ಲೇಟಾಗಿ ಬಂದ ರಾಜ್ಯಪಾಲ ಗೆಹ್ಲೋಟ್ ಅವರನ್ನೇ ಬಿಟ್ಟು ಹೊರಟ ವಿಮಾನ : ದೂರು ದಾಖಲಿಸಿದ ರಾಜಭವನ

Bengaluru: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಬೆಂಗಳೂರಿನಿಂದ ಜುಲೈ 27 ರಂದು ಹೈದರಾಬಾದ್ ಗೆ (airasia flight left Governor)

ಪ್ರಯಾಣ ಮಾಡಬೇಕಿದ್ದರು ಆದರೆ ಅವರು ವಿಮಾನದ ದ್ವಾರದ ಬಳಿಗೆ ಲೇಟಾಗಿ ಬಂದರೆಂಬ ಕಾರಣಕ್ಕೆ ಖಾಸಗಿ ವಿಮಾನವೊಂದು ಅವರನ್ನು ಬಿಟ್ಟು ಹೈದರಾಬಾದ್ (Hyderabad) ಪ್ರಯಾಣ ಶುರುಮಾಡಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ಆರೋಪ ಮಾಡಿರುವ ರಾಜಭವನದ ಸಿಬ್ಬಂದಿ, ದೂರು ದಾಖಲಿಸಿದೆ. ವಿಮಾನ ಸೇವಾ

ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ (airasia flight left Governor) ಆಗ್ರಹಿಸಿದೆ.

ಇವರು ಕಾರ್ಯನಿಮಿತ್ತ ಜುಲೈ (July) 27 ರಂದು ಹೈದರಾಬಾದ್ ಗೆ ಪ್ರಯಾಣಿಸಲಿದ್ದು, ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ 10 ನಿಮಿಷ ತಡವಾಗಿ ಬಂದಿದ್ದಾರೆ ಎಂದು ಅವರನ್ನು ಕರೆದೊಯ್ಯಬೇಕಿದ್ದ ವಿಮಾನವೊಂದು

ಕುಂಟು ನೆಪ ಹೇಳಿ ಬಿಟ್ಟು ಹೊರಟಿತ್ತು. ಆದರೆ ರಾಜ್ಯಪಾಲರು ವಿಮಾನದ ದ್ವಾರದ ಸಮೀಪಕ್ಕೆ ಬರಲು ಕೇವಲ 1 ನಿಮಿಷ ತಡವಾಗಿದ್ದಕ್ಕೆ ಅವರನ್ನು ಬಿಟ್ಟು ವಿಮಾನ ತೆರಳಿದೆ ಎಂದು ಕೆಲವು ಮೂಲಗಳು ಹೇಳಿವೆ.

ಅಲ್ಲದೆ ರಾಜ್ಯಪಾಲರು ಬೋರ್ಡಿಂಗ್ (Boarding) ಮಾಡಲಿದ್ದಾರೆಂಬ ಮಾಹಿತಿಯಿದ್ದೂ ಈ ರೀತಿ ಮಾಡಲಾಗಿದೆ. ಇದು ರಾಷ್ಟ್ರಪತಿ, ಸುಪ್ರೀಂ ಕೋರ್ಟ್ (Supreme Court) ನ ಮುಖ್ಯ ನ್ಯಾಯಮೂರ್ತಿ, ಉಪರಾಷ್ಟ್ರಪತಿ,

ಪ್ರಧಾನಮಂತ್ರಿ, ಕೇಂದ್ರ ಸಚಿವರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗಾಗಿ ರೂಪಿಸಲಾಗಿರುವ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಈ ಕಾರಣಕ್ಕಾಗಿ, ವಿಮಾನಯಾನ ಸೇವಾ ಸಂಸ್ಥೆಯ

ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಆ ಖಾಸಗಿ ವಿಮಾನ ಸೇವಾ ಸಂಸ್ಥೆಯ ವಿರುದ್ಧ ದೂರಿನ ಆಧಾರದ ಮೇಲೆ ಎಫ್ಐಆರ್ (FIR) ದಾಖಲಿಸಿರುವ ವಿಮಾನ ನಿಲ್ದಾಣದ ಪೊಲೀಸರು, ತನಿಖೆ ಆರಂಭಿಸಿದ್ದು, ಜು.27ರಂದು ವಿಮಾನ ಬಿಟ್ಟು ಹೋರಟ

ಕಾರಣಕ್ಕೆ 20 ನಿಮಿಷಗಳ ನಂತರ ರಾಜ್ಯಪಾಲರನ್ನು ಬೇರೊಂದು ವಿಮಾನದ ಮೂಲಕ ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಈ ಎಲ್ಲದರ ಬಗ್ಗೆ ಪೊಲೀಸರು (Police) ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.

