ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್(AadhaarPAN Name not matching) ಲಿಂಕ್ ಮಾಡಲು ಜೂನ್ 30 ಕೊನೆಯ ದಿನವಾಗಿದೆ. ಆಧಾರ್ ಜೊತೆ ಗಡುವಿನೊಳಗೆ ಲಿಂಕ್ ಆಗಿಲ್ಲದ ಪ್ಯಾನ್
ಕಾರ್ಡ್‌ಗಳು ಜುಲೈ 1ರ ನಂತರ ನಿಷ್ಕ್ರಿಯಗೊಳ್ಳಲಿವೆ ಒಂದು ವೇಳೆ ನೀವು ಬೇರಾವುದೇ ಹಣಕಾಸು ವಹಿವಾಟಿಗೆ ಮತ್ತು ಐಟಿ ರಿಟರ್ನ್ ಫೈಲ್ (IT Return File) ಮಾಡಲು ನಿಷ್ಕ್ರಿಯ ಪ್ಯಾನ್ ನಂಬರ್
ಬಳಸಿದರೆ, ದಂಡ ಹಾಕಬಹುದು.
ಬಹಳ ಮಂದಿ ಪ್ಯಾನ್ ಕಾರ್ಡ್ ದಾರರು ಆಧಾರ್ಗೆ ಗಡುವು ಹತ್ತಿರ ಬಂದಿದ್ದರೂ ಲಿಂಕ್ ಮಾಡಿಸಿಲ್ಲ. ಅಲ್ಲದೆ ಕೆಲವರು ಲಿಂಕ್ ಮಾಡಲು ಪ್ರಯತ್ನಿಸಿದರೂ ಕೂಡ ಬೇರೆ ಬೇರೆ ಕಾರಣಗಳಿಂದ ಆಧಾರ್ ಮತ್ತು
ಪ್ಯಾನ್ ಲಿಂಕ್ ಆಗುತ್ತಿಲ್ಲ. ಒಂದೇ ಪ್ಯಾನ್ ನಂಬರ್ ಒಬ್ಬರಿಗಿಂತ ಹೆಚ್ಚು ಮಂದಿಗೆ ಇಲಾಖೆಯ ದೋಷದಿಂದಲೇ (AadhaarPAN Name not matching) ಅಲಾಟ್ ಆಗಿದೆ

ಇದಲ್ಲದೆ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳಲ್ಲಿ ಇರುವ ಜನ್ಮದಿನಾಂಕ, ಹೆಸರು ಮೊದಲಾದ ಮಾಹಿತಿ ಹೊಂದಾಣಿಕೆ ಇಲ್ಲದ ಕಾರಣಕ್ಕೂ ಲಿಂಕ್ ಮಾಡಲು ಆಗುತ್ತಿಲ್ಲ ಎಂಬ ದೂರುಗಳಿವೆ. ಹೆಸರು, ಜನ್ಮದಿನಾಂಕ,
ಲಿಂಗ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಗಳು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಲ್ಲಿ ಹೊಂದಾಣಿಕೆ ಆಗದ ಕಾರಣ ಲಿಂಕ್ ಮಾಡಲು ಸಮಸ್ಯೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು
ಆದಾಯ ತೆರಿಗೆ ಇಲಾಖೆ ಸಲಹೆ ನೀಡಿದೆ. ಈ ಸಲಹೆ ಅನುಸರಿಸುವ ಮೂಲಕ ಸಮಸ್ಯೆ ಬಗೆಹರಿಸಬಹುದು.
ಆಧಾರ್ -ಪ್ಯಾನ್ ವಿವರಗಳು ಮ್ಯಾಚ್ ಆಗದಿದ್ದರೆ ಏನು ಮಾಡಬೇಕು?
ಆಧಾರ್ ಕಾರ್ಡ್‌ನಲ್ಲಿರುವ ಮತ್ತು ಪ್ಯಾನ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಅವಕಾಶವಿದೆ. ಮೊದಲು ಯಾವ ಕಾರ್ಡ್‌ನಲ್ಲಿ ಮಾಹಿತಿ ತಪ್ಪಾಗಿದೆ ಎಂಬುದನ್ನು ನೋಡಿ ಅದನ್ನು ಸರಿಪಡಿಸಿ.
