ಬೆಂಗಳೂರು: ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಕರ್ನಾಟಕ ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡವರಿಗೆ ಶೇ 50 ರಷ್ಟು ರಿಯಾಯಿತಿಯನ್ನು
ಘೋಷಿಸಿದ ನಂತರ 22.49 ಲಕ್ಷ ರೂಪಾಯಿ ದಂಡವನ್ನು ಮೊದಲ ದಿನ ಸಂಗ್ರಹಿಸಿದ್ದಾರೆ. ಸರ್ಕಾರವು ಫೆಬ್ರವರಿ 11, 2023 ರಂದು (February) ಅಥವಾ ಅದಕ್ಕೂ ಮೊದಲು ದಾಖಲಾದ ಪ್ರಕರಣಗಳಿಗೆ
ರಿಯಾಯಿತಿಯನ್ನು ಘೋಷಿಸಿತ್ತು.ಅಷ್ಟೇ ಅಲ್ಲದೆ ಸೆಪ್ಟೆಂಬರ್ 9ರ ಗಡುವು ಕೂಡ ಬಾಕಿ ಇರುವ ದಂಡವನ್ನು ಪಾವತಿಸಲು ನೀಡಿದೆ.
ಒಟ್ಟು 22,49,600 ರೂಪಾಯಿ ದಂಡ ವಸೂಲಿ ನಿಯಮ ಉಲ್ಲಂಘಿಸಿದವರಿಂದ ಮಾಡಲಾಗಿದ್ದು,ಒಟ್ಟು 7,216 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ (KSP) ಮೊಬೈಲ್
ಅಪ್ಲಿಕೇಶನ್, ವೈಯಕ್ತಿಕ ಡಿಜಿಟಲ್ ಸಹಾಯಕ (PDA), ಬೆಂಗಳೂರು ಒನ್(Bengaluru One) ಮೂಲಕ ಮತ್ತು ಆಟೊಮೇಷನ್ ಕೇಂದ್ರಗಳ ಮೂಲಕ ನಿಯಮ ಉಲ್ಲಂಘಿಸಿದ ಜನರು ಬಾಕಿ ಪಾವತಿಸಿದ್ದಾರೆ
ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕರ್ನಾಟಕ ಸರ್ಕಾರವು ರಿಯಾಯಿತಿಯನ್ನು ನೀಡುತ್ತಿರುವುದು ಇದು ಮೂರನೇ ಬಾರಿ ಆಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಹಿಂದಿನ ಬಸವರಾಜ ಬೊಮ್ಮಾಯಿ
(Basavaraj Bommai) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಸರ್ಕಾರವು ಈ ರಿಯಾಯಿತಿಯನ್ನು ಮೊದಲ ಬಾರಿಗೆ ಘೋಷಿಸಿತ್ತು. ಬಾಕಿ ಉಳಿದಿರುವ 120 ಕೋಟಿ ರೂ. ದಂಡ ಇದರಿಂದ
ಸಂಗ್ರಹವಾಗಿತ್ತು. ಬಳಿಕ ಮತ್ತೆ 15 ದಿನಗಳ ಕಾಲ ಮಾರ್ಚ್ನಲ್ಲಿ ರಿಯಾಯಿತಿ ನೀಡಲಾಗಿತ್ತು.
ರಿಯಾಯಿತಿಯನ್ನು ಹೇಗೆ ಪಡೆಯಬಹುದು ಮತ್ತು ರಿಯಾಯಿತಿಯೊಂದಿಗೆ ದಂಡವನ್ನು ಹೇಗೆ ಪಾವತಿಸಬಹುದು ಎಂಬ ಮಾಹಿತಿ ಇಲ್ಲಿದೆ.
- ಬಾಕಿ ಪಾವತಿಯನ್ನು ಬೆಂಗಳೂರು ಒನ್ ವೆಬ್ಸೈಟ್ಗೆ(Website) ಅಥವಾ ಕರ್ನಾಟಕ ಒನ್ ವೆಬ್ಸೈಟ್ಗೆ(Karnataka One Website) ಲಾಗ್ ಇನ್ ಆಗಿ, ವಾಹನದ ನೋಂದಣಿ
ಸಂಖ್ಯೆಯ ವಿವರಗಳನ್ನು ನಮೂದಿಸುವ ಮೂಲಕ ಮಾಡಬಹುದು. - ಕರ್ನಾಟಕ ರಾಜ್ಯ ಪೊಲೀಸ್ (KSP) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
- ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಭೇಟಿ ನೀಡುವ ಮೂಲಕ ದಂಡ ಪಾವತಿಸಬಹುದು
- ಬಾಕಿ ಇರುವ ಅಪರಾಧಗಳ ವಿವರಗಳನ್ನು ಇನ್ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ಗೆ(Traffic Management Centre) ಭೇಟಿ ನೀಡಿ ಪಡೆದು ನಂತರ ದಂಡವನ್ನು ಪಾವತಿಸಬಹುದು.
ಬೆಂಗಳೂರು ಸಂಚಾರ ಪೊಲೀಸರು ಜುಲೈ 6 ಮತ್ತು ಸೆಪ್ಟೆಂಬರ್ 9 ರ ನಡುವೆ ಬಾಕಿಯನ್ನು ಪಾವತಿಸಬಹುದು ಎಂದು ತಿಳಿಸಿದ್ದಾರೆ. 080-22942883 ಅಥವಾ 080-22943381 ಅನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಎಂದೂ ಅವರು ಹೇಳಿದ್ದಾರೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ರಶ್ಮಿತಾ ಅನೀಶ್