• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಸೇರಿಸುವುದು ಅಥವಾ ಬದಲಿಸುವುದು ಹೇಗೆ?

Rashmitha Anish by Rashmitha Anish
in ಡಿಜಿಟಲ್ ಜ್ಞಾನ
ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಸೇರಿಸುವುದು ಅಥವಾ ಬದಲಿಸುವುದು ಹೇಗೆ?
0
SHARES
370
VIEWS
Share on FacebookShare on Twitter

Tech News : ಭಾರತ ಸರ್ಕಾರವು ಭಾರತದ ನಿವಾಸಿಗಳಿಗೆ ನೀಡಿದ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ ಈ ಆಧಾರ್ ಕಾರ್ಡ್ (add mobile number aadhaar). ವಿಶಿಷ್ಟ ಗುರುತಿನ ಪ್ರಾಧಿಕಾರ

(UIDAI) 2009 ರಲ್ಲಿ ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ಪರಿಚಯಿಸಿತು. ಒಬ್ಬ ಭಾರತೀಯ ನಿವಾಸಿಯು ಆಧಾರ್ ಕಾರ್ಡ್ ಪಡೆಯಲು ಆತನ ಹೆಸರು,ಹುಟ್ಟಿದ ದಿನಾಂಕ, ವಿಳಾಸ, ಲಿಂಗ ನಿರ್ದಿಷ್ಟ

ಜನಸಂಖ್ಯಾ ಮತ್ತು ಬಯೋಮೆಟ್ರಿಕ್ (Biometric)ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಇದು ಮುಖ್ಯವಾಗಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ

add mobile number aadhaar

ಆಧಾರ್ ಕಾರ್ಡ್ ಬಹಳ ಅಗತ್ಯ ಇರುವ ದಾಖಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ . ಈ ಆಧಾರ್ ಕಾರ್ಡ್ ನಮ್ಮ ಅಡ್ರೆಸ್ ಪ್ರೂಫ್ (Address proof), ಐಡಿ ಪ್ರೂಫ್ (ID Proof),

ದಾಖಲೆ ಮಾತ್ರವಲ್ಲದೆ ಸರ್ಕಾರಿ ಯೋಜನೆಗಳ ಸೇವೆ ಪಡೆಯಲು ಇದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ ಸರ್ಕಾರಿ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಪ್ರವೇಶ ಪಡೆಯಲು, ಮೊಬೈಲ್ ಫೋನ್ ಮತ್ತು

ಸಿಮ್ ಕಾರ್ಡ್ ಸಕ್ರಿಯಗೊಳಿಸುವಿಕೆಗೆ, ಆದಾಯ ತೆರಿಗೆ ಮತ್ತು ಹಣಕಾಸಿನ ವಹಿವಾಟುಗಳನ್ನು ನಡೆಸಲು ಮತ್ತು ಡಿಜಿಟಲ್ ಗುರುತಿನ ಪರಿಶೀಲನೆ ಹಾಗೂ ಬ್ಯಾಂಕ್, ಗ್ಯಾಸ್ ಇತ್ಯಾದಿ ಖಾತೆಗಳಿಗೂ ಕೆವೈಸಿಗೆ

(KYC) ಆಧಾರ್ ಬೇಕು. ಆದ್ದರಿಂದ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಿರುವುದು ಬಹಳ ಪ್ರಯೋಜನ. ಆನ್ಲೈನ್ನಲ್ಲ ಸಹ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದು.

add mobile

ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಸೇರಿಸುವುದು ಅಥವಾ ನಂಬರ್ ಅಪ್ಡೇಟ್ ಮಾಡುವ ಕ್ರಮಗಳಿವು.

ಯಾವುದೇ ಸ್ಥಳದಲ್ಲಿರುವ ಅಥವಾ ನಿಮ್ಮ ವಾಸಸ್ಥಳದ ಸಮೀಪ ಎನ್ರೋಲ್ಮೆಂಟ್ ಸೆಂಟರ್ ಗೆ (Enrollment Center) ಅಥವಾ ಆಧಾರ್ ಸೇವಾ ಕೇಂದ್ರಕ್ಕೆ (Adhar Seva Kendra) ಹೋಗಿರಿ.

ಒಂದು ವೇಳೆ ನಿಮಗೆ ಈ ಆಧಾರ್ ಕೇಂದ್ರ ಎಲ್ಲಿದೆ ಎಂದು ತಿಳಿದಿಲ್ಲವಾದಲ್ಲಿ ಯುಐಡಿಎಐ ವೆಬ್ಸೈಟ್ (Website) ಇರುತ್ತದೆ ಇದರಲ್ಲಿ ಲೊಕೇಟ್ ಎನ್ರೋಲ್ಮೆಂಟ್ ಸೆಂಟರ್ (Locate enrollment centre)

ಎಂಬ ಆಯ್ಕೆ ಏರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ನಿಮ್ಮ ಸಮೀಪದ ಆಧಾರ್ ಕೇಂದ್ರವನ್ನು (add mobile number aadhaar) ತೋರಿಸುತ್ತದೆ.

