣಿಗಾರಿಕೆ ಮೂಲಕ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುವುದು.

500 ಕೋಟಿ ರೂ. ವೆಚ್ಚದಲ್ಲಿ 256 ಎಕರೆಯನ್ನು 5 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.ಮತ್ತು ಇವುಗಳನ್ನು ಉದ್ಯಾನ ಮತ್ತು ಟ್ರೀ ಪಾರ್ಕ್‌ಗಳನ್ನಾಗಿ ಪರಿವರ್ತಿಸಲಾಗುವುದು.

ಬಿಬಿಎಂಪಿ ಸ್ವಂತ ಅನುದಾನದಲ್ಲಿ ಮತ್ತು ಹಸಿರು ನ್ಯಾಯಾಧೀಕರಣದಿಂದ ಲಭ್ಯವಾಗಿರುವ ಅನುದಾನ ಭರಿಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆಯು ಹೇಳಿದೆ. ಬೆಂಗಳೂರು ಘನತ್ಯಾಜ್ಯ

ನಿರ್ವಹಣಾ ಕಂಪೆನಿ ನಗರದ ತ್ಯಾಜ್ಯ ನಿರ್ವಹಣೆಗಾಗಿಯೇ ರಚಿಸಲ್ಪಟ್ಟಿದೆ ಇದಕ್ಕಾಗಿ ಒಟ್ಟು 100 ಕೋಟಿ ರೂ. ನೆರವು ನೀಡುವಂತೆ ಕೋರಲಾಗಿದೆ.

ಸರಕಾರದಿಂದ 11,276 ಕೋಟಿ ರೂ. ಬಾಕಿ

ನಾನಾ ಯೋಜನೆಗಳಡಿ 2016-17 ರಿಂದ 2022-23ರವರೆಗೆ ಸರಕಾರದಿಂದ 29,806.87 ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಅದರಲ್ಲಿ 18 530.37 ಕೋಟಿ ರೂ. ಅನುದಾನವನ್ನು

ಈವರೆಗೆ ಸರಕಾರ ಪಾಲಿಕೆಗೆ ಬಿಡುಗಡೆ ಮಾಡಿದೆ. ಇನ್ನೂ 11 276.50 ಕೋಟಿ ರೂ. ಅನುದಾನ ಬಿಡುಗಡೆ ಬಾಕಿ ಇದೆ.

842 ಕಿ.ಮೀ.ನಗರದಲ್ಲಿ ರಾಜಕಾಲುವೆ ಜಾಲವಿದ್ದು,ಇನ್ನೂ 171 ಕಿ.ಮೀ. ಉದ್ದದ ಕಾಲುವೆಯನ್ನು ಅಭಿವೃದ್ಧಿಪಡಿಸಬೇಕಿದೆ. ನಗರದಲ್ಲಿ ಪ್ರವಾಹ ಪರಿಸ್ಥಿತಿ ತಪ್ಪಿಸಲು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ

ಮತ್ತು ದ್ವಿತೀಯ ಚರಂಡಿಗಳಿಗೆ ತಡೆಗೋಡೆ ನಿರ್ಮಾಣ, ಕೆರೆಗಳಿಗೆ ತೂಬುಗಳನ್ನು ಅಳವಡಿಸಿ ನೀರಿನ ಹರಿವು ನಿಯಂತ್ರಿಸಲು ವಿಶ್ವಬ್ಯಾಂಕ್‌ ನೆರವಿನೊಂದಿಗೆ ಯೋಜನೆ ರೂಪಿಸಲಾಗಿದೆ

ಎಂದು ಪಾಲಿಕೆಯು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ 200 ಕೋಟಿ ರೂ.:

ಇಂದಿರಾ ಕ್ಯಾಂಟೀನ್‌ (Indira Canteen) ಬಿಜೆಪಿ ಸರಕಾರದ ಅವಧಿಯಲ್ಲಿ ಕಡೆಗಣಿಸಲ್ಪಟ್ಟಿತ್ತು ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಇಂದಿರಾ ಕ್ಯಾಂಟೀನ್‌ಗೆ ಮರುಜೀವ ನೀಡಲು

ತೀರ್ಮಾನಿಸಿದೆ.ಪಾಲಿಕೆಯು ಈ ಸಂಬಂಧ ವರದಿ ಕೂಡ ಸಲ್ಲಿಸಿದೆ.ಕ್ಯಾಂಟೀನ್‌ಗಳಿಗೆ ಊಟ, ತಿಂಡಿ ಪೂರೈಸಿರುವ ಗುತ್ತಿಗೆ ಸಂಸ್ಥೆಗಳ ಬಾಕಿ ಬಿಲ್‌ ಪಾವತಿಗೆ 110 ಕೋಟಿ ರೂ. ಮತ್ತು ನಿರ್ವಹಣೆಗೆ 90 ಕೋಟಿ ರೂ,

ಹೊಸ ಕ್ಯಾಂಟೀನ್‌ಗಳ ನಿರ್ಮಾಣ, ಸೇರಿ ಒಟ್ಟು 200 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ರಶ್ಮಿತಾ ಅನೀಶ್

Exit mobile version