ಆಗ್ರಾ ಮಸೀದಿಯಲ್ಲಿ ಸಮಾಧಿ ಮಾಡಿರುವ ಹಿಂದೂ ದೇವತೆಗಳ ವಿಗ್ರಹಗಳ ಕುರಿತು ಕೇಂದ್ರ, ಎಎಸ್‌ಐಗೆ ನೋಟಿಸ್!

ಗುರುವಾರ, ಆಗ್ರಾ ಮಸೀದಿಯ(Agra Mosque) ಮೆಟ್ಟಿಲುಗಳ ಅಡಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಪ್ರತಿಪಾದಿಸುವ ಹಿಂದೂ ದೇವತೆಗಳ ವಿಗ್ರಹಗಳನ್ನು(Hindu god Idols) ಸ್ಥಳಾಂತರಿಸುವಂತೆ ಅರ್ಜಿದಾರರ ಗುಂಪೊಂದು ಕೇಂದ್ರ(Center) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಕಾನೂನು ನೋಟಿಸ್ ಕಳುಹಿಸಿದೆ.

ಶಾಹಿ ಈದ್ಗಾ ಮಸೀದಿ-ಶ್ರೀ ಕೃಷ್ಣ ಜನ್ಮಭೂಮಿ ವಿವಾದದ ಮೊಕದ್ದಮೆಯಲ್ಲಿ ಅರ್ಜಿದಾರರು ಕಳುಹಿಸಿರುವ ನೋಟಿಸ್‌ನಲ್ಲಿ ಮೆಟ್ಟಿಲುಗಳ ಮೇಲೆ ಸಾರ್ವಜನಿಕರ ಓಡಾಟವನ್ನು ತಕ್ಷಣವೇ ನಿಲ್ಲಿಸಬೇಕು. ಸಿವಿಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 80ರ ಅಡಿಯಲ್ಲಿ ನೋಟಿಸ್‌ಗಳನ್ನು ಕಳುಹಿಸಲಾಗಿದ್ದು, ಅದರ ಅಡಿಯಲ್ಲಿ ಪಕ್ಷಗಳು 60 ದಿನಗಳ ಒಳಗೆ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ತಿಳಿಸಿದೆ.

ಮಥುರಾದ ಕೇಶವ್ ದೇವ್ ದೇವಸ್ಥಾನದಿಂದ ತೆಗೆದ ಬೆಲೆಬಾಳುವ ವಿಗ್ರಹಗಳನ್ನು ಮೊಘಲ್ ಚಕ್ರವರ್ತಿ(Mughal Emperor) ಔರಂಗಜೇಬ್(Aurangazeb) ಅವರು 1670 ರಲ್ಲಿ ಆಗ್ರಾದ ಬೇಗಂ ಸಾಹಿಬಾ ಮಸೀದಿ ಮಸೀದಿಯ ಮೆಟ್ಟಿಲುಗಳ ಕೆಳಗೆ ಹೂಳಿದರು, ಅವರು 1670 ರಲ್ಲಿ ದೇವಾಲಯವನ್ನು ನಾಶಪಡಿಸಿದರು ಎಂದು ಅರ್ಜಿದಾರರು ಹೇಳುತ್ತಾರೆ. “ನಿಗದಿತ ಸಮಯದೊಳಗೆ ದೇವತೆಗಳನ್ನು ಸ್ಥಳಾಂತರಿಸಿ, ವಿಫಲವಾದರೆ ಅವರು ವೆಚ್ಚವನ್ನು ಭರಿಸಲು ಜವಾಬ್ದಾರರಾಗಿರುತ್ತಾರೆ” ಎಂದು ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರಕ್ಕೆ ನೋಟೀಸ್ ಕಳುಹಿಸಲಾಗಿದೆ. ನಿರ್ದೇಶಕರು, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ, ನವದೆಹಲಿ, ಅಧೀಕ್ಷಕರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆಗ್ರಾ, ಮತ್ತು ನಿರ್ದೇಶಕರು, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ, ಮಥುರಾ. ಇಷ್ಟು ಇಲಖೆಗಳಿಗೂ ನೋಟಿಸ್ ರವಾನಿಸಲಾಗಿದೆ.

Exit mobile version