ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಮೂವರ ಸಾವು

 ಬೆಂಗಳೂರು ಸೆ 15 : ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಕಾರು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಮೆಲ್ಸೇತುವೆಯಿಂದ 30 ಅಡಿ ಕೆಳಗಿನ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿಯೂ ಮೃತಪಟ್ಟಿದ್ದು, ಮತ್ತೋರ್ವ ಸ್ಥಿತಿ ಗಂಭೀರವಾಗಿದೆ. ಎಲೆಕ್ಟ್ರಾನಿಕ್ ಸಿಟಿ‌ ಫ್ಲೈ ಓವರ್ ಮೇಲೆ‌ ಈ ದುರ್ಘಟನೆ ನಡೆದಿದ್ದು, ಕಾರು ಚಾಲಕನ ಓವರ್ ಸ್ಪೀಡ್ ಅಪಘಾತಕ್ಕೆ ಮೂಲ ಕಾರಣ ಎನ್ನಲಾಗಿದೆ.

ನಗರದ ಬೊಮ್ಮನಹಳ್ಳಿ ಸಮೀಪದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕಾರು ಮತ್ತು ಬೈಕ್ ಡಿವೈಡರ್ ಗುದ್ದಿದ ಪರಿಣಾಮ ಬೀಕರ ಅಪಘಾತ ಸಂಭವಿಸಿದೆ. ಓವರ್ ಟೇಕ್ ಮಾಡಲು ಹೋಗಿ ಅಪಘಾತವಾಗಿದ್ದು, ಫ್ಲೈ ಓವರ್ ಮೇಲಿಂದ ಬಿದ್ದು ಯುವಕ ಹಾಗೂ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪ್ಲೈ ಓವರ್ ಮೇಲೆ ಕಾರು ಡಿಕ್ಕಿಯ ರಭಸಕ್ಕೆ ದೇಹಗಳು ಕೆಳಗೆ ಬಿದ್ದು ಛಿದ್ರವಾಗಿವೆ.

ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಹೋಗುತ್ತಿದ್ದ ಬುಲೆಟ್ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮೇಲೆ ಬಂದಾಗ ಹಿಂಬದಿಯಿಂದ ಬಂದ ಬೊಲೆನೋ ಕಾರು ಸುಮಾರು 140-150 ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಮೇಲ್ಸೇತುವೆಯಿಂದ ಅಂದಾಜು 150 ಅಡಿಯಷ್ಟು ಮುಂದಕ್ಕೆ ಹಾರಿ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಇಬ್ಬರು ಇಬ್ಬರ ದೇಹಗಳು ಛಿದ್ರವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಬೈಕ್‌ನ ಎಲ್ಲ ಬಿಡಿ ಭಾಗಗಳೂ ಹಾನಿಯಾಗಿ ರಸ್ತೆಗೆ ಬಿದ್ದಿವೆ. ಕೋರಮಂಗಲದಲ್ಲಿ ನಡೆದ ಭೀಕರ ಕಾರು ಅಪಘಾತ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

Exit mobile version