ಇದನ್ನೂ ಓದಿ : ಆಧಾರ್- ಪ್ಯಾನ್​ನಲ್ಲಿ ಹೆಸರು,ಜನ್ಮದಿನಾಂಕ ಮ್ಯಾಚ್ ಆಗದೆ ಲಿಂಕ್ ಆಗುತ್ತಿಲ್ಲವೇ? ಐಟಿ ಇಲಾಖೆಯ ಈ ಸಲಹೆ ಪಾಲಿಸಿ

ಆಧಾರ್ ತಿದ್ದುಪಡಿ ಸೇವೆಯನ್ನು ನೀವು ಆಧಾರ್ ಎನ್ರೋಲ್ಮೆಂಟ್ ಸೆಂಟರ್ಗೆ ಹೋದರೆ ಅಲ್ಲಿರುವ ಸಿಬ್ಬಂದಿ ಮೂಲಕ ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ

ಇತರ ಪೂರಕ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಿ. ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಅಪ್ಡೇಟ್ (Update) ಮಾಡಬೇಕಾದಲ್ಲಿ ಅದಕ್ಕೆಂದು

ಫಾರ್ಮ್ ಕೊಡುತ್ತಾರೆ ಎಚ್ಚರಿಕೆಯಿಂದ ಅದನ್ನು ಭರ್ತಿ ಮಾಡಿ ಅರ್ಜಿ ತುಂಬಿಸಿ ನಂತರ ಅಲ್ಲಿರುವ ಹೆಲ್ಪ್ ಎಕ್ಸಿಕ್ಯೂಟಿವ್ಗೆ (Help Executive) ಕೊಡಿ.

ನೀವು ಭರ್ತಿ ಮಾಡಿ ಸಲ್ಲಿಸಿರುವ ಫಾರ್ಮ್ನಲ್ಲಿ ತುಂಬಿಸಲಾಗಿರುವ ಮಾಹಿತಿ ಎಲ್ಲವೂ ಸರಿ ಇದ್ದ ಬಳಿಕ ನಂತರವಷ್ಟೇ ಶುಲ್ಕ ಕಟ್ಟಲು ತಿಳಿಸಲಾಗುತ್ತದೆ. ಯಾವುದೇ ಸೇವೆಗೂ ಅಂದರೆ ಮೊಬೈಲ್

ನಂಬರ್ ಅಪ್ಡೇಟ್ ಮಾಡುವುದೂ ಸೇರಿ ಒಟ್ಟು 50 ರೂ ಮಾತ್ರ ಶುಲ್ಕ ಇರುತ್ತದೆ.ಸಿಬ್ಬಂದಿ ಬೇರೆ ಪಾವತಿ ಆಯ್ಕೆಗಳನ್ನು ಕೊಡಬಹುದು ಅಥವಾ ಕ್ಯಾಷ್ ಮೂಲಕ ಹಣ ಪಾವತಿಸಬಹುದು.

ನಿಮಗೆ ಅಪ್ಡೇಟ್ ರಿಕ್ವೆಸ್ಟ್ ನಂಬರ್ (ಯುಆರ್ಎನ್) ಸ್ಲಿಪ್ ಅನ್ನು ಶುಲ್ಕ ಕಟ್ಟಿದ ಬಳಿಕ ಕೊಡಲಾಗುತ್ತದೆ. ನಿಮ್ಮ ಮನವಿಯ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಈ ನಂಬರ್ ಮೂಲಕ ತಿಳಿಯಬಹುದು.

ನೀವು ನಿಮ್ಮ ಮನವಿಯ ಸ್ಥಿತಿ ನೋಡಬೇಕೆಂದರೆ ಯುಐಡಿಎಐನ ಮೈ ಆಧಾರ್ ಪೋರ್ಟಲ್ನಲ್ಲಿ(My Adhar Portal) ನಿಮಗೆ ‘ಚೆಕ್ ಎನ್ರೋಲ್ಮೆಂಟ್’ ಸೆಕ್ಷನ್ ಎಂಬ ಆಯ್ಕೆ ಏರುತ್ತದೆ

ಅದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಯುಆರ್ಎನ್ ನೀಡಿ ಸ್ಟೇಟಸ್ ಪರಿಶೀಲಿಸಬಹುದು.

ನೀವು ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಮನವಿ ಸಲ್ಲಿಸಿದ ನಂತರ ಅದು ಡಾಟಾ ಬೇಸ್ ನಲ್ಲಿ ಯಶಸ್ವಿಯಾಗಿ ಅಪ್ಡೇಟ್ ಆಗಬೇಕಾದರೆ ಒಟ್ಟು 90 ದಿನ ಬೇಕಾಗಬಹುದು.

ರಶ್ಮಿತಾ ಅನೀಶ್

Tags: aadhar pan linkaadharcardmobileupdate

Related News

ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಬಹುದು ಸಂಪೂರ್ಣ ಡೀಟೇಲ್ಸ್ ಇಲ್ಲಿದೆ
ಡಿಜಿಟಲ್ ಜ್ಞಾನ

ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಬಹುದು ಸಂಪೂರ್ಣ ಡೀಟೇಲ್ಸ್ ಇಲ್ಲಿದೆ

September 28, 2023
ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.
ಡಿಜಿಟಲ್ ಜ್ಞಾನ

ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.

September 27, 2023
ಯುಟ್ಯೂಬರ್‌ಗಳಿಗೆ ಗುಡ್‌ನ್ಯೂಸ್ ! ವಿಡಿಯೋ ಎಡಿಟಿಂಗ್ ಆ್ಯಪ್ ಬಿಡುಗಡೆ ಮಾಡಿದೆ ಯುಟ್ಯೂಬ್
ಡಿಜಿಟಲ್ ಜ್ಞಾನ

ಯುಟ್ಯೂಬರ್‌ಗಳಿಗೆ ಗುಡ್‌ನ್ಯೂಸ್ ! ವಿಡಿಯೋ ಎಡಿಟಿಂಗ್ ಆ್ಯಪ್ ಬಿಡುಗಡೆ ಮಾಡಿದೆ ಯುಟ್ಯೂಬ್

September 25, 2023
ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?
ಡಿಜಿಟಲ್ ಜ್ಞಾನ

ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?

September 23, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.