ಡಾಕ್ಟರ್‌ ಎಡವಟ್ಟು: ಆಪರೇಷನ್‌ ನಂತರ ಗರ್ಭಿಣಿ ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟು ಹೊಲಿಗೆ ಹಾಕಿದ ವೈದ್ಯರು !

Iluru: ವೈದ್ಯೋ ನಾರಾಯಣೋ ಹರಿ: ಆದ್ರೆ ವೈದ್ಯರಿಂದಾಗುವ ಯಡವಟ್ಟು ಕೆಲವೊಮ್ಮೆ (about doctor left scissors) ರೋಗಿಯ ಪ್ರಾಣಕ್ಕೇ ಕುತ್ತಾಗುತ್ತೆ. ಆಂಧ್ರಪ್ರದೇಶದ (Andhra Pradesh)

ಈಲೂರಿನಲ್ಲಿ (Iluru) ನಡೆದ ಒಂದು ಘಟನೆಯು ಈಗ ಭಾರೀ ವಿವಾದ ಸೃಷ್ಟಿಸಿದೆ. ವೈದ್ಯರು ಗರ್ಭಿಣಿ ಒಬ್ಬರಿಗೆ ಆಪರೇಷನ್‌(Operation) ಮಾಡಿದ ನಂತರ ಮರೆತು ಕತ್ತರಿಯನ್ನು ಹೊಟ್ಟೆಯಲ್ಲಿಯೇ

ಬಿಟ್ಟು ಹೊಲಿಗೆ ಹಾಕಿದ್ದಾರೆ ಎಂಬ (about doctor left scissors) ಆರೋಪ ಕೇಳಿ ಬಂದಿದೆ.

ಈ ಭೀಕರ ಘಟನೆ ಏಲೂರು ಸರಕಾರಿ ಆಸ್ಪತ್ರೆಯಲ್ಲಿ (Government hospital) ನಡೆದಿದ್ದು ಸದ್ಯ ತಡವಾಗಿ ಬೆಳಕಿಗೆ ಬಂದಿದೆ. ಗರ್ಭಿಣಿಯೊಬ್ಬರು ಹೆರಿಗೆಗಾಗಿ ಈ ಸರಕಾರಿ ಆಸ್ಪತ್ರೆಗೆ ವಾರದ ಹಿಂದೆ

ದಾಖಲಾಗಿದ್ದರು. ಗರ್ಭಿಣಿಗೆ ಕೆಲವೊಂದು ಪರೀಕ್ಷೆ ನಡೆಸಿದ ವೈದ್ಯರು ಮಗುವನ್ನು ಸಿಸೇರಿಯನ್(Cesarean) ಮಾಡಿ ಹೊರತೆಗೆದಿದ್ದಾರೆ ಆದರೆ ಆಪರೇಷನ್ ಮುಗಿಸಿ ನಂತರ ಕೊನೆಯದಾಗಿ ಹೊಲಿಗೆ

ಹಾಕುವಾಗ ಹೊಟ್ಟೆಯಲ್ಲಿದ್ದ ಕತ್ತರಿ (about doctor left scissors) ತೆಗೆಯುವುದನ್ನೇ ಮರೆತಿದ್ದಾರೆ.

ಇದನ್ನೂ ಓದಿ : ಹೆಂಡತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಇದ್ದಾರೆಂಬ ಅಸೂಯೆ ಮತ್ತು ಕೀಳರಿಮೆಯಿಂದ ಮಕ್ಕಳ ಎದುರೇ ಪತ್ನಿಯನ್ನು ಕೊಂದ ಉದ್ಯಮಿ

ಆದರೆ,ಸಂತ್ರಸ್ತೆಯು ಅಂದಿನಿಂದ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದ ಗಾಬರಿಗೊಂಡಿದ್ದ ಮನೆಯವರು ಎರಡು ಮೂರು ದಿನಗಳ ಬಳಿಕ ಆಕೆಯ ಹೊಟ್ಟೆಯ ಎಕ್ಸ್ ರೇ ತೆಗೆದರು.

ಆ ಸಂದರ್ಭದಲ್ಲಿ ಆಕೆಯ ಹೊಟ್ಟೆಯಲ್ಲಿ ಕತ್ತರಿ(scissors) ಇರುವುದು ಬೆಳಕಿಗೆ ಬಂದಿದೆ.ಆದರೆ ಅಲ್ಲಿದ್ದ ವೈದ್ಯರು ಈ ಘಟನೆ ಬಹಿರಂಗವಾಗದಂತೆ ನೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಆಕೆಯ ಎಕ್ಸ್-ರೇ(X-ray) ಫೋಟೋವನ್ನು ತಮ್ಮ ಫೇಸ್‌ಬುಕ್(Facebook) ಮತ್ತು ಟ್ವಿಟರ್(Twitter) ಖಾತೆಗಳಲ್ಲಿ ನೌಕರನೊಬ್ಬ ಪೋಸ್ಟ್(Post) ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಆ ನೌಕರನನ್ನು ಸಂಬಂಧಪಟ್ಟ ಆಸ್ಪತ್ರೆಯ ಅಧಿಕಾರಿಗಳು ಆತನನ್ನು ಕರೆಸಿ ಅವನಿಗೆ ಛೀಮಾರಿ ಹಾಕಿ ಆತನನ್ನು ಆತನ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಅಲ್ಲದೇ, ಆಸ್ಪತ್ರೆಯ ದಾಖಲೆಗಳಿಂದ

ಸಂತ್ರಸ್ತೆಯ ದೂರವಾಣಿ ಸಂಖ್ಯೆ(Mobile number), ಕೇಸ್ ಶೀಟ್(Case sheet), ವಿಳಾಸ, ಮುಂತಾದ ಮಾಹಿತಿಯನ್ನು ಅಳಿಸಿ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ : ಬೆಳ್ತಂಗಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೆ ಬಲಿ! ಸಣ್ಣ ವಯಸ್ಸಿನವರಿಗೆ ದ.ಕ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಳ!

ಆದರೆ ಸಂತ್ರಸ್ತೆಯ ಹೆಸರು, ದಿನಾಂಕ ಸೇರಿದಂತೆ ಹಲವು ವಿವರಗಳು ಆಸ್ಪತ್ರೆ ಆವರಣದ ಕ್ಷ-ಕಿರಣ ವಿಭಾಗದ ದಾಖಲೆಗಳಲ್ಲಿ ಇವೆ. ಕತ್ತರಿ ಸ್ಪಷ್ಟವಾಗಿ ಎಕ್ಸ್-ರೇನಲ್ಲಿ ಗೋಚರಿಸಿದ್ದು, ಕತ್ತರಿ ಮರೆತ ಘಟನೆ

ರಜೆಯಲ್ಲಿ ಇದ್ದಿದ್ದರಿಂದ ಗಮನಕ್ಕೆ ಬಂದಿಲ್ಲ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆ ಅಧಿಕಾರಿಗಳು ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.

ರಶ್ಮಿತಾ ಅನೀಶ್

Exit mobile version