ಮಹಿಷಾ ದಸರಾ ಮತ್ತು ಚಾಮುಂಡಿ ಚಲೋ (Chamundi Chalo) ಎರಡಕ್ಕೂ ಮೈಸೂರು ಪೊಲೀಸರು ಅನುಮತಿ (Actor Chethan abt Mahisha Dasara) ನೀಡಲು ನಿರಾಕರಿಸಿದ್ದಾರೆ.
ಪೊಲೀಸರ ಇಂತಹ ತಟಸ್ಥತೆಯು ದೋಷಪೂರಿತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮಹಿಷ ದಸರಾ (Mahisha Dasara) ನಡೆಸಲು ಅವಕಾಶ ನೀಡಬೇಕು ಎಂದು ನಟ ಹಾಗೂ
ಸಾಮಾಜಿಕ ಕಾರ್ಯಕರ್ತ (Actor Chethan abt Mahisha Dasara) ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಮಹಿಷಾ ದಸರಾ ಮತ್ತು ಚಾಮುಂಡಿ ಚಲೋ ಎರಡಕ್ಕೂ ಮೈಸೂರು (Mysore) ಪೊಲೀಸರು ಅನುಮತಿ
ನೀಡಲು ನಿರಾಕರಿಸಿದ್ದಾರೆ. ಪೊಲೀಸರ ಇಂತಹ ತಟಸ್ಥತೆಯು ದೋಷಪೂರಿತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮಹಿಷ ದಸರಾ ನಡೆಸಲು ಅವಕಾಶ ನೀಡಬೇಕು. ಚಾಮುಂಡಿ ಚಲೋ
ಸಂಘಟನೆಯ ಮುಖಂಡರು ಹಿಂಸಾಚಾರ ನಡೆಸುವುದಾಗಿ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಪೋಲಿಸರು ಕಾನೂನು ಕ್ರಮವನ್ನು ಕೈಗೊಳ್ಳಬೇಕು.
ಕಾನೂನಾತ್ಮಕವಾಗಿ/ಪ್ರಜಾಸತ್ತಾತ್ಮಕವಾಗಿ ಯಾವುದನ್ನು ಅನುಮತಿಸಲಾಗಬಹುದು ಮತ್ತು ಯಾವುದನ್ನು ಅನುಮತಿಸಲಾಗುವುದಿಲ್ಲ ಎಂಬುದರ ಕುರಿತು ಪೊಲೀಸರಿಗೆ ತರಬೇತಿಯ ಅಗತ್ಯವಿದೆ.
ಸಂಸದ ಪ್ರತಾಪ್ ಸಿಂಹ (Pratap Simha) ಅವರ ‘ಮಹಿಷ ದಸರಾ ಮಾಡುವವರನ್ನು ತುಳಿದು ಹಾಕುತ್ತೇವೆ’ಎಂಬ ಹೇಳಿಕೆ ಹಿಂಸಾಚಾರದ ಬೆದರಿಕೆ ಕರೆಯಾಗಿದ್ದು, ಹೀಗಾಗಿ ಸಂಸದ ಪ್ರತಾಪ್
ಸಿಂಹ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ಟೋಬರ್ (October) 13 ರಂದು ಮೈಸೂರಿನಲ್ಲಿ ನಮ್ಮ ಸಾಂಸ್ಕೃತಿಕ ವೈಭವವನ್ನು ಆಚರಿಸುವ ಎಲ್ಲರಿಗೂ ರಾಜ್ಯ ಸರ್ಕಾರ ಪೊಲೀಸ್
ರಕ್ಷಣೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ನಾಡಹಬ್ಬ ದಸರಾ (Dasara) ಅಕ್ಟೋಬರ್ 15ರಂದು ಉದ್ಘಾಟನೆಯಾಗಲಿದ್ದು, ಅದಕ್ಕೂ ಮುನ್ನವೇ ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ವಿಗ್ರಹಕ್ಕೆ ಮಾಲಾರ್ಪಣೆ
ಮಾಡುವ ಮೂಲಕ ಮಹಿಷಾ ದಸರಾ ಆಚರಣೆ ಮಾಡಲು ಕೆಲವು ಪ್ರಗತಿಪರರು ಮುಂದಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ
ಮೈಸೂರು-ಕೊಡಗು (Kodagu) ಸಂಸದ ಪ್ರತಾಪ್ ಸಿಂಹ, ಮಹಿಷಾ ದಸರಾ ಆಚರಣೆಯನ್ನು ವಿರೋಧಿಸಿ
ಅಕ್ಟೋಬರ್ 13ರಂದು ಚಾಮುಂಡಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಚಲೋ ಎರಡೂ
ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ಮೈಸೂರು ಪೊಲೀಸ್ ಕಮೀಷನರ್ (Police Commissioner) ತಿಳಿಸಿದ್ದಾರೆ.
ಇದನ್ನು ಓದಿ: ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿ ಎಂದು ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ: ಕರ್ನಾಟಕ ಹೈಕೋರ್ಟ್