Raju Srivastava : ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ!

New Delhi : ಆಗಸ್ಟ್ 10 ರಂದು ಬುಧವಾರ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ(Heart Attack) ಒಳಗಾದ ರಾಜು ಶ್ರೀವಾಸ್ತವ(Actor Raju Srivastava is no More) ಅವರು ಸತತ 58 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸುದೀರ್ಘ ಹೋರಾಟದ ಬಳಿಕ ಹಾಸ್ಯನಟ(Comedian) ರಾಜು ಶ್ರೀವಾಸ್ತವ ಇಂದು ಸೆಪ್ಟೆಂಬರ್ 21 ರಂದು ನಿಧನರಾದರು. ರಾಜು ಶ್ರೀವಾಸ್ತವ ಅವರು ಹೃದಯ ಸ್ತಂಭನದ ನಂತರ ತೀವ್ರ ಮಿದುಳಿನ ಹಾನಿಗೆ ಒಳಗಾಗಿದ್ದರು ಮತ್ತು ಆಗಸ್ಟ್ 10 ರಿಂದ ದೆಹಲಿಯ ಏಮ್ಸ್‌ನಲ್ಲಿ ಪ್ರಜ್ಞಾಹೀನರಾಗಿದ್ದರು ಮತ್ತು ವೈದ್ಯರ ತಪಾಸಣೆಯಲ್ಲಿದ್ದರು.

ಇದನ್ನೂ ಓದಿ : https://vijayatimes.com/benefits-of-vitamin-c/

ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಹಾಸ್ಯನಟನ ಪತ್ನಿ ಶಿಖಾ ಶ್ರೀವಾಸ್ತವ ಅವರೊಂದಿಗೆ ಮಾತನಾಡಿ, ಚಿಕಿತ್ಸೆಯಲ್ಲಿ ಅವರಿಗೆ ಬೇಕಾದ ಅಗತ್ಯ ಸಹಾಯವನ್ನು ನೀಡುವ ಭರವಸೆ ನೀಡಿದ್ದರು.

ರಾಜು ಅವರು ಜಿಮ್ ಅಭ್ಯಾಸದಲ್ಲಿ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ರಾಜು ಅವರ ತರಬೇತುದಾರರು ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿದ್ದರು.

ವೈದ್ಯರ ಚಿಕಿತ್ಸೆಯೊಂದಿಗೆ ಅವರ ಹೃದಯವನ್ನು ಪುನಶ್ಚೇತನಗೊಳಿಸಲು ಎರಡು ಬಾರಿ ಸಿಪಿಆರ್ ನಡೆಸಲಾಯಿತು. ಹೃದಯಾಘಾತದ ಸಂದರ್ಭದಲ್ಲಿ ರಾಜು ಶ್ರೀವಾಸ್ತವ ಅವರ ಮೆದುಳಿಗೆ ಹಾನಿ! ಹೃದಯ ಸ್ತಂಭನದ ಸಮಯದಲ್ಲಿ, ರಾಜು ಶ್ರೀವಾಸ್ತವ ಅವರ ಮೆದುಳಿಗೆ ಅಪಾರ ಹಾನಿಯಾಯಿತು ಎಂದು ವೈದ್ಯರು ತಿಳಿಸಿದರು.

ಸತತ ಪ್ರಯತ್ನಗಳು ಇಂದು ವಿಫಲವಾಗಿದ್ದು, ರಾಜು ಶ್ರೀವಾಸ್ತವ ಅವರು ನಿಧನರಾಗಿದ್ದಾರೆ. ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್, ಕಾಮಿಡಿ ಸರ್ಕಸ್, ದಿ ಕಪಿಲ್ ಶರ್ಮಾ ಶೋ, ಶಕ್ತಿಮಾನ್ ಮತ್ತು ಇತರ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದಾರೆ.

https://youtu.be/DLQccVhaFGY

ಮೈನೆ ಪ್ಯಾರ್ ಕಿಯಾ, ತೇಜಾಬ್, ಬಾಜಿಗರ್ ಸೇರಿದಂತೆ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದಾರೆ. ಇತ್ತೀಚೆಗೆ ಭಾರತದ ಲಾಫ್ಟರ್ ಚಾಂಪಿಯನ್‌ನಲ್ಲಿ ವಿಶೇಷ ಅತಿಥಿಯಾಗಿ ಕೂಡ ಕಾಣಿಸಿಕೊಂಡರು.
Exit mobile version