ಶಿಷ್ಟಾಚಾರ:
ಸಾಮಾನ್ಯವಾಗಿ, ವಿಮಾನ ನಿಲ್ದಾಣಗಳಲ್ಲಿ ವಿಮಾನಕ್ಕಾಗಿ ಕಾಯಲು ಇರುವ ಲಾಂಜ್ ಗಳಲ್ಲಿ ರಾಜ್ಯಪಾಲರಂಥ ವಿವಿಐಪಿಗಳಿಗೆ (V.V.I.P) ಕುಳಿತುಕೊಳ್ಳುವ ಅವಕಾಶ ಇರುವುದಿಲ್ಲ. ಇವರನ್ನು ವಿವಿಐಪಿಗಳಿಗಾಗಿ

ಪ್ರತ್ಯೇಕವಾಗಿರುವ ಸೆರೆಮೊನಿಯಲ್ ಲಾಂಜ್ (Lounge) ಎಂಬಲ್ಲಿ ಕೂರಿಸಲಾಗುತ್ತದೆ. ಯಾವುದೇ ತಪಾಸಣೆ ಇವರಿಗೆ ಇರುವುದಿಲ್ಲ.

ಆದರೆ ರಾಜ್ಯಪಾಲರಂಥ ವಿವಿಐಪಿಗಳನ್ನು ಕೂರಿಸಲಾಗಿರುವ ಸೆರೆಮೊನಿಯಲ್ ಲಾಂಜ್ ನಿಂದ ನೇರವಾಗಿ ವಿಮಾನ ಟೇಕಾಫ್ ಆಗುವ ಸ್ಥಳಕ್ಕೆ ಕರೆದೊಯ್ದು ವಿಮಾನದ ಬಾಗಿಲ ಬಳಿಯೇ ಇಳಿಸಿ ಅವರನ್ನು ಅಲ್ಲಿಯೇ

ವಿಮಾನ ಹತ್ತಿಸಲಾಗುತ್ತದೆ. ಇನ್ನು ಸಾಮಾನ್ಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ತಮ್ಮೆಲ್ಲಾ ಲಗೇಜು ತಪಾಸಣೆ, ತಮ್ಮ ತಪಾಸಣೆಯಂಥ ಕಡ್ಡಾಯ ಪರಿಶೀಲನೆಗಳನ್ನು ಮುಗಿಸಿಕೊಂಡು ಬೋರ್ಡಿಂಗ್ ಗೇಟ್

(Boarding Gate) ಮೂಲಕ ಹೋಗಿ ವಿಮಾನ ಹತ್ತಬೇಕಾಗುತ್ತದೆ. ಇನ್ನು ಉಳಿದೆಲ್ಲಾ ಪ್ರಯಾಣಿಕರು ವಿಮಾನ ಹತ್ತಿದ ನಂತರವೇ ಕೊನೆಯದಾಗಿ ರಾಜ್ಯಪಾಲರನ್ನು ( ವಿವಿಐಪಿಯನ್ನು) ವಿಮಾನ ಹತ್ತಿಸಲಾಗುತ್ತದೆ.

ವಿವಾದಕ್ಕೆ ಕಾರಣ:
ಇವರ ವಿಚಾರದಲ್ಲಿ ಸೆರೆಮೊನಿಯಲ್ (Ceremonial ) ಲಾಂಜ್ ನಿಂದ ವಿಮಾನದ ಹತ್ತಿರಕ್ಕೆ ಥಾವರ್ ಚಂದ್ ಗೆಹ್ಲೋಟ್ ಅವರು ಹೋಗುವಾಗ ವಿಮಾನದ ದ್ವಾರ ಇನ್ನೂ ತೆಗೆದಿತ್ತು. ಆದ್ರೆ ಇನ್ನೇನು

ವಿಮಾನ ಹತ್ತಿರ ಹೋಗಬೇಕು ಅನ್ನುವಷ್ಟರಲ್ಲೇ ಬಾಗಿಲನ್ನು ಮುಚ್ಚಿದ ಪೈಲಟ್ ಗಳು (Pilot) ವಿಮಾನವನ್ನು ಟೇಕಾಫ್ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಲು ಪ್ರಮುಖ ಅಂಶವಾಗಿದೆ.

ಭವ್ಯಶ್ರೀ ಆರ್.ಜೆ

Exit mobile version