ಪ್ಯಾನ್ ಕಾರ್ಡ್ ನಲ್ಲಿರುವ ಮಾಹಿತಿ ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಹೊಂದಿಕೆಯಾಗುವಂತೆ ಬದಲಾಯಿಸಲು ಪ್ಯಾನ್ ಪೋರ್ಟಲ್ ಗಳಲ್ಲಿ (Pan Portal) ಅವಕಾಶ ಇದೆ.

ಎರಡು ಪೋರ್ಟಲ್ ಗಳ URL ಹೀಗಿವೆ:
ಪ್ರೋಟಿಯಾನ್ ಪೋರ್ಟಲ್: www.onlineservices.nsdl.com/paam/endUserRegisterContact.html
ಯುಟಿಐಐಟಿಎಸ್ಎಲ್ ಪೋರ್ಟಲ್: www.pan.utiitsl.com
ಆಧಾರ್ ಕಾರ್ಡ್ ನಲ್ಲಿ ಮಾಹಿತಿ ಅಪ್ಡೇಟ್ ಮಾಡುವುದು ಹೇಗೆ?
ಒಂದು ವೇಳೆ ಪ್ಯಾನ್ ಕಾರ್ಡ್‌ನಲ್ಲಿರುವ ನಿಮ್ಮ ವಿವರ ಸರಿಯಾಗಿದ್ದು ಕಾರ್ಡ್‌ನಲ್ಲಿ ಮಾಹಿತಿ ಬದಲಾಯಿಸಬೇಕೆಂದಿದ್ದರೆ ಯುಐಡಿಎಐ ವೆಬ್ಸೈಟ್ ನಲ್ಲಿ ನಿಮಗೆ ಅವಕಾಶ ಇದೆ. ನೀವು ಡೆಮೋಗ್ರಾಫಿಕ್ ಮಾಹಿತಿಯನ್ನು
ಈ ವೆಬ್ ತಾಣಕ್ಕೆ ಲಾಗಿನ್ ಆಗಿ ಪರಿಷ್ಕರಿಸಬಹುದು. ಆಧಾರ್ ಕಾರ್ಡ್ನಲ್ಲಿರುವ ಅಥವಾ ಪ್ಯಾನ್ ಕಾರ್ಡ್ ಮಾಹಿತಿ ಪರಿಷ್ಕರಿಸಿದ ಬಳಿಕ ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ಪೋರ್ಟಲ್ ಗೆ ಹೋಗಿ
ಪ್ಯಾನ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲು ಪ್ರಯತ್ನಿಸಬಹುದು.
ಈ ಪೋರ್ಟಲ್ ಲಿಂಕ್ ಇಲ್ಲಿದೆ:
eportal.incometax.gov.in/iec/foservices/#/pre-login/bl-link-aadhaar
ಆದಾಯ ತೆರಿಗೆ ಪೋರ್ಟಲ್ ನಲ್ಲಿ ಒಂದು ವೇಳೆ ನೀವು ಪ್ಯಾನ್ ಮತ್ತು ಆಧಾರ್ ನಲ್ಲಿರುವ ಡೆಮಾಗ್ರಾಫಿಕ್ ಮಾಹಿತಿ ಸರಿಹೊಂದುವಂತೆ ಪರಿಷ್ಕರಿಸಿದ ಬಳಿಕವೂ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಲ್ಲಿ
ನೇರವಾಗಿ ಪ್ಯಾನ್ ಸೆಂಟರ್ಗೆ ಹೋಗಿ ಪ್ರಯತ್ನಿಸಬಹುದು.ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಅಂದರೆ ಪ್ಯಾನ್ ಕಾರ್ಡ್ ಸೇವೆ ಒದಗಿಸುವ ಯಾವುದಾದರೂ ಕೇಂದ್ರಕ್ಕೆ ಹೋಗಿ ಅಲ್ಲಿ ಆಧಾರ್
ಮತ್ತು ಪ್ಯಾನ್ ಲಿಂಕ್ ಮಾಡಬಹುದು. ಇದಕ್ಕೆ 50 ರೂ ಶುಲ್ಕ ಇರುತ್ತದೆ. ಇಲ್ಲಿ ಹೋಗುವಾಗ ನಿಮ್ಮ ಜೊತೆ ಪ್ಯಾನ್ ಮತ್ತು ಆಧಾರ್ ದಾಖಲೆಗಳು ಇರಲಿ.
ರಶ್ಮಿತಾ ಅನೀಶ್